• Tag results for ತೆಲಂಗಾಣ

ತೆಲಂಗಾಣದಲ್ಲಿ ರೈಲು ಹರಿದು ಮೂವರು ರೈಲ್ವೆ ಕಾರ್ಮಿಕರು ಸಾವು

ನಗರದ ಹೊರವಲಯದಲ್ಲಿರುವ ವಿಕರಾಬಾದ್ ಜಿಲ್ಲೆಯ ಚಿತ್ತಿಗಡ್ಡ ಪ್ರದೇಶದ ರೈಲ್ವೆ ಸೇತುವೆಯ ಮೇಲೆ ರೈಲು ಹರಿದು ಮೂವರು ರೈಲ್ವೆ ಇಲಾಖೆ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ರೈಲ್ವೆ ಪೊಲೀಸರು ಗುರುವಾರ ತಿಳಿಸಿದ್ದಾರೆ.

published on : 23rd July 2020

ತೆಲಂಗಾಣ: ಚೀನಾ ಸಂಘರ್ಷದಲ್ಲಿ ಮೃತಪಟ್ಟ ಕರ್ನಲ್ ಪತ್ನಿಗೆ ಡೆಪ್ಯುಟಿ ಕಲೆಕ್ಟರ್ ಹುದ್ದೆ!

ಚೀನಾದೊಂದಿಗೆ ನಡೆದ ಸಂಘರ್ಷದಲ್ಲಿ ಹುತಾತ್ಮರಾದ ಕರ್ನಲ್ ಬಿ ಸಂತೋಷ್ ಬಾಬು ಅವರ ಪತ್ನಿ ಸಂತೋಷಿ ಅವರನ್ನು ತೆಲಂಗಾಣ ಸರ್ಕಾರ ಡೆಪ್ಯುಟಿ ಕಲೆಕ್ಟರ್ ಆಗಿ ನೇಮಕ ಮಾಡಿದೆ.

published on : 22nd July 2020

ಸೋಂಕಿತ ವ್ಯಕ್ತಿಯ ಮೃತದೇಹ ಸಾಗಿಸಲು ಪುರಸಭೆ ಸಿಬ್ಬಂದಿ ನಕಾರ: ಟ್ರ್ಯಾಕ್ಟರ್ ಓಡಿಸಿ ಸ್ಮಶಾನಕ್ಕೆ ಸಾಗಿಸಿದ ವೈದ್ಯ!

ಕೊರೋನಾದಿಂದ ಮೃತಪಟ್ಟ ವ್ಯಕ್ತಿಯ ಮೃತದೇಹ ಸಾಗಿಸಲು ಪುರಸಭೆ ಸಿಬ್ಬಂದಿಗಳು ನಿರಾಕರಿಸಿದ ಹಿನ್ನೆಲೆಯಲ್ಲಿ ಸರ್ಕಾರಿ ವೈದ್ಯರೊಬ್ಬರು, ಸ್ಟೆತಾಸ್ಕೋಪ್ ಬದಿಗಿಟ್ಟು ಟ್ರ್ಯಾಕ್ಟರ್ ಓಡಿಸಿ ಮೃತದೇಹವನ್ನು ಸ್ಮಶಾನಕ್ಕೆ ಸಾಗಿಸಿದ ಅಪರೂಪದ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ. 

published on : 14th July 2020

ತೆಲಂಗಾಣ ಸಚಿವಾಲಯ ಕಟ್ಟಡ ನೆಲಸಮಕ್ಕೆ ಹೈಕೋರ್ಟ್ ತಡೆ 

ಸಚಿವಾಲಯ ಕಟ್ಟಡ ನೆಲಸಮಗೊಳಿಸಿ ಅಲ್ಲಿ ನೂತನ ಕಟ್ಟಣ ನಿರ್ಮಾಣಕ್ಕೆ ಮುಂದಾಗಿರುವ ತೆಲಂಗಾಣ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ತಡೆ ನೀಡಿದೆ.

published on : 10th July 2020

ತೆಲಂಗಾಣ ಗೃಹ ಸಚಿವ ಮೊಹಮದ್ ಅಲಿಗೆ ಕೊರೋನಾ ಸೋಂಕು

ತೆಲಂಗಾಣ ಗೃಹ ಸಚಿವ ಮೊಹಮದ್ ಅಲಿ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು ಅವರನ್ನು ಹೈದಾರಾಬಾದ್ ನ ಕಾರ್ಪೋರೇಟ್ ಆಸ್ಪತ್ರೆಗೆ ದಾಖಲಿಸಲಾಗಿದೆ.

