ಅಕ್ಷಯ ತೃತೀಯ: ಚಿನ್ನದ ದರ 850 ರೂ. ಏರಿಕೆ, ಇಂದಿನ ಬೆಲೆಗಳು ಇಂತಿವೆ!

ಪವಿತ್ರ ಅಕ್ಷಯ ತೃತೀಯ ದಿನದಂದು ಚಿನ್ನವನ್ನು ಮನೆಗೆ ತಂದರೆ ಶುಭವಾಗುತ್ತದೆ ಎಂಬ ಮಾತಿನ ನಡುವೆಯೇ ಇಂದು ಮಹಿಳೆಯರೆ ನೆಚ್ಚಿನ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.
ಚಿನ್ನದ ದರ
ಚಿನ್ನದ ದರ

ಮುಂಬೈ: ಪವಿತ್ರ ಅಕ್ಷಯ ತೃತೀಯ ದಿನದಂದು ಚಿನ್ನವನ್ನು ಮನೆಗೆ ತಂದರೆ ಶುಭವಾಗುತ್ತದೆ ಎಂಬ ಮಾತಿನ ನಡುವೆಯೇ ಇಂದು ಮಹಿಳೆಯರೆ ನೆಚ್ಚಿನ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.

ಹೌದು.. ದೇಶಾದ್ಯಂತ ಇಂದು ಪವಿತ್ರ ಅಕ್ಷಯ ತೃತೀಯ ದಿನವನ್ನು ಆಚರಣೆ ಮಾಡುತ್ತಿದ್ದು, ಇದೇ ಸಂದರ್ಭದಲ್ಲಿ ಹಳದಿ ಲೋಹದ ಬೆಲೆಯಲ್ಲಿ 850 ರೂ ಏರಿಕೆ ಕಂಡುಬಂದಿದೆ. ಪ್ರತಿ ಗ್ರಾಂ ಚಿನ್ನದ ದರದಲ್ಲಿ 85 ರೂ ಹಾಗೂ ಪ್ರತಿ ಹತ್ತು ಗ್ರಾಂ ಚಿನ್ನದ ಮೇಲೆ 850 ರೂ ಏರಿಕೆಯಾಗಿದೆ.

ಚಿನ್ನದ ದರ
ಬಸವೇಶ್ವರ ಜಯಂತಿ, ಅಕ್ಷಯ ತೃತೀಯ: ಜಗದ್ಗುರು ಬಸವಣ್ಣನವರ ತತ್ವಗಳನ್ನು ಅಕ್ಷಯವಾಗಿಸೋಣ...

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 22 ಕ್ಯಾರೆಟ್ ನ ಚಿನ್ನದ ದರದಲ್ಲಿ 85 ರೂ ಏರಿಕೆಯಾಗಿದ್ದು, ಪ್ರತೀ ಗ್ರಾಂಗೆ 6,700 ರೂ ಇದೆ. ನಿನ್ನೆ ಇದೇ ದರ 6,615 ರೂ ನಷ್ಟಿತ್ತು. 22 ಕ್ಯಾರೆಟ್ ನ 10 ಗ್ರಾಂ ಚಿನ್ನ 66,150 ರೂ ಗೆ ಮಾರಾಟವಾಗುತ್ತಿದೆ.

ಅಂತೆಯೇ 24 ಕ್ಯಾರೆಟ್ ನ 1 ಗ್ರಾಂ ಚಿನ್ನದ ದರದಲ್ಲೂ 93 ರೂ ಏರಿಕೆಯಾಗಿದ್ದು, 24 ಕ್ಯಾರೆಟ್ ನ 1 ಗ್ರಾಂ ಚಿನ್ನ ಇಂದು 7,309 ರೂಗೆ ಮಾರಾಟವಾಗುತ್ತಿದೆ. ನಿನ್ನೆ ಈ ದರ 7,216 ರೂನಷ್ಟಿತ್ತು. 24 ಕ್ಯಾರೆಟ್ ನ 10 ಗ್ರಾಂ ಚಿನ್ನ 72,160 ರೂ ಗೆ ಮಾರಾಟವಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com