Zepto ನಲ್ಲಿ ಕೊತ್ತಂಬರಿ ಸೊಪ್ಪಿಗೆ 131 ರೂಪಾಯಿ: ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ

ಗುರುಗ್ರಾಮದ ಓರ್ವ ಗ್ರಾಹಕ 100 ಗ್ರಾಮ್ ಕೊತ್ತಂಬರಿ ಸೊಪ್ಪಿಗೆ 131 ರೂಪಾಯಿ ಬೆಲೆ ನಿಗದಿಪಡಿಸಿರುವುದನ್ನು ಗಮನಿಸಿ ಸ್ಕ್ರೀನ್ ಶಾಟ್ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು.
coriander leaves
ಕೊತ್ತಂಬರಿ ಸೊಪ್ಪುonline desk
Updated on

ಗುರುಗ್ರಾಮ: 100 ಗ್ರಾಮ್ ಕೊತ್ತಂಬರಿ ಸೊಪ್ಪಿಗೆ 131 ರೂಪಾಯಿ ಬೆಲೆ ನಿಗದಿಪಡಿಸಿದ್ದ ಕ್ವಿಕ್ ಕಾಮರ್ಸ್ ವೇದಿಕೆ ಝೆಪ್ಟೋ ವಿರುದ್ಧ ಗ್ರಾಹಕರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಎದುರಾದ ಆಕ್ರೋಶದ ಬೆನ್ನಲ್ಲೆ ಸ್ಪಷ್ಟನೆ ನೀಡಿರುವ ಝೆಪ್ಟೊ, ತಾಂತ್ರಿಕ ದೋಷದ ಕಾರಣದಿಂದ ಈ ಅಚಾತುರ್ಯ ನಡೆದಿದೆ ಎಂದು ಹೇಳಿದ್ದು ತಕ್ಷಣವೇ ಸಮಸ್ಯೆ ಸರಿಪಡಿಸುವುದಾಗಿ ತಿಳಿಸಿದೆ.

ಗುರುಗ್ರಾಮದ ಓರ್ವ ಗ್ರಾಹಕ 100 ಗ್ರಾಮ್ ಕೊತ್ತಂಬರಿ ಸೊಪ್ಪಿಗೆ 131 ರೂಪಾಯಿ ಬೆಲೆ ನಿಗದಿಪಡಿಸಿರುವುದನ್ನು ಗಮನಿಸಿ ಸ್ಕ್ರೀನ್ ಶಾಟ್ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು.

ಹಲವಾರು ನೆಟಿಜನ್‌ಗಳು ಆಕ್ರೋಶ ಮತ್ತು ಆಘಾತವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಕೆಲವರು ಪ್ಲಾಟ್‌ಫಾರ್ಮ್‌ನಲ್ಲಿನ ಅತಿಯಾದ ಬೆಲೆಗಳು ಹೇಗೆ ರಸ್ತೆಬದಿಯ ತರಕಾರಿ ಮಾರಾಟಗಾರರು ಖರೀದಿದಾರರನ್ನು ಓಲೈಸಲು ತರಕಾರಿಗಳೊಂದಿಗೆ ಉಚಿತ ಕೊತ್ತಂಬರಿ ಸೊಪ್ಪನ್ನು ನೀಡಲು ಮುಂದಾಗುತ್ತಿರುವುದು ಹೇಗೆ ವ್ಯತಿರಿಕ್ತವಾಗಿದೆ ಎಂಬುದನ್ನು ಹೇಳಿದ್ದಾರೆ.

coriander leaves
ರಾಹುಲ್ ಗಾಂಧಿ ಆಸ್ತಿ ಎಷ್ಟು ಗೊತ್ತೇ?: ಪ್ರಿಯಾಂಕ ಜೊತೆ ಭೂಮಿ, ಗುರುಗ್ರಾಮ ಕಚೇರಿ ಹಂಚಿಕೆ

"ಬಹುಶಃ ಇದು ಚಂದ್ರನ ಮಣ್ಣಿನಲ್ಲಿ ಬೆಳೆದಿದೆಯೇ?" ಎಕ್ಸ್‌ನಲ್ಲಿ ಓರ್ವ ನೆಟಿಜನ್‌ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ತನ್ನ ಪ್ರತಿಕ್ರಿಯೆಯಲ್ಲಿ, ತಾಂತ್ರಿಕ ದೋಷದಿಂದಾಗಿ ಈ ರೀತಿಯಾಗಿದ್ದು ಗ್ರಾಹಕರ ಕಾಳಜಿಯನ್ನು ತ್ವರಿತವಾಗಿ ಬಗೆಹರಿಸಲು ಕಂಪನಿ ಬದ್ಧವಾಗಿದೆ ಎಂದು Zepto ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com