ಹೊಸ ನೇಮಕಾತಿಯಲ್ಲಿ ಶೇ.25 ರಷ್ಟು ವಿವಾಹಿತ ಮಹಿಳೆಯರಿದ್ದಾರೆ: ತಾರತಮ್ಯದ ಆರೋಪ ತಳ್ಳಿಹಾಕಿದ Foxconn

ಆ್ಯಪಲ್ ಐಫೋನ್ ತಯಾರಕ ಸಂಸ್ಥೆ ಫಾಕ್ಸ್ ಕಾನ್ ತನ್ನ ಸಂಸ್ಥೆ ವಿವಾಹಿತ ಮಹಿಳೆಯರನ್ನು ನೇಮಕ ಮಾಡಿಕೊಳ್ಳುತ್ತಿಲ್ಲ ಎಂಬ ಆರೋಪವನ್ನು ತಳ್ಳಿಹಾಕಿದೆ.
Foxconn
ಫಾಕ್ಸ್ ಕಾನ್ (ಸಾಂಕೇತಿಕ ಚಿತ್ರ)online desk
Updated on

ಆ್ಯಪಲ್ ಐಫೋನ್ ತಯಾರಕ ಸಂಸ್ಥೆ ಫಾಕ್ಸ್ ಕಾನ್ ತನ್ನ ಸಂಸ್ಥೆ ವಿವಾಹಿತ ಮಹಿಳೆಯರನ್ನು ನೇಮಕ ಮಾಡಿಕೊಳ್ಳುತ್ತಿಲ್ಲ ಎಂಬ ಆರೋಪವನ್ನು ತಳ್ಳಿಹಾಕಿದೆ.

ಸರ್ಕಾರಕ್ಕೆ ಈ ಬಗ್ಗೆ ಅನೌಪಚಾರಿಕ ಮಾಹಿತಿ ನೀಡಿರುವ ಫಾಕ್ಸ್ ಕಾನ್ ಸಂಸ್ಥೆ ಹೊಸದಾಗಿ ತಾನು ನೇಮಕ ಮಾಡಿಕೊಂಡಿರುವ ಒಟ್ಟು ಉದ್ಯೋಗಿಗಳ ಪೈಕಿ ಶೇ.25 ರಷ್ಟು ಮಂದಿ ವಿವಾಹಿತ ಮಹಿಳೆಯರಾಗಿದ್ದಾರೆ ಎಂದು ತಿಳಿಸಿದೆ. ಅಷ್ಟೇ ಅಲ್ಲದೇ ಧರ್ಮ, ಲಿಂಗದ ಹೊರತಾಗಿ ಎಲ್ಲಾ ಉದ್ಯೋಗಿಗಳೂ ಲೋಹವನ್ನು ಧರಿಸುವುದನ್ನು ತಪ್ಪಿಸುವುದು ಸುರಕ್ಷತಾ ಪ್ರೋಟೋಕಾಲ್ ದೃಷ್ಟಿಯಿಂದ ಎಲ್ಲರಿಗೂ ಅನ್ವಯವಾಗಲಿದೆ ಇದು ತಾರತಮ್ಯವಲ್ಲ ಎಂದು ಸಂಸ್ಥೆ ಹೇಳಿದೆ.

ವಿವಾಹಿತ ಮಹಿಳೆಯರನ್ನು ನೇಮಕ ಮಾಡಿಕೊಳ್ಳಬಾರದೆಂಬ ನಿಬಂಧನೆಗಳು ಸಂಸ್ಥೆಯ ನೀತಿಗಳಲ್ಲಿಲ್ಲ. ಯಾರನ್ನು ನೌಕರಿಗೆ ತೆಗೆದುಕೊಳ್ಳಲಾಗಿಲ್ಲವೋ ಅಂಥವರು ವ್ಯಕ್ತಿಗತವಾಗಿ ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

ಈ ರೀತಿಯ ಆರೋಪದ ಕುರಿತ ಮಾಧ್ಯಮಗಳ ವರದಿಗಳು ವೇಗವಾಗಿ ಬೆಳೆಯುತ್ತಿರುವ ಭಾರತೀಯ ಉತ್ಪಾದನಾ ವಲಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಸಂಸ್ಥೆ ಹೇಳಿದೆ. ಏತನ್ಮಧ್ಯೆ, ಫಾಕ್ಸ್‌ಕಾನ್ ಇಂಡಿಯಾ ಆಪಲ್ ಐಫೋನ್ ಘಟಕದಲ್ಲಿ ವಿವಾಹಿತ ಮಹಿಳೆಯರಿಗೆ ಕೆಲಸ ಮಾಡಲು ಅನುಮತಿಸದ ವಿಷಯದ ಬಗ್ಗೆ ಮಾಧ್ಯಮಗಳು ವರದಿ ಮಾಡಿದಂತೆ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಬುಧವಾರ ತಮಿಳುನಾಡು ಕಾರ್ಮಿಕ ಇಲಾಖೆಯಿಂದ ವಿಸ್ತೃತ ವರದಿಯನ್ನು ಕೇಳಿದೆ.

Foxconn
Foxconn ತಮಿಳುನಾಡು ಘಟಕದಲ್ಲಿ ವಿವಾಹಿತ ಮಹಿಳೆಯರಿಗಿಲ್ಲ ಕೆಲಸ; ವರದಿ ಕೇಳಿದ ಕೇಂದ್ರ

ಫಾಕ್ಸ್‌ಕಾನ್ ಕಾರ್ಖಾನೆಯು ಪ್ರಸ್ತುತ ಶೇಕಡಾ 70 ರಷ್ಟು ಮಹಿಳೆಯರು ಮತ್ತು ಶೇಕಡಾ 30 ರಷ್ಟು ಪುರುಷರನ್ನು ಹೊಂದಿದೆ ಮತ್ತು ತಮಿಳುನಾಡು ಸ್ಥಾವರವು ದೇಶದಲ್ಲಿ ಮಹಿಳಾ ಉದ್ಯೋಗಕ್ಕಾಗಿ ಅತಿದೊಡ್ಡ ಕಾರ್ಖಾನೆಯಾಗಿದೆ ಮತ್ತು ಒಟ್ಟು ಉದ್ಯೋಗವು ಗರಿಷ್ಠ ಅವಧಿಯಲ್ಲಿ 45,000 ಕಾರ್ಮಿಕರ ಸಂಖ್ಯೆಯನ್ನು ಮುಟ್ಟಿದೆ ಎಂದು ಸಂಸ್ಥೆ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com