ನವದೆಹಲಿ: ಸಗಟು ಹಣದುಬ್ಬರ 3 ತಿಂಗಳಲ್ಲಿ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಜುಲೈ ತಿಂಗಳಲ್ಲಿ 2.04 ರಷ್ಟು ದಾಖಲಾಗಿದೆ. ಆಹಾರ ಪದಾರ್ಥಗಳಲ್ಲಿ, ಪ್ರಮುಖವಾಗಿ ತರಕಾರಿಗಳ ಬೆಲೆ ಇಳಿಕೆಯಾಗಿರುವುದರಿಂದ ಸಗಟು ಹಣದುಬ್ಬರ ಇಳಿಕೆಯಾಗಿದೆ ಎಂದು ಸರ್ಕಾರದ ಡೇಟಾ ಮೂಲಕ ತಿಳಿದುಬಂದಿದೆ.
ಡಬ್ಲ್ಯುಪಿಐ ಆಧಾರಿತ ಹಣದುಬ್ಬರ ಜೂನ್ ತಿಂಗಳವರೆಗೂ ಏರುಗತಿಯಲ್ಲಿ ಶೇ.3.36 ರಷ್ಟಿತ್ತು. ಕಳೆದ ವರ್ಷ ಜುಲೈ ನಲ್ಲಿ ಸಗಟು ಹಣದುಬ್ಬರ (-)1.23 ರಷ್ಟಿತ್ತು ಎಂಬುದು ಗಮನಾರ್ಹ
ಏಪ್ರಿಲ್‌ನಲ್ಲಿ ಸಗಟು ಹಣದುಬ್ಬರವು ಶೇಕಡಾ 1.19 ರಷ್ಟಿತ್ತು. ಅಂಕಿ-ಅಂಶಗಳ ಪ್ರಕಾರ, ಜೂನ್ ನಲ್ಲಿ ಶೇ.10.87 ರಷ್ಟಿದ್ದ ಆಹಾರ ಹಣದುಬ್ಬರ ಜುಲೈನಲ್ಲಿ ಶೇ. 3.45 ರಷ್ಟಾಗಿದೆ. ಮುಖ್ಯವಾಗಿ ತರಕಾರಿಗಳು, ಧಾನ್ಯಗಳು, ಬೇಳೆಕಾಳುಗಳು ಮತ್ತು ಈರುಳ್ಳಿ ಬೆಲೆಯಲ್ಲಿ ಒಂದು ತಿಂಗಳ ಕುಸಿತ ಜುಲೈನಲ್ಲಿ ಶೇ.8.93 ರ ಹಣದುಬ್ಬರವಿಳಿತವನ್ನು ದಾಖಲಿಸಿವೆ.
Advertisement