
ಬೆಂಗಳೂರು: ಏರ್ ಇಂಡಿಯಾ ಎಕ್ಸ್‌ಪ್ರೆಸ್ ತನ್ನ ನೆಟ್‌ವರ್ಕ್ ವಿಸ್ತರಣೆಯನ್ನು ಮುಂದುವರೆಸಿದ್ದು, ಮಂಗಳವಾರ ಬೆಂಗಳೂರು-ಅಬು ಧಾಬಿ ನಡುವೆ ಮೊದಲ ನೇರ ಅಂತಾರಾಷ್ಟ್ರೀಯ ವಿಮಾನವನ್ನು ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 200 ವಾರದ ವಿಮಾನಗಳೊಂದಿಗೆ ಬೆಂಗಳೂರು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಅತಿದೊಡ್ಡ ನಿಲ್ದಾಣವಾಗಿದೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರು-ಅಬುಧಾಬಿ ಮಧ್ಯೆ ವಿಮಾನ ಹಾರಾಟ ಆರಂಭವಾಗುವುದರೊಂದಿಗೆ ಅಯೋಧ್ಯೆ, ಬಾಗ್ಡೋಗ್ರಾ, ಭುವನೇಶ್ವರ, ಚೆನ್ನೈ, ಗೋವಾ, ಗುವಾಹಟಿ, ಗ್ವಾಲಿಯರ್, ಹೈದರಾಬಾದ್, ಇಂದೋರ್, ಜೈಪುರ, ಕೋಲ್ಕತ್ತಾ, ಲಕ್ನೋ, ಪುಣೆ, ರಾಂಚಿ, ವಾರಣಾಸಿ ಮುಂತಾದ ನಗರಗಳಿಂದ ಬರುವ ಅತಿಥಿಗಳು ಈಗ ಬೆಂಗಳೂರು ಮಾರ್ಗವಾಗಿ ಅಬು ಧಾಬಿಗೆ ಪ್ರಯಾಣಿಸುವ ಆಯ್ಕೆ ಹೊಂದಿದ್ದಾರೆ ಎಂದು ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅಬುಧಾಬಿ- ಬೆಂಗಳೂರು, ಕಣ್ಣೂರು, ಕೊಚ್ಚಿ, ಕೋಝಿಕ್ಕೋಡ್, ಮಂಗಳೂರು, ಮುಂಬೈ, ತಿರುವನಂತಪುರಂ ಮತ್ತು ತಿರುಚಿರಾಪಳ್ಳಿಗೆ ಸಂಪರ್ಕಿಸುವ ನೇರ ವಿಮಾನಗಳನ್ನು ನಿರ್ವಹಿಸುತ್ತದೆ ಎಂದು ಏರ್ ಇಂಡಿಯಾ ಎಕ್ಸ್ ಪ್ರೆಸ್ ತಿಳಿಸಿದೆ.
Advertisement