
ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಲ್ಲಿ ಶೇ.7.5 ರಷ್ಟು ಹೆಚ್ಚಳವಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
2024-25 ನೇ ಸಾಲಿನಲ್ಲಿ ಜು.31 ವರೆಗೆ ಸಲ್ಲಿಕೆಯಾದ ಐಟಿಆರ್ ಗಳ ಸಂಖ್ಯೆ 7.28 ಕೋಟಿ ದಾಟಿದ್ದು ಇದು ದಾಖಲೆಯ ಪ್ರಮಾಣದ ಸಲ್ಲಿಕೆಯಾಗಿದೆ ಎಂದು ಐಟಿ ಮಾಹಿತಿ ನೀಡಿದೆ.
2023 ರಲ್ಲಿ ಒಟ್ಟು 6.77 ಕೋಟಿ ಐಟಿಆರ್ ಸಲ್ಲಿಕೆಯಾಗಿತ್ತು. ತೆರಿಗೆಪಾವತಿಸುವವರು ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಟ್ಯಾಕ್ಸ್ ರಿಜಿಮ್ ನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಒಟ್ಟಾರೆ ಸಲ್ಲಿಕೆಯಾಗಿರುವ 7.28 ಕೋಟಿ ತೆರಿಗೆ ರಿಟರ್ನ್ಸ್ ನ ಪೈಕಿ 2.01 ಕೋಟಿ ಐಟಿಆರ್ ಗಳು ಹಳೆಯ ಟ್ಯಾಕ್ಸ್ ರಿಜಿಮ್ ನಲ್ಲಿ ಸಲ್ಲಿಕೆಯಾಗಿದ್ದರೆ, 5.27 ಕೋಟಿ ಐಟಿಆರ್ ಗಳು ಹೊಸ ಟ್ಯಾಕ್ಸ್ ರಿಜಿಮ್ ನಲ್ಲಿ ಸಲ್ಲಿಕೆಯಾಗಿದೆ. ಶೇ.72ರಷ್ಟು ಮಂದಿ ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಂಡಿದ್ದರೆ, ಶೇ.28ರಷ್ಟು ಮಂದಿ ಹಳೆಯ ತೆರಿಗೆ ಪದ್ಧತಿಯಲ್ಲೇ ಮುಂದುವರಿದಿದ್ದಾರೆ.
ಒಂದೇ ದಿನದಲ್ಲಿ 69.92 ಲಕ್ಷ ಐಟಿಆರ್‌ಗಳನ್ನು ಸಲ್ಲಿಸುವುದರೊಂದಿಗೆ ಜುಲೈ 31 ರಂದು ಐಟಿಆರ್‌ಗಳ ಫೈಲಿಂಗ್ ಗರಿಷ್ಠ ಮಟ್ಟವನ್ನು ತಲುಪಿದೆ (ಸಂಬಳ ಪಡೆಯುವ ತೆರಿಗೆದಾರರು ಮತ್ತು ಇತರ ತೆರಿಗೆಯೇತರ ಆಡಿಟ್ ಪ್ರಕರಣಗಳಿಗೆ ಅಂತಿಮ ದಿನಾಂಕ). ಇ-ಫೈಲಿಂಗ್ ಪೋರ್ಟಲ್ ಜುಲೈ 31 ರಂದು ಸಂಜೆ 7 ರಿಂದ 8 ರವರೆಗೆ ಪ್ರತಿ ಗಂಟೆಗೆ 5.07 ಲಕ್ಷ ITR ಫೈಲಿಂಗ್ ದರವನ್ನು ಕಂಡಿದೆ. ITR ಫೈಲಿಂಗ್‌ನ ಪ್ರತಿ ಸೆಕೆಂಡಿಗೆ ಅತ್ಯಧಿಕ ದರ 917 (17.07.2024, 08:13:54 am) ಮತ್ತು ಐಟಿಆರ್ ಫೈಲಿಂಗ್‌ನ ಪ್ರತಿ ನಿಮಿಷಕ್ಕೆ ಅತ್ಯಧಿಕ ದರ 9,367 (ರಾತ್ರಿ 8:08) ದಾಖಲಾಗಿದೆ.
Advertisement