ಸಸ್ಯಹಾರಿಗಳಿಗಾಗಿ 'Pure Veg Mode' ಮತ್ತು 'ಶುದ್ಧ ಸಸ್ಯಹಾರ ವಿತರಣೆ' ಪ್ರಾರಂಭ; Zomato ಹೊಸ ಸೇವೆ!

ಆಹಾರ ಉತ್ಪನ್ನಗಳನ್ನು ಪೂರೈಸುವ ಆನ್‌ಲೈನ್ ಪ್ಲಾಟ್‌ಫಾರ್ಮ್ ಜೊಮಾಟೊದ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ದೀಪಿಂದರ್ ಗೋಯಲ್ ಅವರು ಶುದ್ಧ ವೆಜ್ ಮೋಡ್ ಮೂಲಕ ಆಹಾರ ವಿತರಣಾ ಸೇವೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರTNIE
Updated on

ಆಹಾರ ಉತ್ಪನ್ನಗಳನ್ನು ಪೂರೈಸುವ ಆನ್‌ಲೈನ್ ಪ್ಲಾಟ್‌ಫಾರ್ಮ್ ಜೊಮಾಟೊದ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ದೀಪಿಂದರ್ ಗೋಯಲ್ ಅವರು ಶುದ್ಧ ವೆಜ್ ಮೋಡ್ ಮೂಲಕ ಆಹಾರ ವಿತರಣಾ ಸೇವೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ.

ಶುದ್ಧ ಸಸ್ಯಾಹಾರವನ್ನು ಅಳವಡಿಸಿಕೊಳ್ಳುವ ಗ್ರಾಹಕರ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಈ ಸೇವೆಯನ್ನು ಪ್ರಾರಂಭಿಸಿದೆ. ಸಸ್ಯಾಹಾರಿ ಗ್ರಾಹಕರ ಪ್ರತಿಕ್ರಿಯೆಯೇ ಹೊಸ ಸೇವೆಯನ್ನು ಪ್ರಾರಂಭಿಸಲು ಕಾರಣ ಎಂದು ಅವರು ಉಲ್ಲೇಖಿಸಿದ್ದಾರೆ. ಭಾರತದಲ್ಲಿ ಶೇಕಡ ನೂರರಷ್ಟು ಸಸ್ಯಾಹಾರಿ ಆಹಾರವನ್ನು ಅನುಸರಿಸುವ ಗ್ರಾಹಕರಿಗಾಗಿ ಆನ್‌ಲೈನ್ ಪ್ಲಾಟ್‌ಫಾರ್ಮ್ 'ಪ್ಯೂರ್ ವೆಜ್ ಫ್ಲೀಟ್' ಅನ್ನು ಸಹ ಪ್ರಾರಂಭಿಸುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಗೋಯಲ್ ಸಾಮಾಜಿಕ ಜಾಲತಾಣ 'ಎಕ್ಸ್' ನಲ್ಲಿ ಪೋಸ್ಟ್ ಮಾಡಿದ್ದು, ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಸಸ್ಯಾಹಾರಿ ಜನರನ್ನು ಹೊಂದಿದೆ ಎಂದು ಹೇಳಿದ್ದಾರೆ.

ಶುದ್ಧ ಸಸ್ಯಾಹಾರಿಗಳು ತಮ್ಮ ಆಹಾರವನ್ನು ಹೇಗೆ ಬೇಯಿಸಬೇಕು ಮತ್ತು ಅದನ್ನು ಹೇಗೆ ಬಳಸಬೇಕು ಎಂಬುದರ ಕುರಿತು ತುಂಬಾ ಗಂಭೀರವಾಗಿರುತ್ತಾರೆ ಎಂದು Zomato CEO ಹೇಳಿದರು. 'ಸಸ್ಯಹಾರಿಗಳ ಆಹಾರದ ಆದ್ಯತೆಗಳನ್ನು ಪರಿಹರಿಸಲು, ನಾವು ಇಂದು 100 ಪ್ರತಿಶತ ಸಸ್ಯಾಹಾರಿ ಆಹಾರವನ್ನು ಆದ್ಯತೆ ನೀಡುವ ಗ್ರಾಹಕರಿಗಾಗಿ Zomato ನಲ್ಲಿ 'Pure Veg Fleet' ಜೊತೆಗೆ 'Pure Veg Mode'ವನ್ನು ಪ್ರಾರಂಭಿಸುತ್ತಿದ್ದೇವೆ" ಎಂದು ಅವರು ಹೇಳಿದರು.

ಸಂಗ್ರಹ ಚಿತ್ರ
ಜೊಮ್ಯಾಟೊ ಸಹ ಸಂಸ್ಥಾಪಕ ಮೋಹಿತ್ ಗುಪ್ತಾ ರಾಜೀನಾಮೆ

ಮಾಂಸಾಹಾರಿ ಹೋಟೆಲ್ ಗಳನ್ನು ಹೊರತುಪಡಿಸಿ, ಪ್ರತ್ಯೇಕವಾಗಿ ಸಸ್ಯಾಹಾರಿ ಆಹಾರವನ್ನು ಒದಗಿಸುವ ರೆಸ್ಟೋರೆಂಟ್‌ಗಳ ಆಯ್ಕೆಯನ್ನು 'Pure Veg Mode' ಒಳಗೊಂಡಿದೆ ಎಂದು ಗೋಯಲ್ ಹಂಚಿಕೊಂಡಿದ್ದಾರೆ. ಯಾವುದೇ ಧಾರ್ಮಿಕ ಅಥವಾ ರಾಜಕೀಯ ಆದ್ಯತೆಗಳಿಗಾಗಿ ತಮ್ಮ ಹೆಜ್ಜೆ ಇಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು. ಆದಾಗ್ಯೂ, ಈ ಕ್ರಮಕ್ಕಾಗಿ Zomato CEO ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಭಾಗವು ಟೀಕಿಸಿದೆ.

ಝೊಮಾಟೊದ ಎಲ್ಲಾ ಸಸ್ಯಾಹಾರಿ ಫ್ಲೀಟ್ ಹಸಿರು ಪೆಟ್ಟಿಗೆಗಳನ್ನು ಹೊಂದಿರುತ್ತದೆ. ಸಾಂಪ್ರದಾಯಿಕ ಕೆಂಪು ಪೆಟ್ಟಿಗೆಗಳನ್ನು ಹೊಂದಿರುವುದಿಲ್ಲ ಎಂದು ಗೋಯಲ್ ಹೇಳಿದರು. ಈ ಆಹಾರ ಸರಬರಾಜು ಮಾಡುವ ವ್ಯಕ್ತಿಗಳು ಶುದ್ಧ ಸಸ್ಯಾಹಾರಿ ರೆಸ್ಟೋರೆಂಟ್‌ಗಳಿಂದ ಪ್ರತ್ಯೇಕವಾಗಿ ಆರ್ಡರ್‌ಗಳನ್ನು ತಲುಪಿಸುತ್ತಾರೆ ಮತ್ತು ಯಾವುದೇ ಮಾಂಸಾಹಾರಿ ಆಹಾರವನ್ನು ನಿರ್ವಹಿಸುವುದಿಲ್ಲ ಎಂದು ಗೋಯಲ್ ಸ್ಪಷ್ಟಪಡಿಸಿದ್ದಾರೆ. ಇದಲ್ಲದೆ, ಅವರು ಹಸಿರು ಬಾಕ್ಸ್ ಹೊಂದಿರುವ ಮಾಂಸಾಹಾರಿ ರೆಸ್ಟೋರೆಂಟ್‌ಗೆ ಪ್ರವೇಶಿಸುವುದಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com