ನೋಕಿಯಾ ಇಂಡಿಯಾದ ಕಂಟ್ರಿ ಮ್ಯಾನೇಜರ್ ಆಗಿ ತರುಣ್ ಛಾಬ್ರಾ ನೇಮಕ

ಫಿನ್‌ಲೆಂಡಿನ ಐಟಿ ಮತ್ತು ಟೆಕ್ ಸಂಸ್ಥೆಯಾದ Nokia ಮಂಗಳವಾರ ಏಪ್ರಿಲ್ 1, 2024 ರಿಂದ ಜಾರಿಗೆ ಬರುವಂತೆ ಭಾರತದಲ್ಲಿ ತನ್ನ ಮ್ಯಾನೇಜರ್ ಆಗಿ ತರುಣ್ ಛಾಬ್ರಾ ಅವರನ್ನು ನೇಮಕ ಮಾಡುವುದಾಗಿ ಘೋಷಿಸಿದೆ.
ನೋಕಿಯಾ
ನೋಕಿಯಾ

ನವದೆಹಲಿ: ಫಿನ್‌ಲೆಂಡಿನ ಐಟಿ ಮತ್ತು ಟೆಕ್ ಸಂಸ್ಥೆಯಾದ Nokia ಮಂಗಳವಾರ ಏಪ್ರಿಲ್ 1, 2024 ರಿಂದ ಜಾರಿಗೆ ಬರುವಂತೆ ಭಾರತದಲ್ಲಿ ತನ್ನ ಮ್ಯಾನೇಜರ್ ಆಗಿ ತರುಣ್ ಛಾಬ್ರಾ ಅವರನ್ನು ನೇಮಕ ಮಾಡುವುದಾಗಿ ಘೋಷಿಸಿದೆ.

ಈಗಿರುವ ಮ್ಯಾನೇಜರ್ ಸಂಜಯ್ ಮಲಿಕ್ ಅವರು ಮಾರ್ಚ್ 31, 2024 ರಂದು ನಿವೃತ್ತರಾಗಲಿದ್ದು, ಅವರ ಸ್ಥಾನವನ್ನು ತರುಣ್ ಛಾಬ್ರಾ ತುಂಬಲಿದ್ದಾರೆ.

'ತರುಣ್ ಛಾಬ್ರಾ ಅವರು ಭಾರತದ ಮ್ಯಾನೇಜರ್ ಜವಾಬ್ದಾರಿಗಳನ್ನು ವಹಿಸಿಕೊಳ್ಳುವುದರ ಜೊತೆಗೆ ಮೊಬೈಲ್ ನೆಟ್‌ವರ್ಕ್ ಮಾರುಕಟ್ಟೆಯ ದೇಶದ ಮುಖ್ಯಸ್ಥರ ಹುದ್ದೆಯಲ್ಲಿಯೂ ಮುಂದುವರಿಯಲಿದ್ದಾರೆ" ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

'ನೋಕಿಯಾಗೆ ಭಾರತವು ಪ್ರಮುಖ ಮಾರುಕಟ್ಟೆ ತಾಣವಾಗಿದೆ ಮತ್ತು ತಂತ್ರಜ್ಞಾನವು ಹಿಂದೆಂದಿಗಿಂತಲೂ ಪ್ರಮುಖ ಪಾತ್ರವನ್ನು ವಹಿಸುತ್ತಿರುವ ಸಮಯದಲ್ಲಿ, ನಮ್ಮ ಗ್ರಾಹಕರಿಗೆ ನೋಕಿಯಾದ ಪ್ರಮುಖ ತಂತ್ರಜ್ಞಾನದಿಂದ ಲಾಭ ದೊರಕುವಂತಾಗಲು ನಾನು ಸಹಾಯ ಮಾಡುತ್ತೇನೆ ಎಂದು ನಾನು ನಂಬುತ್ತೇನೆ ಎಂದು ಛಾಬ್ರಾ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com