ಬಜೆಟ್ 2024: ವಿತ್ತ ಸಚಿವರ ಮುಂದಿದೆ 'ಭಾರತೀಯ ಉದ್ಯೋಗ'ಗಳ ಸಂದಿಗ್ಧತೆ!

ನಾಳೆ ನಿರ್ಮಲಾ ಸೀತಾರಾಮನ್ ಮೋದಿ ಸರ್ಕಾರ-2.0 ಅವಧಿಯ ಕೊನೆಯ ಬಜೆಟ್ (ಲೇಖಾನುದಾನ) ಮಂಡನೆ ಮಾಡಲಿದ್ದಾರೆ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ನಾಳೆ ನಿರ್ಮಲಾ ಸೀತಾರಾಮನ್ ಮೋದಿ ಸರ್ಕಾರ-2.0 ಅವಧಿಯ ಕೊನೆಯ ಬಜೆಟ್ (ಲೇಖಾನುದಾನ) ಮಂಡನೆ ಮಾಡಲಿದ್ದಾರೆ. ವಿತ್ತ ಸಚಿವರಾಗಿ ಅವಧಿ ಪೂರ್ಣಗೊಳಿಸಿದ ಭಾರತದ ಮೊದಲ ಮಹಿಳೆ ಎಂಬ ಖ್ಯಾತಿಗೂ ನಿರ್ಮಲಾ ಸೀತಾರಾಮನ್ ಪಾತ್ರರಾಗಲಿದ್ದಾರೆ. ಈ ಸಂದರ್ಭದಲ್ಲಿ ಉದ್ಯೋಗ ಸೃಷ್ಟಿ ಸವಾಲಿಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಬಜೆಟ್ ನಲ್ಲಿ ಪ್ರಯತ್ನಿಸಿದರೆ ಈ ಬಜೆಟ್ ಇನ್ನಷ್ಟು ಔಚಿತ್ಯವಾಗಿರಲಿದೆ.

ಉದ್ಯೋಗ ಎಂಬುದು ನಾವು ಎದುರಿಸುತ್ತಿರುವ ಸಂಕೀರ್ಣ ಆರ್ಥಿಕ ಹಾಗೂ ಸಾಮಾಜಿಕ ಸಮಸ್ಯೆ. ಜನಸಂಖ್ಯೆಯ ಬೆಳವಣಿಗೆ ಪ್ರಮಾಣದಲ್ಲಿನ ವೇಗ ಮತ್ತು ಉದ್ಯೋಗ ಸೃಷ್ಟಿಯಲ್ಲಿನ ಬೆಳವಣಿಗೆ ಅನುಪಾತದಲ್ಲಿ ಅಸಮತೋಲನ ಉಂಟಾದ ಪರಿಣಾಮ ಈ ಸಮಸ್ಯೆಯನ್ನು ದಶಕಗಳಿಂದ ಕಾಣುತ್ತಿದ್ದೇವೆ.

1999- 2019 ರ ಅವಧಿಯಲ್ಲಿ ನಮ್ಮ ಉದ್ಯೋಗ ಮಟ್ಟ ಕೇವಲ ಶೇ.1.0ರಷ್ಟು ರಷ್ಟು ಬೆಳವಣಿಗೆಯಾಗಿದ್ದರೆ, ಇದೇ ಅವಧಿಯಲ್ಲಿ ನಮ್ಮ ಜನಸಂಖ್ಯೆ ವಾರ್ಷಿಕ ಶೇ.1.44 ರಷ್ಟು ಬೆಳವಣಿಗೆ ಕಂಡಿದೆ. ಪರಿಣಾಮ ಜನಸಂಖ್ಯೆಗೆ ಉದ್ಯೋಗಿಗಳ ಅನುಪಾತ ಶೇ.39.7 ರಿಂದ 36.4 ಕ್ಕೆ ಇಳಿಕೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ 2017-18ರ Periodic Labour Force ಸಮೀಕ್ಷೆ (PLFS)ಯಲ್ಲಿ ನಿರುದ್ಯೋಗ ದರ 6.1% ರಷ್ಟು-45 ವರ್ಷಗಳಲ್ಲೇ ಗರಿಷ್ಠ ಉಲ್ಲೇಖವಾಗಿರುವುದು ಆಶ್ಚರ್ಯವೇನಲ್ಲ.

