
ಮುಂಬೈ: ಭಾರತದ ವಿದೇಶಿ ವಿನಿಮಯ ಮೀಸಲು ಸಾರ್ವಕಾಲಿಕ ಏರಿಕೆ ಕಂಡಿದೆ. ಭಾರತದ ವಿದೇಶಿ ವಿನಿಮಯ ಮೀಸಲು 9.699 ಬಿಲಿಯನ್ ಡಾಲರ್ ನಿಂದ 666.854 ಬಿಲಿಯನ್ ಡಾಲರ್ ಗಳಿಗೆ ಏರಿಕೆಯಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.
ಇದಕ್ಕೂ ಮೊದಲು, ಕಳೆದ ವಾರ ವಿನಿಮಯ ಮೀಸಲು 5.158 ಬಿಲಿಯನ್ ಡಾಲರ್ ಗೆ ಏರಿಕೆಯಾಗಿ 657.155 ಬಿಲಿಯನ್ ಡಾಲರ್ ಗಳಿಗೆ ಏರಿಕೆಯಾಗಿತ್ತು. ಜೂನ್ 7ಕ್ಕೆ ಕೊನೆಗೊಂಡ ವಾರದಲ್ಲಿ ಫಾರೆಕ್ಸ್ ಮೀಸಲು ಹಿಂದಿನ ಗರಿಷ್ಠ $655.817 ಶತಕೋಟಿಯನ್ನು ಮೀರಿಸಿತ್ತು.
ಭಾರತದ ಬಳಿ ಇರುವ ವಿದೇಶಿ ಕರೆನ್ಸಿಯ ಮೌಲ್ಯ ಈಗ $8.361 ಬಿಲಿಯನ್ ನಷ್ಟು ಅಂದರೆ $585.47 ಗೆ ಏರಿಕೆಯಾಗಿದೆ ಎಂದು ಅಂಕಿ-ಅಂಶಗಳು ತಿಳಿಸಿವೆ.
Advertisement