
ಥಾಣೆ: ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಅಭಿವೃದ್ಧಿ ಸಂಸ್ಥೆ ಪುರವಂಕರ (puravankara) ಲಿಮಿಟೆಡ್ ಥಾಣೆಯ ಪಾಟ್ಲಿಪಾಡ ಪ್ರದೇಶದಲ್ಲಿನ ಘೋಡ್ಬಂದರ್ ರಸ್ತೆಯಲ್ಲಿ 12.75 ಎಕರೆ ಪ್ರದೇಶದ ಭೂಮಿಯನ್ನು ಖರೀದಿಸಿದೆ.
ತನ್ನ ಅಂಗ ಸಂಸ್ಥೆ ಪುರ ಓಕ ಪ್ರೈವೆಟ್ ಲಿಮಿಟೆಡ್ ಮೂಲಕ ರಿಯಲ್ ಎಸ್ಟೇಟ್ ಸಂಸ್ಥೆ ಥಾಣೆಯಲ್ಲಿ ಭೂಮಿ ಖರೀದಿಸಿದೆ.
18.20 ಲಕ್ಷ ಚದರ ಅಡಿ ಕಾರ್ಪೆಟ್ ಪ್ರದೇಶವನ್ನು ಈ ಈ ಭೂಮಿ ಹೊಂದಿದ್ದು, ರಿಯಲ್ ಎಸ್ಟೇಟ್ ನ ಜಿಡಿವಿ (ಒಮ್ಮೆ ಯೋಜನೆ ಪೂರ್ಣಗೊಂಡ ನಂತರದ ಮೌಲ್ಯದ ಅಂದಾಜು) 4,000 ಕೋಟಿ ರೂಪಾಯಿ ಎನ್ನಲಾಗುತ್ತಿದೆ.
ಥಾಣೆಯಲ್ಲಿ ಈ ಕಾರ್ಯತಂತ್ರದ ವಿಸ್ತರಣೆ ಈಗಾಗಲೇ ಅಸ್ತಿತ್ವದಲ್ಲಿರುವ ಪಾಲಿ ಹಿಲ್ ಹಾಗೂ ಲೋಖಂಡವಾಲಾ ಯೋಜನೆಗಳ ಜೊತೆಗೆ ಹೊಸದಾಗಿ ಸೇರ್ಪಡೆಯಾಗಿರುವುದಾಗಿದ್ದು, MMR ನ ಸುಸ್ಥಿರ ಮತ್ತು ಕ್ರಿಯಾತ್ಮಕ ರಿಯಲ್ ಎಸ್ಟೇಟ್ ಮಾರುಕಟ್ಟೆಗೆ ನಮ್ಮ ಬದ್ಧತೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ ಎಂದು ಸಂಸ್ಥೆಯ ಎಂಡಿ ಅಶೀಶ್ ಪುರವಂಕರ ಹೇಳಿದ್ದಾರೆ.
ಎಂಎಂಆರ್ ಪೋರ್ಟ್ ಫೋಲಿಯೋಗೆ ಈ ಮೂರೂ ಸ್ವಾಧೀನಗಳ ಮೂಲಕ ನಾವು 7,500 ಕೋಟಿ ರೂಪಾಯಿಗಳ ಜಿಡಿವಿಯನ್ನು ಸೇರಿಸಿದ್ದೇವೆ. MMR ನಲ್ಲಿ ನಮ್ಮ ನಿರಂತರ ಹೂಡಿಕೆಯು ಅಂತರರಾಷ್ಟ್ರೀಯ ಗುಣಮಟ್ಟದ ಮನೆಗಳನ್ನು ವಿಶ್ವಾಸ ಮತ್ತು ಪಾರದರ್ಶಕತೆಯೊಂದಿಗೆ ತಲುಪಿಸುವ ನಮ್ಮ ದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ ಎಂದು ಅಶೀಶ್ ಹೇಳಿದ್ದಾರೆ.
ನವೆಂಬರ್ 2023 ರಲ್ಲಿ, ಅಂಧೇರಿ ಪಶ್ಚಿಮದ ಲೋಖಂಡವಾಲಾ ಪ್ರದೇಶದಲ್ಲಿ 3 ಎಕರೆಗಳಷ್ಟು ವಿಸ್ತಾರವಾಗಿರುವ ಎರಡು ಹೌಸಿಂಗ್ ಸೊಸೈಟಿಗಳ ಪುನರಾಭಿವೃದ್ಧಿಯನ್ನು ಕೈಗೊಳ್ಳಲು ಪುರವಂಕರ ಹಕ್ಕುಗಳನ್ನು ಪಡೆದುಕೊಂಡಿತ್ತು.
Advertisement