ನೌಕರರಿಗೆ ಸಿಹಿಸುದ್ದಿ: EPFO ಬಡ್ಡಿ ದರ ಶೇ.8.25ಕ್ಕೆ ಏರಿಕೆ, 3 ವರ್ಷಗಳಲ್ಲೇ ಗರಿಷ್ಠ

ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್‌ಒ (EPFO) ನೌಕರರಿಗೆ ಸಿಹಿಸುದ್ದಿ ನೀಡಿದ್ದು, 2023-24ರ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ.8.25ಕ್ಕೆ ಹೆಚ್ಚಿಸಿದ್ದು, ಇದು 3 ವರ್ಷಗಳ ಗರಿಷ್ಠ ಮಟ್ಟವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್‌ಒ (EPFO) ನೌಕರರಿಗೆ ಸಿಹಿಸುದ್ದಿ ನೀಡಿದ್ದು, 2023-24ರ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ.8.25ಕ್ಕೆ ಹೆಚ್ಚಿಸಿದ್ದು, ಇದು 3 ವರ್ಷಗಳ ಗರಿಷ್ಠ ಮಟ್ಟವಾಗಿದೆ.

ಶನಿವಾರ ನಡೆದ ಇಪಿಎಫ್‌ಒನ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳ (ಸಿಬಿಟಿ) ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, EPF ಮೇಲಿನ ಬಡ್ಡಿದರವನ್ನು 2021-22ರಲ್ಲಿದ್ದ 8.10%ರಿಂದ 2022-23ರ ಆರ್ಥಿಕ ವರ್ಷಕ್ಕೆ 8.15%ಗೆ ಇಪಿಎಫ್‌ಒ ಏರಿಸಿತ್ತು. ಮಾರ್ಚ್ 2023ರಲ್ಲಿ ಆ ಹೆಚ್ಚಳ ಮಾಡಿದ ನಂತರ ಈ ಕ್ರಮ ಬಂದಿದೆ. ​​

EPF ಮೇಲಿನ ಬಡ್ಡಿ ದರವನ್ನು 2020-21ರಲ್ಲಿದ್ದ 8.5%ರಿಂದ 2021-22ರ ಹಣಕಾಸು ವರ್ಷಕ್ಕೆ 8.1%ಕ್ಕೆ ಇಳಿಸಲಾಗಿತ್ತು. ಇದು EPFOದ ನಾಲ್ಕು ದಶಕಗಳ ಅತಿ ಕಡಿಮೆ ಬಡ್ಡಿದರವಾಗಿತ್ತು. ಇದೀಗ ತದ್ವಿರುದ್ಧ ಎಂಬಂತೆ ಬಡ್ಡಿದರ ಏರಿಕೆ ಮಾಡಲಾಗಿದ್ದು, 2023-24ರ 8.25% ಬಡ್ಡಿ ದರವು EPFO​​ನ ಆರು ಕೋಟಿಗೂ ಹೆಚ್ಚು ಸದಸ್ಯರ ಪಾಲಿಗೆ ಧನಾತ್ಮಕ ಬೆಳವಣಿಗೆಯಾಗಿದೆ. 2020-21ರ EPF ಮೇಲಿನ ಬಡ್ಡಿದರವನ್ನು ಮಾರ್ಚ್ 2021ರಲ್ಲಿ 8.5%ಗೆ ನಿಗದಿಪಡಿಸಲಾಗಿತ್ತು ಎಂಬುದು ಗಮನಿಸಬೇಕಾದ ಸಂಗತಿ. 

CBTಯ ನಿರ್ಧಾರದ ನಂತರ, ಮುಂಬರುವ ಆರ್ಥಿಕ ವರ್ಷಕ್ಕೆ EPF ಠೇವಣಿಗಳ ಮೇಲಿನ ಬಡ್ಡಿ ದರವನ್ನು ಒಪ್ಪಿಗೆಗಾಗಿ ಹಣಕಾಸು ಸಚಿವಾಲಯಕ್ಕೆ ರವಾನಿಸಲಾಗುತ್ತದೆ.

ಐತಿಹಾಸಿಕ ಬೆಳವಣಿಗೆ
ಮಾರ್ಚ್ 2020 ರಲ್ಲಿ, ಇಪಿಎಫ್‌ಒ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು 2019-20ಕ್ಕೆ ಏಳು ವರ್ಷಗಳ ಕನಿಷ್ಠ 8.5 ಪ್ರತಿಶತಕ್ಕೆ ಇಳಿಸಿತ್ತು. ಇದು 2018-19 ರಲ್ಲಿ ಶೇಕಡಾ 8.65 ಕ್ಕಿಂತ ಕಡಿಮೆಯಾಗಿದೆ. ಕಳೆದ ವರ್ಷಗಳಲ್ಲಿ, EPFO ಬಡ್ಡಿದರಗಳು 2016-17 ರಲ್ಲಿ ಶೇ.8.65, 2017-18 ರಲ್ಲಿ ಶೇ.8.55, ಮತ್ತು 2015-16 ರಲ್ಲಿ ಶೇ.8.8 ಸ್ವಲ್ಪ ಹೆಚ್ಚಿನ ದರಗಳೊಂದಿಗೆ ವ್ಯತ್ಯಾಸಗಳನ್ನು ಕಂಡಿವೆ. ನಿವೃತ್ತಿ ನಿಧಿ ಸಂಸ್ಥೆಯು 2013-14 ಮತ್ತು 2014-15 ರಲ್ಲಿ ಶೇಕಡಾ 8.75 ರಷ್ಟು ಹೆಚ್ಚಿನ ಬಡ್ಡಿದರವನ್ನು ಒದಗಿಸಿತ್ತು. 2012-13 ಕ್ಕೆ ಹೋಲಿಸಿದರೆ ಶೇ.8.5, ಆದರೆ ಬಡ್ಡಿ ದರವು 2011-12 ರಲ್ಲಿ ಶೇ.8.25 ರಷ್ಟಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com