ಒಂದರ್ಥದಲ್ಲಿ, ಉದ್ಯೋಗದ ಸಮಸ್ಯೆಯನ್ನು ಪರಿಹರಿಸದೆ ಅಥವಾ ನಮ್ಮ ಯುವಕರಿಗೆ ಗುಣಮಟ್ಟದ ಗಳಿಕೆಯ ಅವಕಾಶಗಳನ್ನು ಒದಗಿಸುವ ದಿಕ್ಕಿನಲ್ಲಿ ಕೊಂಡೊಯ್ಯುವ ಪರಿಹಾರವನ್ನು ಕಂಡುಕೊಳ್ಳದೆ ನಾವು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎಂಬ ಹೆಗ್ಗಳಿಕೆಯನ್ನು ಸಾಧಿಸಿದ್ದೇವೆ.

ಇತ್ತೀಚಿನ PLFS ವರದಿಗಳ ಪ್ರಕಾರ ನಿರುದ್ಯೋಗ ದರ ಶೇ.6.1 ರಿಂದ 2022-23 ರಲ್ಲಿ ಶೇ.3.2 ಕ್ಕೆ ಇಳಿದಿದೆ. ಕೇವಲ ನಿರುದ್ಯೋಗ ದರದಲ್ಲಿನ ಕುಸಿತ ನಿಜವಾದ ಆರ್ಥಿಕ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುವುದಿಲ್ಲ, ಏಕೆಂದರೆ ಇತ್ತೀಚಿನ ದಿನಗಳಲ್ಲಿ ಜನರು ಕೃಷಿಗೆ ಹಿಂತಿರುಗುತ್ತಿದ್ದು, ಅಂದರೆ, ನಾವು ಉದ್ಯೋಗದ ಸಮಸ್ಯೆಯನ್ನು ಪರಿಹರಿಸದೇ ಅದನ್ನು ಅಗೋಚರವಾಗಿಸಿದ್ದೇವೆ.

ಕೃಷಿ ಸಂಬಂಧಿತ ಚಟುವಟಿಕೆಗಳು ನಿರ್ದಿಷ್ಟ ಋತುಮಾನಗಳಿಗೆ ಸೀಮಿತವಾಗಿದ್ದು, ವರ್ಷದಲ್ಲಿ ಕೆಲವು ತಿಂಗಳುಗಳವರೆಗೆ ಮಾತ್ರವೇ ಜನರನ್ನು ವ್ಯಸ್ತರನ್ನಾಗಿರಿಸುತ್ತದೆ. ಪರಿಣಾಮ ನಾವು ಜನರು ಕೃಷಿಗೆ ಹಿಂತಿರುಗುತ್ತಿರುವಂತೆ ಕಡಿಮೆ ಉದ್ಯೋಗ ಅಥವಾ ಛದ್ಮವೇಷದ ಉದ್ಯೋಗದ ಹಳೆಯ ಸಮಸ್ಯೆಯೊಂದಿಗೆ ನಾವು ಹಿಂತಿರುಗಿದ್ದೇವೆ, ಆದ್ದರಿಂದ, ಸರ್ಕಾರ ರಾಷ್ಟ್ರೀಯ ಆಹಾರ ಸಬ್ಸಿಡಿ ಕಾರ್ಯಕ್ರಮವನ್ನು (ಪಿಎಂಜಿಕೆಎವೈ) 80 ಕೋಟಿ ಜನರಿಗೆ ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಬೇಕಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ.

ಕೃಷಿ ಕ್ಷೇತ್ರ ಈಗ 2009ರಲ್ಲಿದ್ದಷ್ಟೇ ಉದ್ಯೋಗಿಗಳನ್ನು ಹೊಂದಿದೆ ಇದು 2019ರಲ್ಲಿ ಆ ಕ್ಷೇತ್ರದಲ್ಲಿದ್ದ ಉದ್ಯೋಗಿಗಳಿಗಿಂತ 20% ಹೆಚ್ಚಿದೆ. ಕೃಷಿ ಕ್ಷೇತ್ರಕ್ಕೆ ಜನರು ಮರಳುತ್ತಿರುವ ಬೆಳವಣಿಗೆಯನ್ನು ಗಮನಿಸಿದರೆ ನಗರೀಕರಣ ಭಾರತದ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಎಂಬ ಸರ್ಕಾರದ ನೀತಿ ಹೇಳಿಕೆಯಲ್ಲಿ ವಿಶ್ವಾಸಾರ್ಹತೆ ಮೂಡುವುದಿಲ್ಲ.

ಉತ್ಪಾದನೆ ಮತ್ತು ಸೇವಾ ವಲಯದಲ್ಲಿನ ಉದ್ಯೋಗಳಿಗೂ ಕಡಿಮೆ ಉತ್ಪಾದಕತೆಯ ಸಮಸ್ಯೆ! 

