ತೆಲಂಗಾಣದಲ್ಲಿ 12,400 ಕೋಟಿ ರೂ. ಹೂಡಿಕೆಗೆ ಅದಾನಿ ಸಮೂಹದೊಂದಿಗೆ ಕಾಂಗ್ರೆಸ್ ಸರ್ಕಾರ ಒಪ್ಪಂದ
ಹೈದರಾಬಾದ್: ರಾಜ್ಯದಲ್ಲಿ 12,400 ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆಗೆ ಸಂಬಂಧಿಸಿದ ನಾಲ್ಕು ಮಹತ್ವದ ಒಪ್ಪಂದಗಳಿಗೆ(ಎಂಒಯು) ಅದಾನಿ ಸಮೂಹ ಮತ್ತು ತೆಲಂಗಾಣ ಸರ್ಕಾರ ಬುಧವಾರ ಸಹಿ ಹಾಕಿವೆ.
ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ 2024 ರಲ್ಲಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರ ಸಮ್ಮುಖದಲ್ಲಿ ಎಂಒಯುಗಳಿಗೆ ಸಹಿ ಹಾಕಲಾಯಿತು ಎಂದು ಅದಾನಿ ಸಮೂಹದ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಎಂಒಯು ಭಾಗವಾಗಿ, ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್(ಎಇಎಲ್) ಮುಂದಿನ ಐದರಿಂದ ಏಳು ವರ್ಷಗಳಲ್ಲಿ ನವೀಕರಿಸಬಹುದಾದ ಇಂಧನಕ್ಕಾಗಿ 100 ಮೆಗಾವ್ಯಾಟ್ ಡೇಟಾ ಸೆಂಟರ್ ಸ್ಥಾಪನೆಗೆ 5,000 ಕೋಟಿಗೂ ಹೆಚ್ಚು ಹೂಡಿಕೆ ಮಾಡಲಿದೆ. ಇದರಿಂದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 600 ಜನರಿಗೆ ಉದ್ಯೋಗ ದೊರೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ (AGEL) ಕೊಯಬೆಸ್ತಗುಡೆಮ್‌ನಲ್ಲಿ 850 ಮೆಗಾವ್ಯಾಟ್ ಮತ್ತು ನಾಚಾರಂನಲ್ಲಿ 500 ಮೆಗಾವ್ಯಾಟ್ ನ ಎರಡು ಪಂಪ್ ಸ್ಟೋರೇಜ್ ಯೋಜನೆಗಳನ್ನು ಸ್ಥಾಪಿಸಲು 5,000 ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಮಾಡಲಿದೆ ಎಂದು ಪ್ರಕಟಣೆ ತಿಳಿಸಿದೆ.


