ಭಾರತದ ಅತ್ಯಂತ ಕಿರಿಯ ಮಿಲಿಯನೇರ್ 4 ತಿಂಗಳ ಏಕಾಗ್ರ್ ರೋಹನ್! ಅದು ಯಾರು ಗೊತ್ತಾ?

4 ತಿಂಗಳ ಮಗು ಏಕಾಗ್ರ್ ರೋಹನ್ ಮೂರ್ತಿ 240 ಕೋಟಿ ರೂಪಾಯಿಗಳನ್ನು ಹೊಂದಿದ್ದು, ಭಾರತದ ಅತ್ಯಂತ ಕಿರಿಯ ಮಿಲಿಯನೇರ್ ಎಂಬ ಖ್ಯಾತಿ ಪಡೆದೆ.
ಭಾರತದ ಅತ್ಯಂತ ಕಿರಿಯ ಮಿಲಿಯನೇರ್ 4 ತಿಂಗಳ ಏಕಾಗ್ರ್ ರೋಹನ್! ಅದು ಯಾರು ಗೊತ್ತಾ?

ಬೆಂಗಳೂರು: 4 ತಿಂಗಳ ಮಗು ಏಕಾಗ್ರ್ ರೋಹನ್ ಮೂರ್ತಿ 240 ಕೋಟಿ ರೂಪಾಯಿಗಳನ್ನು ಹೊಂದಿದ್ದು, ಭಾರತದ ಅತ್ಯಂತ ಕಿರಿಯ ಮಿಲಿಯನೇರ್ ಎಂಬ ಖ್ಯಾತಿ ಪಡೆದೆ. ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ಹಾಗೂ ಲೇಖಕಿ ಸುಧಾ ಮೂರ್ತಿ ಅವರ ಪುತ್ರ ರೋಹನ್ ಮೂರ್ತಿ ಮಗ ಏಕಾಗ್ರ್ ಮೂರ್ತಿ ಆಗಿದ್ದು, ನ.10, 2023 ರಂದು ಮಗು ಜನಿಸಿತ್ತು.

ಭಾರತದ ಅತ್ಯಂತ ಕಿರಿಯ ಮಿಲಿಯನೇರ್ 4 ತಿಂಗಳ ಏಕಾಗ್ರ್ ರೋಹನ್! ಅದು ಯಾರು ಗೊತ್ತಾ?
ಇನ್ಫೋಸಿಸ್ ನಾರಾಯಣ ಮೂರ್ತಿ ಸಲಹೆಗೆ ಸಚಿವರಿಂದ ತೀವ್ರ ವಿರೋಧ

4 ತಿಂಗಳ ಮಗು ಇನ್ಫೋಸಿಸ್ ಷೇರುಗಳಲ್ಲಿ 0.04 ರಷ್ಟು ಪಾಲು ಹೊಂದಿದ್ದು, ಇದರ ಮೌಲ್ಯ 240 ಕೋಟಿ ರೂಪಾಯಿಗಳಾಗಿದೆ. ಇದನ್ನು ನಾರಾಯಣ ಮೂರ್ತಿ ಮಗುವಿಗೆ ಉಡುಗೊರೆ ರೂಪದಲ್ಲಿ ನೀಡಿದ್ದಾರೆ. ಏಕಾಗ್ರಃ ಎಂಬುದು ಸಂಸ್ಕೃತ ಶಬ್ದವಾಗಿದ್ದು, ಮಹಾಭಾರತದಲ್ಲಿ ಅರ್ಜುನನಿಗೆ ಈ ಹೆಸರಿತ್ತು ಎಂದು ಹೇಳಲಾಗುತ್ತದೆ. ಈ ಹೆಸರು ಭಗವದ್ಗೀತೆಯ 6 ನೇ ಅಧ್ಯಾಯದಲ್ಲಿ ಕಂಡುಬರುತ್ತದೆ, ಇದು ಸ್ವಯಂ-ಸಾಕ್ಷಾತ್ಕಾರದ ಕಡೆಗೆ ಯೋಗ ಮತ್ತು ಧ್ಯಾನವನ್ನು ಕೇಂದ್ರೀಕರಿಸುತ್ತದೆ.

ಭಾರತದ ಅತ್ಯಂತ ಕಿರಿಯ ಮಿಲಿಯನೇರ್ 4 ತಿಂಗಳ ಏಕಾಗ್ರ್ ರೋಹನ್! ಅದು ಯಾರು ಗೊತ್ತಾ?
ಯಾವುದನ್ನೂ ಫ್ರೀಯಾಗಿ ಕೊಡಬಾರದು, ಕೊಟ್ಟರೆ ಪಡೆದುಕೊಂಡವರು ಸಮಾಜದ ಒಳಿತಿಗೆ ಏನಾದರೂ ಮಾಡಬೇಕು: ನಾರಾಯಣ ಮೂರ್ತಿ

ಈ ಮಗು ನಾರಾಯಣ ಮೂರ್ತಿ ದಂಪತಿಗೆ 3 ನೇ ಮೊಮ್ಮಗುವಾಗಿದ್ದು, ಮೊದಲ ಇಬ್ಬರು ಮೊಮ್ಮಕ್ಕಳು ಅಕ್ಷತಾ ಮೂರ್ತಿ ಹಾಗೂ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಮಕ್ಕಳಾಗಿದ್ದಾರೆ. ಏಕಾಗ್ರಃ 4 ತಿಂಗಳಿಗೇ ಮಿಲಿಯನೇರ್ ಆಗಿದ್ದರೆ, ಬ್ರಿಟನ್ ನಲ್ಲಿ 2023 ರಲ್ಲಿ 2 ತಿಂಗಳ ಮಗುವಿಗೆ ಅಜ್ಜ 10 ಕೋಟಿ ರೂಪಾಯಿ ಮೌಲ್ಯದ ಮನೆ ಹಾಗೂ 52 ಕೋಟಿ ರೂಪಾಯಿ ನೀಡಿದ್ದರ ಪರಿಣಾಮ 2 ತಿಂಗಳ ಮಗು ಮಿಲಿಯನೇರ್ ಆಗಿತ್ತು.

ಬ್ರಿಟಿಷ್ ಉದ್ಯಮಿ ಮತ್ತು LGBTQ ಕಾರ್ಯಕರ್ತ ಬ್ಯಾರಿ ಡ್ರೆವಿಟ್-ಬಾರ್ಲೋ ಅವರು 200 ಮಿಲಿಯನ್ ಪೌಂಡ್ (ರೂ. 2,000 ಕೋಟಿಗಿಂತ ಹೆಚ್ಚು) ಮೌಲ್ಯದವರಾಗಿದ್ದು, ತಮ್ಮ ಮೊಮ್ಮಗುವಿಗೆ ಈ ಉಡುಗೊರೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com