
ಬೆಂಗಳೂರು: ಅಕ್ಷಯ ತೃತೀಯದ (Akshaya Tritiya 2024 2024) ದಿನದಂದು ಭಾರತದಲ್ಲಿ ಚಿನ್ನದ ವ್ಯಾಪಾರ ಏರಿಕೆ ಕಂಡಿದೆ. ಆನ್ ಲೈನ್ ವೇದಿಕೆಗಳಲ್ಲಿ ಭರ್ಜರಿಯಾಗಿ ಚಿನ್ನದ ವ್ಯಾಪಾರ ನಡೆದಿದ್ದು, ಹಳದಿ ಲೋಹದ ಮಾರಾಟದಲ್ಲಿ ಶೇ.500 ರಷ್ಟು ಏರಿಕೆ ದಾಖಲಾಗಿದೆ.
ಬ್ಲಿಂಕ್ ಇಟ್, ಸ್ವಿಗ್ಗಿ ಇನ್ಸ್ಟಾಮಾರ್ಟ್, ಬಿಗ್ ಬ್ಯಾಸ್ಕೆಟ್, ಝೆಪ್ಟೋ ತಮ್ಮ ವೇದಿಕೆಗಳಲ್ಲಿ ಚಿನ್ನ ಖರೀದಿಸುವವರಿಗೆ 10 ನಿಮಿಷಗಳಲ್ಲಿ ಚಿನ್ನ ಹಾಗೂ ಬೆಳ್ಳಿ ನಾಣ್ಯಗಳನ್ನು ತಲುಪಿಸುವ ವಿಶೇಷ ಆಫರ್ ನೀಡಿತ್ತು.
ಅಕ್ಷಯ ತೃತೀಯದ ದಿನದಂದು ಗ್ರಾಹಕರ ಮನೆಬಾಗಿಲಿಗೆ ಚಿನ್ನ ಹಾಗೂ ಬೆಳ್ಳಿ ನಾಣ್ಯಗಳನ್ನು ತಲುಪಿಸುವ ಭಾಗವಾಗಿ ಬಿಗ್ ಬ್ಯಾಸ್ಕೆಟ್ ತನಿಷ್ಕ್ ಹಾಗೂ ಎಂಎಂಟಿಸಿ-ಪಿಎಎಂಪಿ ಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದರೆ, ಸ್ವಿಗ್ಗಿ ಇನ್ಸ್ಟಾಮಾರ್ಟ್ ಮಲ್ಬಾರ್ ಗೋಲ್ಡ್ ಹಾಗೂ ಡೈಮಂಡ್ಸ್ ಹಾಗೂ ಮುತ್ತೂಟ್ ಎಕ್ಸಿಮ್ ಗಳೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಜೆಪ್ಟೋ ನೆಕ್ ಜ್ಯೂವೆಲರಿಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು.
ಈ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ನೀಡಿರುವ, ಇನ್ಸ್ಟಾಮಾರ್ಟ್ ನ ಮುಖ್ಯಸ್ಥರೂ ಆಗಿರುವ ಸ್ವಿಗ್ಗಿ ಸಹ ಸಂಸ್ಥಾಪಕ ಪಣಿ ಕಿಶನ್, ತಮ್ಮ ವೇದಿಕೆ ಧನತ್ರಯೋದಶಿ(Dhanteras) ಚಿನ್ನದ ಮಾರಾಟದಲ್ಲಿ ಶೇ.500 ರಷ್ಟು ಏರಿಕೆ ಕಂಡಿದೆ.
ಇದೇ ವೇಳೆ ಫೋನ್ ಪೇ ಆಫರ್ ಘೋಷಣೆ ಮಾಡಿದ್ದು, ತನ್ನ ಆಪ್ ಮೂಲಕ ಕನಿಷ್ಟ 1000 ರೂಪಾಯಿ ಮೌಲ್ಯದ ಆರ್ಡರ್ ಗಳಿಗೆ 2,000 ರೂಗಳವರೆಗೂ ಕ್ಯಾಶ್ ಬ್ಯಾಕ್ ಆಫರ್ ನೀಡಿದೆ. ಇದು ಏಕ ಕಾಲಕ್ಕೆ 24ಕೆ ಡಿಜಿಟಲ್ ಚಿನ್ನದ ಖರೀದಿಗೆ ಮಾತ್ರ ಅನ್ವಯವಾಗಲಿದೆ. ಮೇ 12ರವರೆಗೆ ಕ್ಯಾರಟ್‌ಲೇನ್ ಸ್ಟೋರ್‌ಗಳಲ್ಲಿ ಡಿಜಿಟಲ್ ಚಿನ್ನವನ್ನು ಪಡೆದುಕೊಳ್ಳಲು ವಿಶೇಷ ಕೊಡುಗೆಯನ್ನು ಸಹ ಫೋನ್ ಪೇ ಪ್ರಕಟಿಸಿದೆ.
ಚಿನ್ನದ ದರ ಇಳಿಕೆ
ಅಕ್ಷಯ ತೃತೀಯದ ನಂತರ ಇಂದು ಚಿನ್ನದ ದರದಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ ಪ್ರತಿ 10 ಗ್ರಾಮ್ ಚಿನ್ನದ ದರದಲ್ಲಿ 300 ರೂಪಾಯಿ ಕಡಿಮೆಯಾಗಿದೆ.
Advertisement