127 ವರ್ಷಗಳ ನಂತರ ಗೊದ್ರೇಜ್ ಸಮೂಹ ಇಬ್ಭಾಗ!

127 ವರ್ಷಗಳ ದೀರ್ಘ ಇತಿಹಾಸ ಹೊಂದಿರುವ ಗೋದ್ರೆಜ್‌ ಸಮೂಹ ಸಂಸ್ಥೆ ಇಬ್ಭಾಗವಾಗಲು ನಿರ್ಧರಿಸಿದೆ. ದೇಶದ ಮುಖ ಕಂಪನಿಗಳಲ್ಲಿ ಒಂದಾಗಿರುವ ಗೋದ್ರೆಜ್‌ ಸಮೂಹ ಇಬ್ಭಾಗವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: 127 ವರ್ಷಗಳ ದೀರ್ಘ ಇತಿಹಾಸ ಹೊಂದಿರುವ ಗೋದ್ರೆಜ್‌ ಸಮೂಹ ಸಂಸ್ಥೆ ಇಬ್ಭಾಗವಾಗಲು ನಿರ್ಧರಿಸಿದೆ. ದೇಶದ ಮುಖ ಕಂಪನಿಗಳಲ್ಲಿ ಒಂದಾಗಿರುವ ಗೋದ್ರೆಜ್‌ ಸಮೂಹ ಇಬ್ಭಾಗವಾಗಿದೆ.

ಷೇರುಗಳನ್ನು ಪುನರ್‌ ರಚಿಸಲು ಕಂಪನಿ ಮುಂದಾಗಿದ್ದು, ಗೋದ್ರೇಜ್‌ ಎಂಟರ್‌ಪ್ರೈಸಸ್‌ ಹಾಗೂ ಗೋದ್ರೇಜ್ ಇಂಡಸ್ಟ್ರೀಸ್ ಎನ್ನುವ ಎರಡು ಪ್ರತ್ಯೇಕ ಕಂಪನಿಗಳಾಗಿ ಕಾರ್ಯನಿರ್ವಹಿಸಲಿವೆ ಎಂದು ಷೇರುಪೇಟೆಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದೆ.

ಸಂಬಂಧಪಟ್ಟ ನಿಯಂತ್ರಕ ಅನುಮೋದನೆ ಲಭಿಸಿದ ಬಳಿಕ ಎರಡು ಪ್ರತ್ಯೇಕ ಉದ್ಯಮವಾಗಿ ಕಾರ್ಯನಿರ್ವಹಿಸಲಿದ್ದು, ಉಭಯ ಕಂಪನಿಗಳೂ ಗೋದ್ರೆಜ್ ಬ್ರಾಂಡ್‌ ಅನ್ನೇ ಬಳಸಲಿವೆ ಎಂದು ತಿಳಿಸಿದೆ.

ಜಮ್ಶೆಡ್ ಗೋದ್ರೆಜ್ ಅವರು ಗೋದ್ರೆಜ್‌ ಎಂಟರ್‌ಪ್ರೈಸಸ್ ಗ್ರೂಪ್‌ನ (ಜಿಇಜಿ) ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿರಲಿದ್ದು, ಅವರ ಸೊಸೆ ನೈರಿಕಾ ಹೋಳ್ಕರ್ ಅವರು ಕಾರ್ಯನಿರ್ವಾಹಕ ನಿರ್ದೇಶಕಿಯಾಗಿರಲಿದ್ದಾರೆ. ಅಂತರಿಕ್ಷಯಾನ, ​​ವಾಯುಯಾನ, ರಕ್ಷಣಾ ಮತ್ತು ದ್ರವ ಎಂಜಿನ್‌ಗಳ ಉತ್ಪಾದನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ.

ಸಂಗ್ರಹ ಚಿತ್ರ
ಗೋದ್ರೇಜ್ ಪ್ರಾಪರ್ಟೀಸ್ ಲಾಭ ಕುಸಿತ

73 ವರ್ಷದ ನಾದಿರ್ ಗೋದ್ರೆಜ್ ಅವರು ಗೋದ್ರೆಜ್ ಇಂಡಸ್ಟ್ರೀಸ್ ಗ್ರೂಪ್‌ನ (ಜಿಐಜಿ) ಅಧ್ಯಕ್ಷರಾಗಿರಲಿದ್ದಾರೆ. ಗೋದ್ರೆಜ್ ಇಂಡಸ್ಟ್ರೀಸ್‌, ಗೋದ್ರೆಜ್ ಕನ್ಸೂಮರ್ ಪ್ರಾಡಕ್ಟ್ಸ್, ಗೋದ್ರೆಜ್ ಪ್ರಾಪರ್ಟೀಸ್ ಮುಂತಾದ ಉದ್ಯಮಗಳು ಜಿಐಜಿಯ ಭಾಗವಾಗಿರಲಿದೆ.

ಸಿಎನ್‌ಬಿಸಿ ಆವಾಜ್ ವರದಿಯ ಪ್ರಕಾರ, ಆದಿ ಗೋದ್ರೇಜ್ ಮತ್ತು ನಾದಿರ್ ಗೋದ್ರೇಜ್ ಈ ವಿಭಜನೆಯ ಅಡಿಯಲ್ಲಿ ಪಟ್ಟಿ ಮಾಡಲಾದ ಕಂಪನಿಗಳಲ್ಲಿ ಹೆಚ್ಚಿನ ಪಾಲನ್ನು ಪಡೆಯುತ್ತಾರೆ. ಮತ್ತೊಂದೆಡೆ, ಗೋದ್ರೇಜ್ ಮತ್ತು ಬಾಯ್ಸ್ ನಿಯಂತ್ರಣವು ಜಮ್ಶೆಡ್ ಗೋದ್ರೇಜ್ ಮತ್ತು ಸ್ಮಿತಾ ಗೋದ್ರೇಜ್‌ಗೆ ಹೋಗಲಿದೆ.

ಅರ್ದೇಶಿರ್ ಗೋದ್ರೇಜ್ ಹುಟ್ಟುಹಾಕಿದ ಮೊದಲ ಕಂಪನಿಯಲ್ಲಿ ಮೇಡ್‌ ಇನ್‌ ಇಂಡಿಯಾ ಎಂದು ಬರೆದು ಇಂಗ್ಲಿಷರ ಕೆಂಗಣ್ಣಿಗೆ ಗುರಿಯಾಗಿದ್ದರು. ಸವಾಲುಗಳನ್ನೆಲ್ಲಾ ಮೆಟ್ಟಿನಿಂತು ಗೋದ್ರೇಜ್‌ ಎಂಬ ಕಂಪನಿಯನ್ನು ಸ್ಥಾಪಿಸಿದರು. ಈ ಕಂಪನಿ ನೋಡ ನೋಡುತ್ತಲೇ ಗೃಹೋಪಯೋಗಿ ಕ್ಷೇತ್ರದಲ್ಲಿ ತನ್ನ ಗುರುತನ್ನು ಮೂಡಿಸುತ್ತಾ ಸಾಗಿತು. ಅಲ್ಲದೆ ದೊಡ್ಡ ಕಾರ್ಪೊರೇಟ್‌ ಕಂಪನಿಯಾಗಿ ಬೆಳೆದು ನಿಂತಿತು. 127 ವರ್ಷಗಳ ಇತಿಹಾಸದ ಈ ಕಂಪನಿಯ ಈಗ ವಿಭಜನೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com