ಸುಂಕ ಇಳಿಕೆಯಿಂದ ತಕ್ಷಣವೇ ಸ್ಮಾರ್ಟ್‌ಫೋನ್ ಬೆಲೆ ಕಡಿಮೆ ಆಗಲ್ಲ, ಆದರೆ ದೇಶೀಯ ಉತ್ಪಾದನೆಯನ್ನು ಹೆಚ್ಚಿಸುತ್ತದೆ: ತಜ್ಞರು

ಸ್ಮಾರ್ಟ್‌ಫೋನ್ ಬಿಡಿಭಾಗಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡುವ ಹಣಕಾಸು ಸಚಿವಾಲಯದ ನಿರ್ಧಾರದಿಂದ ತಕ್ಷಣಕ್ಕೆ ಸ್ಮಾರ್ಟ್‌ಫೋನ್ ಗಳ ಬೆಲೆ ಕಡಿಮೆಯಾಗುವುದಿಲ್ಲ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರTNIE
Updated on

ನವದೆಹಲಿ: ಸ್ಮಾರ್ಟ್‌ಫೋನ್ ಬಿಡಿಭಾಗಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡುವ ಹಣಕಾಸು ಸಚಿವಾಲಯದ ನಿರ್ಧಾರದಿಂದ ತಕ್ಷಣಕ್ಕೆ ಸ್ಮಾರ್ಟ್‌ಫೋನ್ ಗಳ ಬೆಲೆ ಕಡಿಮೆಯಾಗುವುದಿಲ್ಲ. ಆದರೆ ಇದು ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವ ನಿರೀಕ್ಷೆಯಿದೆ. ಈ ಘೋಷಣೆಯೂ ಭಾರತದ ದೇಶೀಯ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತದೆ ಎಂದು ಉದ್ಯಮ ತಜ್ಞರು ನಂಬಿದ್ದಾರೆ.

ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ನಿನ್ನೆ ಕೇಂದ್ರ ಸರ್ಕಾರದ ಮೂರನೇ ಅವಧಿಯ ಮೊದಲ ಪರಿಪೂರ್ಣ ಬಜೆಟ್ ಮಂಡಿಸಿದರು. ಈ ವೇಳೆ ಮೊಬೈಲ್ ಫೋನ್‌ಗಳು, ಮೊಬೈಲ್ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ ಅಸೆಂಬ್ಲಿ (ಪಿಸಿಬಿಎ) ಮತ್ತು ಮೊಬೈಲ್ ಚಾರ್ಜರ್‌ಗಳಿಗೆ ಮೂಲ ಕಸ್ಟಮ್ಸ್ ಸುಂಕದಲ್ಲಿ (ಬಿಸಿಡಿ) ಶೇಕಡ 15ರಷ್ಟು ಕಡಿತವನ್ನು ಘೋಷಿಸಿದರು.

ಕೇಂದ್ರದ ಈ ನಿರ್ಧಾರವು ಗ್ರಾಹಕರಿಗಿಂತ ಮೂಲ ಸಲಕರಣೆ ತಯಾರಕರಿಗೆ (OEM) ಹೆಚ್ಚು ಪ್ರಯೋಜನವನ್ನು ನೀಡುತ್ತದೆ ಎಂದು ಟೆಕ್ಆರ್ಕ್‌ನ ಸಂಸ್ಥಾಪಕ ಫೈಸಲ್ ಕವೂಸಾ ಹೇಳಿದ್ದಾರೆ. ಕಡಿತ ಪ್ರಯೋಜನವೂ ಗ್ರಾಹಕರಿಗೆ ಆಗುತ್ತಾ ಎಂಬ ಅನುಮಾನ ನನಗಿದೆ. ಏಕೆಂದರೆ ಇದು ಬೆಲೆಯ ಮೇಲೆ ಶೇಕಡ 1.5ಕ್ಕಿಂತ ಕಡಿಮೆ ಲಾಭ ಸಿಗುತ್ತದೆ. ಆದ್ದರಿಂದ, ಗ್ರಾಹಕರ ಮೇಲೆ ಈ ಕಡಿಮೆ ಕಡಿತ ಹೆಚ್ಚು ಗಮನಾರ್ಹ ಪರಿಣಾಮ ಬೀರುವುದಿಲ್ಲ. ಉದಾಹರಣೆಗೆ 20,000 ಮೌಲ್ಯದ ಫೋನ್‌ನಲ್ಲಿ, ರಿಯಾಯಿತಿಯು ಸುಮಾರು 300 ಆಗಿರುತ್ತದೆ. ಇದು ಗಣನೀಯ ಕಡಿತವಲ್ಲ ಎಂದು ಹೇಳಿದರು. ಆದರೆ OEMನ ವಾರ್ಷಿಕ ಆದಾಯ ರೂ. 40,000 ಕೋಟಿ ಆಗಿದ್ದು ಅದರಲ್ಲಿ ಶೇಕಡ 1.5ರಷ್ಟು ಕಡಿತವೂ ಅವರಿಗೆ ಗಮನಾರ್ಹ ಉಳಿತಾಯದ ಮೊತ್ತವಾಗುತ್ತದೆ ಎಂದರು.

