ಆರೋಗ್ಯ ವಿಮೆ ಖರೀದಿ: 65 ವರ್ಷಗಳ ವಯಸ್ಸಿನ ಮಿತಿಯನ್ನು ತೆಗೆದುಹಾಕಿದ IRDAI

ಆರೋಗ್ಯ ವಿಮೆ ಪಾಲಿಸಿಗಳನ್ನು ಖರೀದಿಸುವ ವ್ಯಕ್ತಿಗಳಿಗೆ 65 ವರ್ಷಗಳ ಮಿತಿಯನ್ನು ವಿಮಾ ನಿಯಂತ್ರಕ IRDAI ತೆಗೆದುಹಾಕಿದೆ. ಮಾರುಕಟ್ಟೆ ವಿಸ್ತರಣೆ ಮತ್ತು ಆರೋಗ್ಯ ವೆಚ್ಚಗಳಿಂದ ಸಾಕಷ್ಟು ರಕ್ಷಣೆ ಉತ್ತೇಜಿಸುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಆರೋಗ್ಯ ವಿಮೆ ಪಾಲಿಸಿಗಳನ್ನು ಖರೀದಿಸುವ ವ್ಯಕ್ತಿಗಳಿಗೆ 65 ವರ್ಷಗಳ ಮಿತಿಯನ್ನು ವಿಮಾ ನಿಯಂತ್ರಕ IRDAI ತೆಗೆದುಹಾಕಿದೆ. ಮಾರುಕಟ್ಟೆ ವಿಸ್ತರಣೆ ಮತ್ತು ಆರೋಗ್ಯ ವೆಚ್ಚಗಳಿಂದ ಸಾಕಷ್ಟು ರಕ್ಷಣೆ ಉತ್ತೇಜಿಸುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಆರೋಗ್ಯ ವಿಮಾ ಯೋಜನೆಗಳನ್ನು ಖರೀದಿಸಲು ಗರಿಷ್ಠ ವಯಸ್ಸಿನ ನಿರ್ಬಂಧವನ್ನು ರದ್ದುಗೊಳಿಸುವ ಮೂಲಕ ಅನಿರೀಕ್ಷಿತ ವೈದ್ಯಕೀಯ ವೆಚ್ಚಗಳ ವಿರುದ್ಧ ಸಾಕಷ್ಟು ರಕ್ಷಣೆ ಖಾತ್ರಿಪಡಿಸುವ ಹಾಗೂ ಹೆಚ್ಚು ಅಂತರ್ಗತ ಮತ್ತು ಸೂಕ್ತ ಆರೋಗ್ಯ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಹಿಂದಿನ ಮಾರ್ಗಸೂಚಿಗಳ ಪ್ರಕಾರ, 65 ವರ್ಷ ವಯಸ್ಸಿನ ವ್ಯಕ್ತಿಗಳು ಮಾತ್ರ ಹೊಸ ವಿಮಾ ಪಾಲಿಸಿ ಖರೀದಿಸಲು ಅನುಮತಿಸಲಾಗಿದೆ. ಆದಾಗ್ಯೂ, ಏಪ್ರಿಲ್ 1 ರಿಂದ ಜಾರಿಗೆ ಬಂದ ಇತ್ತೀಚಿನ ತಿದ್ದುಪಡಿಯೊಂದಿಗೆ ವಯಸ್ಸಿನ ಹೊರತಾಗಿಯೂ ಯಾರಾದರೂ ಹೊಸ ಆರೋಗ್ಯ ವಿಮಾ ಪಾಲಿಸಿ ಖರೀದಿಸಲು ಅರ್ಹರಾಗಿರುತ್ತಾರೆ.