ನಮಗೆಲ್ಲರಿಗೂ ತಿಳಿದಿರುವಂತೆ ತಯಾರಿಕಾ ಕ್ಷೇತ್ರ (Manufacturing  sector) ಹಲವು ವರ್ಷಗಳಿಂದ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ ಹಿಂದುಳಿದಿದೆ. ಆದಾಗ್ಯೂ, ಇದು ಹೆಚ್ಚಿನ ಉತ್ಪಾದಕತೆಯನ್ನು ಹೊಂದಿತ್ತು. ಮತ್ತೊಂದೆಡೆ, ಸೇವಾ ವಲಯ ಕಡಿಮೆ ಉತ್ಪಾದಕತೆಯ ಕಡಿಮೆ ಬೆಳವಣಿಗೆಯೊಂದಿಗೆ ಹೆಚ್ಚಿನ ಪ್ರಮಾಣದ ಉದ್ಯೋಗವನ್ನು ಸೃಷ್ಟಿಸಿತ್ತು, ಆದಾಗ್ಯೂ, ಈ ಪ್ರತಿಯೊಂದು ಕ್ಷೇತ್ರಗಳು ಕಡಿಮೆ ಮೌಲ್ಯವರ್ಧನೆಯ ಉದ್ಯೋಗಗಳನ್ನು ತುಲನಾತ್ಮಕವಾಗಿ ಹೆಚ್ಚಿನ ಪ್ರಮಾಣದಲ್ಲಿ ಸೃಷ್ಟಿಸುತ್ತಿವೆ. ಸಾಂಕ್ರಾಮಿಕ ರೋಗ ಈ ಎರಡೂ ಕ್ಷೇತ್ರಗಳಲ್ಲಿ ಉತ್ಪಾದಕತೆಯನ್ನು ಕುಗ್ಗಿಸುವ ಮೂಲಕ ಪರಿಸ್ಥಿತಿಯನ್ನು ಇನ್ನಷ್ಟು ದುಸ್ತರಗೊಳಿಸಿದೆ. ಪರಿಣಾಮವಾಗಿ, ಕಳೆದ ಎರಡು ವರ್ಷಗಳಲ್ಲಿ ಒಟ್ಟಾರೆ ಉತ್ಪಾದಕತೆಯ ಬೆಳವಣಿಗೆಯು 12% ಕ್ಕಿಂತ ಕಡಿಮೆಯಾಗಿದೆ.

ಸಾಂಕ್ರಾಮಿಕ-ಸಂಬಂಧಿತ ನಷ್ಟದಿಂದ ನಾವು ಚೇತರಿಸಿಕೊಂಡ ನಂತರ ಈ ಎರಡು ಕ್ಷೇತ್ರಗಳಲ್ಲಿ ಉದ್ಯೋಗ ಮತ್ತು ಉತ್ಪಾದಕತೆ ಹೆಚ್ಚಾಗುತ್ತದೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ಈ ಕ್ಷೇತ್ರಗಳು ನಷ್ಟವನ್ನು ಶೀಘ್ರದಲ್ಲೇ ಮರುಪಡೆಯುತ್ತವೆ ಮತ್ತು ಕೃಷಿಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ನಮಗೆ ಸಹಾಯ ಮಾಡುತ್ತವೆಯೇ ಎಂಬುದು ಇನ್ನೂ ನಮ್ಮ ಮುಂದಿರುವ ಪ್ರಶ್ನೆಯಾಗಿದೆ

2019 ರಲ್ಲಿ ನಾವು ಹೊಂದಿದ್ದ ಮಟ್ಟಕ್ಕೆ ಉದ್ಯೋಗಾವಕಾಶಗಳನ್ನು ಕೃಷಿ ಕ್ಷೇತ್ರದಿಂದ ವಾಪಸ್ ಪಡೆಯುವುದಕ್ಕೆ ಈ ಎರಡು ಕ್ಷೇತ್ರಗಳು 40 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸುವುದು ಅಗತ್ಯವಿದೆ.

ಬಜೆಟ್ ನಲ್ಲಿ ಏನು ಮಾಡಬಹುದೆಂದರೆ...