Xiaomi ಇಂಡಿಯಾದಲ್ಲಿ ಚಾರ್ಜಿಂಗ್ ಕೇಬಲ್‌ಗಳು, ಕ್ಯಾಮೆರಾ ಮಾಡ್ಯೂಲ್‌ಗಳು ಮತ್ತು ಮೆಕ್ಯಾನಿಕ್ಸ್‌ನಂತಹ ಸೋರ್ಸಿಂಗ್ ಘಟಕಗಳ ಮೇಲೆ ಬಲವಾದ ಒತ್ತು ನೀಡುವ ಮೂಲಕ ನಾವು ನಮ್ಮ ಸುಮಾರು ಶೇಕಡ 100ರಷ್ಟು ಸ್ಮಾರ್ಟ್‌ಫೋನ್‌ಗಳನ್ನು ಸ್ಥಳೀಯವಾಗಿ ತಯಾರಿಸುತ್ತಿದ್ದೇವೆ. ಇಂದಿನ ಘೋಷಣೆಯೂ ದೇಶೀಯ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಸಹಾಯ ಮಾಡುತ್ತದೆ ಎಂದು Xiaomi ಇಂಡಿಯಾದ ಅಧ್ಯಕ್ಷ ಮುರಳಿಕೃಷ್ಣನ್ ಬಿ ಹೇಳಿದರು.

ಸಂಗ್ರಹ ಚಿತ್ರ
ಆರ್ಥಿಕ ಸಮೀಕ್ಷೆ: FY24ರಲ್ಲಿ ಭಾರತದ ಸ್ಮಾರ್ಟ್‌ಫೋನ್ ಉತ್ಪಾದನೆಯ ಶೇಕಡ 31ರಷ್ಟು ರಫ್ತಾಗಿದೆ!

ಮೊಬೈಲ್ ಫೋನ್ ಬ್ರ್ಯಾಂಡ್‌ಗಳಾದ ಟೆಕ್ನೋ, ಐಟೆಲ್ ಮತ್ತು ಇನ್ಫಿನಿಕ್ಸ್ ಅನ್ನು ನಿರ್ವಹಿಸುವ ಟ್ರಾನ್ಸ್‌ಷನ್ ಇಂಡಿಯಾ, ಉದ್ಯಮದ ಬೆಳವಣಿಗೆ ಮತ್ತು ಕೈಗೆಟುಕುವಿಕೆಗೆ ಈ ಕ್ರಮವನ್ನು ನಿರ್ಣಾಯಕ ಎಂದು ಪರಿಗಣಿಸುತ್ತದೆ. ಮೊಬೈಲ್ ಫೋನ್‌ಗಳು, ಮೊಬೈಲ್ ಪಿಸಿಬಿಎ ಮತ್ತು ಚಾರ್ಜರ್‌ಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೇಕಡ 20 ರಿಂದ 15ರಷ್ಟು ಇಳಿಸುವ ಹಣಕಾಸು ಸಚಿವಾಲಯದ ನಿರ್ಧಾರವನ್ನು ಸ್ವಾಗತಿಸುವುದಾಗಿ ಕಂಪನಿ ಹೇಳಿದೆ.

2024ರ ಬಜೆಟ್‌ನ ಮಂಡನೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾರತದ ಮೊಬೈಲ್ ಉದ್ಯಮದ ಪರಿಪಕ್ವತೆಯನ್ನು ಎತ್ತಿ ತೋರಿಸಿದರು. ಕಳೆದ ಆರು ವರ್ಷಗಳಲ್ಲಿ ದೇಶೀಯ ಉತ್ಪಾದನೆಯಲ್ಲಿ ಮೂರು ಪಟ್ಟು ಹೆಚ್ಚಳ ಮತ್ತು ರಫ್ತು ದ್ವಿಗುಣಗೊಂಡಿದೆ. ಗ್ರಾಹಕರಿಗೆ ಅನುಕೂಲವಾಗುವಂತೆ ಮೊಬೈಲ್ ಫೋನ್‌ಗಳು, ಮೊಬೈಲ್ PCBA ಮತ್ತು ಮೊಬೈಲ್ ಚಾರ್ಜರ್‌ಗಳಲ್ಲಿ BCD ಯಲ್ಲಿ ಶೇಕಡ 15ರಷ್ಟು ಕಡಿತ ಮಾಡುವುದಾಗಿ ಘೋಷಿಸಿದರು.

ಭಾರತವು FY24 ರಲ್ಲಿ ಶೇಕಡ 31ರಷ್ಟು ಸ್ಮಾರ್ಟ್‌ಫೋನ್‌ಗಳನ್ನು ರಫ್ತು ಮಾಡಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. 2014ರಲ್ಲಿ 23ನೇ ಸ್ಥಾನದಿಂದ ಇಂದು ವಿಶ್ವದ ಆರನೇ ಅತಿದೊಡ್ಡ ಸ್ಮಾರ್ಟ್‌ಫೋನ್ ರಫ್ತುದಾರ ದೇಶವಾಗಿದೆ. ಸ್ಮಾರ್ಟ್‌ಫೋನ್ ರಫ್ತು FY24 ರಲ್ಲಿ ದೃಢವಾದ ಶೇಕಡ 42.2ರಷ್ಟು ಬೆಳವಣಿಗೆಯನ್ನು ಕಂಡಿದೆ. ಇದು ಭಾರತದ ಪ್ರಮುಖ ಐದು ರಫ್ತು ವಸ್ತುಗಳಲ್ಲಿ ಒಂದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com