"ವಿಮಾದಾರರು ಎಲ್ಲಾ ವಯೋಮಾನದವರಿಗೆ ಆರೋಗ್ಯ ವಿಮೆ ಒದಗಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ವಿಮಾದಾರರು ವಿಶೇಷವಾಗಿ ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ಮಕ್ಕಳು, ಹೆರಿಗೆ, ಮತ್ತು ಸಮರ್ಥರಿಂದ ನಿರ್ದಿಷ್ಟಪಡಿಸಿದ ಯಾವುದೇ ಇತರ ಗುಂಪುಗಳಿಗೆ ಯೋಜನೆಗಳನ್ನು ವಿನ್ಯಾಸಗೊಳಿಸಬಹುದು. ಇದಲ್ಲದೆ ಪೂರ್ವದಲ್ಲಿಯೇ ಯಾವುದೇ ರೀತಿಯ ಕಾಯಿಲೆ ಹೊಂದಿರುವ ವ್ಯಕ್ತಿಗಳಿಗೆ ವಿಮಾದಾರರರು ಕಡ್ಡಾಯವಾಗಿ ಆರೋಗ್ಯ ಪಾಲಿಸಿ ನೀಡಬೇಕೆಂದು ಇತ್ತೀಚಿನ ಗೆಜೆಟ್ ಅಧಿಸೂಚನೆಯಲ್ಲಿ IRDAI ಹೇಳಿದೆ.

ಸಾಂದರ್ಭಿಕ ಚಿತ್ರ
ಗುಡ್ ನ್ಯೂಸ್: ಆರೋಗ್ಯ ವಿಮೆ ಪಾಲಿಸಿಗಳಲ್ಲಿ ಕವರ್‌ ಆಗಲಿದೆ 'ಬಾಡಿಗೆ ತಾಯ್ತನ'!

ವಿಮೆದಾರರು ಕ್ಯಾನ್ಸರ್, ಹೃದಯ ಅಥವಾ ಮೂತ್ರಪಿಂಡ ವೈಫಲ್ಯ, ಮತ್ತು ಏಡ್ಸ್‌ನಂತಹ ತೀವ್ರ ಕಾಯಿಲೆಗಳಿರುವ ವ್ಯಕ್ತಿಗಳಿಗೆ ಪಾಲಿಸಿ ನೀಡಲು ನಿರಾಕರಿಸುವುದನ್ನು ನಿಷೇಧಿಸಲಾಗಿದೆ. ಅಧಿಸೂಚನೆಯ ಪ್ರಕಾರ, ಪಾಲಿಸಿದಾರರ ಅನುಕೂಲಕ್ಕಾಗಿ ವಿಮಾದಾರರು ಕಂತುಗಳಲ್ಲಿ ಪ್ರೀಮಿಯಂ ಪಾವತಿಗೆ ಅನುಮತಿಸಲಾಗಿದೆ. ಪ್ರಯಾಣ ಪಾಲಿಸಿಗಳನ್ನು ಸಾಮಾನ್ಯ ಮತ್ತು ಆರೋಗ್ಯ ವಿಮಾದಾರರು ಮಾತ್ರ ನೀಡಬಹುದು ಎಂದು ಅದು ಹೇಳಿದೆ.

ಆಯುಷ್ ಚಿಕಿತ್ಸೆಯ ವ್ಯಾಪ್ತಿಗೆ ಯಾವುದೇ ಮಿತಿಯಿಲ್ಲ. ಆಯುರ್ವೇದ, ಯೋಗ, ನ್ಯಾಚುರೋಪತಿ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿಯಂತಹ ವ್ಯವಸ್ಥೆಗಳ ಅಡಿಯಲ್ಲಿ ಚಿಕಿತ್ಸೆಗಳು ಯಾವುದೇ ಮಿತಿಯಿಲ್ಲದೆ ವಿಮಾ ಮೊತ್ತದವರೆಗೆ ಕವರೇಜ್ ಪಡೆಯುತ್ತವೆ. ಲಾಭ-ಆಧಾರಿತ ಪಾಲಿಸಿಗಳನ್ನು ಹೊಂದಿರುವ ಪಾಲಿಸಿದಾರರು ವಿವಿಧ ವಿಮೆದಾರರೊಂದಿಗೆ ಬಹು ಕ್ಲೈಮ್‌ಗಳನ್ನು ಸಲ್ಲಿಸಬಹುದು, ನಮ್ಯತೆ ಮತ್ತು ಆಯ್ಕೆಗಳನ್ನು ಹೆಚ್ಚಿಸಬಹುದು ಎಂದು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com