7 ಬಿಲಿಯನ್ ಡಾಲರ್ ಗಳಿಕೆ: 681.69 ಬಿಲಿಯನ್ ಡಾಲರ್ ಗೆ ತಲುಪಿದ ವಿದೇಶಿ ವಿನಿಮಯ ಮೀಸಲು
ಮುಂಬೈ: ಭಾರತದ ವಿದೇಶಿ ವಿನಿಮಯ ಮೀಸಲಿನಲ್ಲಿ 7.02 ಬಿಲಿಯನ್ ಡಾಲರ್ ಗಳಿಕೆಯಾಗಿದ್ದು, ದಾಖಲೆಯ ಏರಿಕೆ ಕಂಡಿದೆ. ಆ.23 ರಂದು ಕೊನೆಗೊಂಡ ವಾರದಲ್ಲಿ 681.69 ಬಿಲಿಯನ್ ಡಾಲರ್ ಗೆ ವಿದೇಶಿ ವಿನಿಮಯ ಮೀಸಲು ತಲುಪಿದೆ ಎಂದು ಆರ್ ಬಿಐ ಹೇಳಿದೆ.
ವಿದೇಶಿ ವಿನಿಮಯ ಮೀಸಲು ಈ ಹಿಂದಿನ ವಾರದಲ್ಲಿ 4.55 ಬಿಲಿಯನ್ ಡಾಲರ್ ನಷ್ಟು ಗಳಿಕೆ ಕಂಡಿದ್ದು, $674.66 ಕ್ಕೆ ಏರಿಕೆಯಾಗಿತ್ತು.
ಆ.02 ರಂದು 674.92 ಬಿಲಿಯನ್ ಡಾಲರ್ ಗೆ ತಲುಪುವ ಮೂಲಕ ವಿದೇಶಿ ವಿನಿಮಯ ಮೀಸಲು ಮೊತ್ತ ಸಾರ್ವಕಾಲಿಕ ಏರಿಕೆ ಕಂಡಿತ್ತು.
ಆಗಸ್ಟ್ 23 ಕ್ಕೆ ಕೊನೆಗೊಂಡ ವಾರದಲ್ಲಿ, ಮೀಸಲುಗಳ ಪ್ರಮುಖ ಅಂಶವಾದ ವಿದೇಶಿ ಕರೆನ್ಸಿ ಆಸ್ತಿಗಳು $ 5.98 ಶತಕೋಟಿಯಿಂದ $ 597.55 ಶತಕೋಟಿಗೆ ಏರಿದೆ ಎಂದು ಶುಕ್ರವಾರ ಬಿಡುಗಡೆಯಾದ ಡೇಟಾ ಹೇಳಿದೆ.
ವಾರದಲ್ಲಿ ಚಿನ್ನದ ಸಂಗ್ರಹ 893 ಮಿಲಿಯನ್ ಡಾಲರ್‌ನಿಂದ 61 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ ಎಂದು ಆರ್‌ಬಿಐ ತಿಳಿಸಿದೆ. ವಿಶೇಷ ಡ್ರಾಯಿಂಗ್ ಹಕ್ಕುಗಳು (SDR) $118 ಮಿಲಿಯನ್‌ನಿಂದ $18.459 ಶತಕೋಟಿಗೆ ಏರಿದೆ ಎಂದು ಅಪೆಕ್ಸ್ ಬ್ಯಾಂಕ್ ತಿಳಿಸಿದೆ.