ಬಜೆಟ್‌ನಲ್ಲಿ ಹೆಚ್ಚಿನ ಉತ್ಪಾದಕತೆಯ ಮೂಲಕ ಹೆಚ್ಚಿನ ಗಳಿಕೆಯೊಂದಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರ ಮೇಲೆ ಗಮನ ಕೇಂದ್ರೀಕರಿಸುವ ದೂರದೃಷ್ಟಿಯನ್ನು ಅಭಿವ್ಯಕ್ತಗೊಳಿಸಬೇಕಾಗುತ್ತದೆ. ಇದೇ ವೇಳೆ ಆರ್ಥಿಕ ಅಪಾಯವನ್ನು ಕಡಿಮೆ-ಆದಾಯದ ಕುಟುಂಬಗಳಿಗೆ ವರ್ಗಾವಣೆಯಾಗದಂತೆ ಎಚ್ಚರ ವಹಿಸಬೇಕಿದೆ. 

ಸರ್ಕಾರ ಗಮನಹರಿಸಬೇಕಾದ ಅಂಶಗಳು 

ಈ ನಿಟ್ಟಿನಲ್ಲಿ ಸರ್ಕಾರ ಸರ್ಕಾರಿ ಸ್ವಾಮ್ಯದಲ್ಲಿ ಉದ್ಯೋಗಾವಶಗಳನ್ನು ಹೆಚ್ಚಿಸಬೇಕಾಗುತ್ತದೆ. ದೊಡ್ಡ ಭಾರತೀಯ ಮತ್ತು ಬಹುರಾಷ್ಟ್ರೀಯ ಸಂಸ್ಥೆಗಳಿಗೆ ನೀಡುವ ಪ್ರೋತ್ಸಾಹವು ಉದ್ಯೋಗ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ.

2019-20ರ ಅವಧಿಯಲ್ಲಿ ಆದಾಯ ತೆರಿಗೆ ದರಗಳಲ್ಲಿನ ಕಡಿತವು ಖಾಸಗಿ ವಲಯದ ಹೂಡಿಕೆಯನ್ನು ಉತ್ತೇಜಿಸಲು ಇನ್ನೂ ಸಾಧ್ಯವಾಗಿಲ್ಲ. ಸರ್ಕಾರದ ಬಂಡವಾಳ ವೆಚ್ಚದಲ್ಲಿ ಗಮನಾರ್ಹ ಹೆಚ್ಚಳವಾಗಿದ್ದರೂ ಸಹ, ಖಾಸಗಿ ವಲಯದ ಬಂಡವಾಳ ವೆಚ್ಚದಲ್ಲಿ ಆ ಏರಿಕೆಯ ಯಾವುದೇ ಲಕ್ಷಣಗಳನ್ನು ನಾವು ನೋಡುತ್ತಿಲ್ಲ.

ಭಾರತದ ಅಭಿವೃದ್ಧಿಯ ಈ ಹಂತದಲ್ಲಿ ವಿತ್ತೀಯವಲ್ಲ, ನೀತಿಯು ಅತ್ಯಂತ ಪ್ರಮುಖ ಸಾಧನವಾಗಿದೆ. ಸಾಲ ಮತ್ತು ನಗದು ಲಭ್ಯತೆ ಕೆಲವು ತ್ರೈಮಾಸಿಕಗಳಿಗೆ ಬೆಳವಣಿಗೆಯನ್ನು ಕಾಪಿಟ್ಟುಕೊಳ್ಳಬಹುದೇ ಹೊರತು ದೀರ್ಘಾವಧಿಗೆ ಅಲ್ಲ. ಹೀಗಾಗಿ ಮುಂದಿನ ಕೆಲವು ದಶಕಗಳಲ್ಲಿ ಬೆಳವಣಿಗೆಯ ಸಾಮರ್ಥ್ಯವನ್ನು ನಿರ್ಮಿಸಲು ನಮಗೆ ಆರ್ಥಿಕ ನೀತಿಯ ಬೆಂಬಲದ ಅಗತ್ಯವಿದೆ.

