ಫಾಸ್ಟ್‌ಟ್ಯಾಗ್‌ಗಳ ಕೆವೈಸಿ ಅನುಸರಣೆ ಗಡುವು ಫೆಬ್ರವರಿ 29 ರವರೆಗೆ ವಿಸ್ತರಣೆ: ಹೆದ್ದಾರಿ ಪ್ರಾಧಿಕಾರ

ಇಂದು ಅಂದರೆ ಜನವರಿ 31ಕ್ಕೆ ಅಂತ್ಯವಾಗಬೇಕಿದ್ದ ಫಾಸ್ಟ್‌ಟ್ಯಾಗ್‌ಗಳ ಕೆವೈಸಿ ಅನುಸರಣೆ ಗಡುವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಫೆಬ್ರವರಿ 29 ರವರೆಗೆ ವಿಸ್ತರಿಸಿದೆ.
ಫಾಸ್ಟ್‌ಟ್ಯಾಗ್‌ಗಳ ಕೆವೈಸಿ (ಸಂಗ್ರಹ ಚಿತ್ರ)
ಫಾಸ್ಟ್‌ಟ್ಯಾಗ್‌ಗಳ ಕೆವೈಸಿ (ಸಂಗ್ರಹ ಚಿತ್ರ)

ನವದೆಹಲಿ: ಇಂದು ಅಂದರೆ ಜನವರಿ 31ಕ್ಕೆ ಅಂತ್ಯವಾಗಬೇಕಿದ್ದ ಫಾಸ್ಟ್‌ಟ್ಯಾಗ್‌ಗಳ ಕೆವೈಸಿ ಅನುಸರಣೆ ಗಡುವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಫೆಬ್ರವರಿ 29 ರವರೆಗೆ ವಿಸ್ತರಿಸಿದೆ.

ಭಾರತೀಯ ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಫಾಸ್ಟ್ಯಾಗ್‌ಗಳ KYC ಅನುಸರಣೆ ಗಡುವನ್ನು ಫೆಬ್ರವರಿ 29 ರವರೆಗೆ ವಿಸ್ತರಿಸಿದೆ ಎಂದು ಪ್ರಾಧಿಕಾರ ತಿಳಿಸಿದೆ. ಈ ಕುರಿತು ಟ್ವಿಟರ್ ನಲ್ಲಿ ಮಾಹಿತಿ ನೀಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ "#FASTag ಬಳಕೆದಾರರ ಗಮನಕ್ಕೆ! #OneVehicleOneFASTag ಉಪಕ್ರಮದ ಗಡುವು ಮತ್ತು ನಿಮ್ಮ ಇತ್ತೀಚಿನ FASTag ಗಾಗಿ KYC ಅಪ್‌ಡೇಟ್ ಪೂರ್ಣಗೊಳಿಸುವಿಕೆಯನ್ನು 29ನೇ ಫೆಬ್ರವರಿ 2024 ರವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದೆ.

ಜನವರಿ 15 ರಂದು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮಾನ್ಯ ಬ್ಯಾಲೆನ್ಸ್‌ಗಳನ್ನು ಹೊಂದಿರುವ, ಆದರೆ ಅಪೂರ್ಣ KYC ಯ ಖಾತೆಗಳನ್ನು ಜನವರಿ 31, 2024 ರ ನಂತರ ಬ್ಯಾಂಕ್‌ಗಳು ನಿಷ್ಕ್ರಿಯಗೊಳಿಸುತ್ತವೆ ಎಂದು ಹೇಳಲಾಗಿತ್ತು. 

ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯ ದಕ್ಷತೆಯನ್ನು ಹೆಚ್ಚಿಸಲು ಮತ್ತು ಟೋಲ್ ಪ್ಲಾಜಾಗಳಲ್ಲಿ ತಡೆರಹಿತ ಚಲನೆಯನ್ನು ಒದಗಿಸಲು, ಪ್ರಾಧಿಕಾರವು 'ಒಂದು ವಾಹನ, ಒಂದು ಫಾಸ್ಟ್‌ಟ್ಯಾಗ್' ಉಪಕ್ರಮವನ್ನು ಪರಿಚಯಿಸಿತ್ತು. 

NHAI 1.27 ಕೋಟಿಯಲ್ಲಿ ಕೇವಲ 7 ಲಕ್ಷ ಬಹು ಫಾಸ್ಟ್‌ಟ್ಯಾಗ್‌ಗಳನ್ನು ಸ್ಥಗಿತಗೊಳಿಸಿದೆ. ಆದ್ದರಿಂದ, ನಾವು ಗಡುವನ್ನು ಇನ್ನೂ ಒಂದು ತಿಂಗಳು ವಿಸ್ತರಿಸಲು ಮುಂದುವರಿಯುತ್ತೇವೆ" ಎಂದು ಅನಾಮಧೇಯತೆಯ ಷರತ್ತಿನ ಮೇಲೆ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com