published on : 29th June 2020

ವ್ಯವಸ್ಥೆ ಬದಲಾವಣೆ ಮಾಡುವಲ್ಲಿ ವಿಫಲ: ಅವಧಿಗೂ ಮುನ್ನ ನಿವೃತ್ತಿಗೆ ಮುಂದಾದ ಐಪಿಎಸ್ ಅಧಿಕಾರಿ

ವ್ಯವಸ್ಥೆ ಬದಲಾವಣೆ ಮಾಡುವಲ್ಲಿ ವಿಫಲನಾಗಿದ್ದೇನೆ ಎಂದು ತೆಲಂಗಾಣ ರಾಜ್ಯ ಪೊಲೀಸ್ ಅಕಾಡೆಮಿ (ಟಿಎಸ್ ಪಿಎ)ಯ ನಿರ್ದೇಶಕ ವಿ.ಕೆ ಸಿಂಗ್ ಅವಧಿಗೂ ಮುನ್ನವೇ ನಿವೃತ್ತಿ ಬಯಸಿ ಗೃಹ ಇಲಾಖೆಗೆ ಪತ್ರ ಬರೆದಿದ್ದಾರೆ. 

published on : 25th June 2020

ತೆಲಂಗಾಣ: ಕಾಂಗ್ರೆಸ್ ಹಿರಿಯ ನಾಯಕ ವಿ.ಹನುಮತ ರಾವ್'ರಲ್ಲಿ ಕೊರೋನಾ ದೃಢ

ತೆಲಂಗಾಣ ರಾಜ್ಯದ ಕಾಂಗ್ರೆಸ್ ಹಿರಿಯ ನಾಯಕ ವಿ.ಹನುಮಂತ ರಾವ್ ಅವರಲ್ಲಿ ಕೊರೋನಾ ವೈರಸ್ ದೃಢಪಟ್ಟಿದೆ ಎಂದು ಭಾನುವಾರ ತಿಳಿದುಬಂದಿದೆ. 

published on : 21st June 2020

ತೆಲಂಗಾಣ: ಮತ್ತೊಬ್ಬ ಟಿಆರ್ ಎಸ್ ಶಾಸಕನಿಗೆ ಕೊರೋನಾ ಪಾಸಿಟಿವ್

ತೆಲಂಗಾಣದ ಆಡಳಿತರೂಢ ಟಿಆರ್ ಎಸ್ ನ ಮತ್ತೊಬ್ಬ ಶಾಸಕರಿಗೆ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದ್ದು, ಇದರೊಂದಿಗೆ ಟಿಆರ್ ಎಸ್ ಸೋಂಕಿತರ ಶಾಸಕರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

published on : 16th June 2020

20 ವರ್ಷದ ಗರ್ಭಿಣಿ ಪುತ್ರಿ ಕೊಲೆ: ತೆಲಂಗಾಣದಲ್ಲಿ ಮರ್ಯಾದಾ ಹತ್ಯೆ ಶಂಕೆ!

 ಅನ್ಯ ಜಾತಿಯ ಯುವಕನನ್ನು ಪ್ರೀತಿಸಿ ಗರ್ಭಿಣಿಯಾಗಿದ್ದ 20 ವರ್ಷದ ಪುತ್ರಿಯನ್ನು ಪೋಷಕರೇ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ.

published on : 10th June 2020

ದೇಶಕ್ಕೆ ಅಕ್ರಮ ಪ್ರವೇಶ, ನಕಲಿ ದಾಖಲೆ ಮೂಲಕ ಆಧಾರ್, ಪಾಸ್ ಪೋರ್ಟ್ ಸಂಗ್ರಹ; ತೆಲಂಗಾಣದಲ್ಲಿ 5 ರೊಹಿಂಗ್ಯ ಮುಸ್ಲಿಮರ ಬಂಧನ

ದೇಶಕ್ಕೆ ಅಕ್ರಮವಾಗಿ ನುಸುಳಿ, ನಕಲಿ ದಾಖಲೆಗಳ ಮೂಲಕ ಆಧಾರ್, ಪಾಸ್ ಪೋರ್ಟ್ ಸಂಗ್ರಹಿಸಿದ ಆರೋಪಕ್ಕೆ ಸಂಬಂಧಿಸಿದಂತೆ ತೆಲಂಗಾಣದಲ್ಲಿ ಐವರು ರೊಹಿಂಗ್ಯ ಮುಸ್ಲಿಮರ ಬಂಧಿಸಲಾಗಿದೆ.

published on : 9th June 2020

ಕೊರೋನಾ ಎಫೆಕ್ಟ್: ತೆಲಂಗಾಣದಲ್ಲಿ 10ನೇ ತರಗತಿ ಪರೀಕ್ಷೆ ರದ್ದು, ಎಲ್ಲ ವಿದ್ಯಾರ್ಥಿಗಳೂ ಪಾಸ್!