ಪ್ರಮುಖ ಆರ್ಥಿಕ ಮತ್ತು ಸಾಮಾಜಿಕ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಪ್ರಮಾಣವನ್ನು ನಿರ್ಮಿಸಲು ಸರ್ಕಾರ ಹೂಡಿಕೆ ಮಾಡಬೇಕು ಮತ್ತು ಹೆಚ್ಚಿನ ದಕ್ಷತೆಯೊಂದಿಗೆ ಈ ಯೋಜನೆಗಳನ್ನು ಕಾರ್ಯಗತಗೊಳಿಸಲು ಖಾಸಗಿ ವಲಯವನ್ನು ಒಳತರಬೇಕು. ಇದಷ್ಟೇ ಅಲ್ಲದೇ ತಕ್ಷಣಕ್ಕೆ ನಮಗೆ ನಗರ ಮೂಲಸೌಕರ್ಯದಲ್ಲಿ ಹೂಡಿಕೆಯ ಅಗತ್ಯವಿದೆ. ಪ್ರಯಾಣದ ಸಮಯವನ್ನು ಉಳಿಸಲು ಮತ್ತು ಶುದ್ಧ ಗಾಳಿಯನ್ನು ಉಸಿರಾಡಲು ಅವರಿಗೆ ಸಹಾಯ ಮಾಡುವ ಮೂಲಕ ನಮ್ಮ ನಗರ ಉದ್ಯೋಗಿಗಳ ಉತ್ಪಾದಕತೆಯನ್ನು ಹೆಚ್ಚಿಸುವುದರ ಮೇಲೆ ಕೇಂದ್ರೀಕರಿಸುವ ಹೂಡಿಕೆ ಇದಾಗಬೇಕಿದೆ. ಬೃಹತ್ ಪ್ರದರ್ಶಕ  ಯೋಜನೆಗಳು ಅಪರೂಪವಾಗಿ ಸ್ಥಳೀಯ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ ಆದರೆ ಕೆಲವು ನೂರು ಮಿಲಿಯನ್ ಯುವಕರಿಗೆ ಇಂತಹ ಯೋಜನೆಗಳಿಂದ ಉದ್ಯೋಗ ಸೃಷ್ಟಿ ಸಾಧ್ಯವಿಲ್ಲ.

ನಮಗೆ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯದ ಅಗತ್ಯವಿದೆಯೇ ಹೊರತು ಶಿಕ್ಷಣ ಸಾಲ ಅಥವಾ ಆರೋಗ್ಯ ವಿಮೆಯ ಮೂಲಕ ರಕ್ಷಣೆ ನೀಡುವುದಲ್ಲ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಈ ವಲಯಗಳಲ್ಲಿ - ವೃತ್ತಿಪರ (ಶಿಕ್ಷಕರು ಮತ್ತು ವೈದ್ಯರು) ಕೌಶಲ್ಯಗಳಿಗೆ ಮೂಲಭೂತ (ಆರೈಕೆ ಮತ್ತು ಆಡಳಿತ) ಹೊಂದಿರುವ ಯುವಜನರಿಗೆ ಗುಣಮಟ್ಟದ ಉದ್ಯೋಗವನ್ನು ಸೃಷ್ಟಿಸುವ ರೀತಿಯಲ್ಲಿ ಸಾರ್ವಜನಿಕ ಸೇವೆಗಾಗಿ ನಾವು ಸಾಮರ್ಥ್ಯವನ್ನು ಹೆಚ್ಚಿಸಬೇಕಿದೆ. 

ಕುಟುಂಬಗಳು ಅಪಾಯವನ್ನು ತಡೆದುಕೊಳ್ಳಬಹುದಾಗಿರುವಷ್ಟು ಬಂಡವಾಳವನ್ನು ಹೊಂದಿರುವ ಸಂದರ್ಭಗಳಲ್ಲಿ ಮತ್ತು ಅವರ ಯುವಕರ ಉದ್ಯಮಶೀಲ ಚಟುವಟಿಕೆಗಳಿಗೆ ಬೆಂಬಲ ನೀಡುವ ಸನ್ನಿವೇಶವಿರುವ ಸಂದರ್ಭಗಳಲ್ಲಿ ಮಾತ್ರ ಸ್ವಯಂ ಉದ್ಯೋಗವು ಪರಿಹಾರವಾಗಿದೆ ಎಂದು ಪ್ರಧಾನಮಂತ್ರಿ ಮತ್ತು ಹಣಕಾಸು ಮಂತ್ರಿ ಇಬ್ಬರೂ ಚೆನ್ನಾಗಿ ಗಮನದಲ್ಲಿಟ್ಟುಕೊಳ್ಳಬೇಕು. ಭಾರತೀಯ ಹಣಕಾಸು ವಲಯ, ಇತ್ತೀಚಿನ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಇನ್ನೂ ಖಾಸಗಿ ಉದ್ಯಮದಲ್ಲಿ ಸಾಕಷ್ಟು ಅಪಾಯ ತಡೆದುಕೊಳ್ಳುವಷ್ಟು ಬಂಡವಾಳವನ್ನು ಒದಗಿಸುವುದಿಲ್ಲ. ಆದ್ದರಿಂದ, ಇಲ್ಲಿ ಶಕ್ತಿಗಳು ಮತ್ತು ಕಲ್ಪನೆಗಳು ಸೂಕ್ತ ಸ್ಥಳಗಳಲ್ಲಿ ಕೇಂದ್ರೀಕೃತವಾಗಿರುತ್ತವೆ ಎಂದು ಭಾವಿಸುತ್ತೇವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com