ಮಾರಕ ಕೊರೋನಾ ವೈರಸ್ ದೇಶಾದ್ಯಂತ ಶಿಕ್ಷಣ ವ್ಯವಸ್ಥೆಯನ್ನೇ ತಲೆಕೆಳಗು ಮಾಡಿದ್ದು, ಇದೀಗ ತೆಲಂಗಾಣ ಸರ್ಕಾರ 10ನೇ ತರಗತಿ ಪರೀಕ್ಷೆ ರದ್ದು ಮಾಡಿ ಎಲ್ಲ ವಿದ್ಯಾರ್ಥಿಗಳನ್ನೂ ಸಾಮೂಹಿಕವಾಗಿ ತೇರ್ಗಡೆ ಮಾಡಿದೆ.

published on : 9th June 2020

ಐಎಎಸ್ ಅಧಿಕಾರಿ ಪಿಎಗೆ ಸೋಂಕು ದೃಢ ಹಿನ್ನಲೆ ತೆಲಂಗಾಣ ಸಿಎಂ ಕಚೇರಿಗೂ ಕೊರೋನಾ ಭೀತಿ

ತೆಲಂಗಾಣದಲ್ಲಿ ಮಾರಕ ಕೊರೋನಾ ವೈರಸ್ ಅಬ್ಬರಕ್ಕೆ ಸ್ವತಃ ಮುಖ್ಯಮಂತ್ರಿಗಳ ಕಚೇರಿಯೇ ತಲ್ಲಣಿಸಿದ್ದು, ಸಿಎಂ ಕಚೇರಿಯ ಸಿಬ್ಬಂದಿಗೇ ಸೋಂಕು ಒಕ್ಕರಿಸಿದೆ.

published on : 9th June 2020

ಕೊವಿಡ್-19 ಮಾರ್ಗಸೂಚಿ ಪ್ರಕಾರ ಸಿನಿಮಾ, ಟಿವಿ ಚಿತ್ರೀಕರಣಕ್ಕೆ ತೆಲಂಗಾಣ ಸರ್ಕಾರ ಅಸ್ತು

ಕೊವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಸಿನಿಮಾ, ಟಿವಿ ಚಿತ್ರೀಕರಣವನ್ನು ಪುನಾರಂಭಿಸಲು ತೆಲಂಗಾಣ ಸರ್ಕಾರ ಸೋಮವಾರ ಅನುಮತಿ ನೀಡಿದೆ. ಆದರೆ ಕೇಂದ್ರದ ಮಾರ್ಗಸೂಚಿ ಅನುಸಾರ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ನೀಡಿಲ್ಲ.

published on : 8th June 2020

ತೆಲಂಗಾಣ: ಕೊರೋನಾಗೆ 33 ವರ್ಷದ ಪತ್ರಕರ್ತ ಬಲಿ

ಡೆಡ್ಲಿ ಕೊರೊನಾ ವೈರಸ್ ಗೆ ಪತ್ರಕರ್ತರೊಬ್ಬರು ಬಲಿಯಾಗಿದ್ದಾರೆ. ತೆಲುಗು ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡುವ 33 ವರ್ಷದ ಪತ್ರಕರ್ತರೊಬ್ಬರು ಕೋವಿಡ್-19 ನಿಂದ ಮೃತಪಟ್ಟಿದ್ದಾರೆ.

published on : 8th June 2020

ತೆಲಂಗಾಣ ಸಚಿವ ಕೆಟಿ ರಾಮರಾವ್ ಫಾರ್ಮ್ ಹೌಸ್ 'ಅಕ್ರಮ', ತನಿಖೆಗೆ ಎನ್ ಜಿಟಿ ಆದೇಶ

ತೆಲಂಗಾಣ ಸಚಿವ ಕೆಟಿ ರಾಮರಾವ್ ಅವರು ಅಕ್ರಮವಾಗಿ ಫಾರ್ಮ್ ಹೌಸ್ ನಿರ್ಮಿಸುತ್ತಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್ ಜಿಟಿ) ಶನಿವಾರ ತನಿಖೆಗೆ ಆದೇಶಿಸಿದೆ.

published on : 6th June 2020
1 2 3 4 5 6 >