BSNL: ಸೆಪ್ಟೆಂಬರ್ ನಲ್ಲಿ 8 ಲಕ್ಷ ಹೊಸ ಗ್ರಾಹಕರು; ದರ ಏರಿಕೆ ಪರಿಣಾಮ ಖಾಸಗಿ ಕಂಪನಿಗಳಿಗೆ ನಷ್ಟ

ಈಗ ಬಿಎಸ್ಎನ್ಎಲ್ 91.89 ಲಕ್ಷ ಗ್ರಾಹಕರನ್ನು ಹೊಂದಿದೆ ಹಾಗೂ ಮಾರುಕಟ್ಟೆಯಲ್ಲಿ ತನ್ನ ಪಾಲನ್ನು ಶೇ.7.98 ಕ್ಕೆ ಏರಿಕೆ ಮಾಡಿಕೊಂಡಿದೆ.
BSNL
ಬಿಎಸ್ಎನ್ಎಲ್ online desk
Updated on

ನವದೆಹಲಿ: ಸೆಪ್ಟೆಂಬರ್ ಒಂದೇ ತಿಂಗಳಲ್ಲಿ ಸರ್ಕಾರಿ ಸ್ವಾಮ್ಯದ BSNL ಸಂಸ್ಥೆಗೆ 8 ಲಕ್ಷ ಹೊಸ ಗ್ರಾಹಕರು ಸೇರ್ಪಡೆಯಾಗಿದ್ದಾರೆ.

ಟ್ರಾಯ್ (TRAI) ಈ ಬಗ್ಗೆ ಮಾಹಿತಿ ನೀಡಿದ್ದು, ಬಿಎಸ್ಎನ್ಎಲ್ ಗೆ ಸತತ ಮೂರನೆ ತಿಂಗಳು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಸೇರ್ಪಡೆಯಾಗಿದ್ದಾರೆ ಈ ಮೂಲಕ ಈಗ ಬಿಎಸ್ಎನ್ಎಲ್ 91.89 ಲಕ್ಷ ಗ್ರಾಹಕರನ್ನು ಹೊಂದಿದೆ ಹಾಗೂ ಮಾರುಕಟ್ಟೆಯಲ್ಲಿ ತನ್ನ ಪಾಲನ್ನು ಶೇ.7.98 ಕ್ಕೆ ಏರಿಕೆ ಮಾಡಿಕೊಂಡಿದೆ.

BSNL ಆಗಸ್ಟ್ 2024 ರಲ್ಲಿ 2.5 ಮಿಲಿಯನ್ ಗ್ರಾಹಕರನ್ನು ಮತ್ತು ಜುಲೈ 2024 ರಲ್ಲಿ 2.94 ಮಿಲಿಯನ್ ಹೊಸ ಚಂದಾದಾರರನ್ನು ಪಡೆದಿದೆ.

ಏತನ್ಮಧ್ಯೆ, ಖಾಸಗಿ ಟೆಲಿಕಾಂ ಸೇವಾ ಪೂರೈಕೆದಾರರಾದ ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಲಿಮಿಟೆಡ್ (ವಿಐಎಲ್) ಜೂನ್‌ನಲ್ಲಿ ಜಾರಿಗೆ ತಂದ ದರ ಹೆಚ್ಚಳದ ನಂತರ ಚಂದಾದಾರರನ್ನು ಕಳೆದುಕೊಳ್ಳುತ್ತಲೇ ಇದೆ. ಜುಲೈ 2024 ರಲ್ಲಿ, ಎಲ್ಲಾ ಮೂರು ಖಾಸಗಿ ಟೆಲಿಕಾಂ ಪೂರೈಕೆದಾರರು ತಮ್ಮ ರಿಚಾರ್ಜ್ ದರಗಳನ್ನು 25% ವರೆಗೆ ಹೆಚ್ಚಿಸಿವೆ. ಪರಿಣಾಮವಾಗಿ, ಈ ಟೆಲಿಕಾಂಗಳು ಅದೇ ತಿಂಗಳು ಚಂದಾದಾರರನ್ನು ಕಳೆದುಕೊಳ್ಳಲಾರಂಭಿಸಿವೆ.

ಟಾರಿಫ್ ಹೆಚ್ಚಳ: ಸತತ ಎರಡನೇ ತಿಂಗಳೂ BSNL ಲಾಭ; ರಿಲಯನ್ಸ್ ಜಿಯೋ, ಏರ್‌ಟೆಲ್ ಗೆ ನಷ್ಟ

TRAI ಪ್ರಕಾರ, ಒಟ್ಟಾರೆಯಾಗಿ, ಸೆಪ್ಟೆಂಬರ್ 2024 ರಲ್ಲಿ ಖಾಸಗಿ ಟೆಲಿಕಾಂಗಳು 10 ಮಿಲಿಯನ್ ಗ್ರಾಹಕರನ್ನು ಕಳೆದುಕೊಂಡಿವೆ. ಅವುಗಳಲ್ಲಿ, ಭಾರತದ ಅತಿದೊಡ್ಡ ಟೆಲಿಕಾಂ ಸೇವಾ ಪೂರೈಕೆದಾರ ರಿಲಯನ್ಸ್ ಜಿಯೋ ಸೆಪ್ಟೆಂಬರ್‌ನಲ್ಲಿ ಗಮನಾರ್ಹ 7.9 ಮಿಲಿಯನ್ ಗ್ರಾಹಕರನ್ನು ಕಳೆದುಕೊಂಡರೆ, ಭಾರ್ತಿ ಏರ್‌ಟೆಲ್ 1.4 ಮಿಲಿಯನ್ ಮತ್ತು Vi 1.5 ಮಿಲಿಯನ್ ಚಂದಾದಾರರನ್ನು ಕಳೆದುಕೊಂಡಿದೆ.

ಈ ನಷ್ಟದೊಂದಿಗೆ, ಜಿಯೋ ಮಾರುಕಟ್ಟೆ ಪಾಲು ಈಗ 40.20% ಆಗಿದ್ದರೆ, ಭಾರ್ತಿ ಏರ್‌ಟೆಲ್ 33.24% ಮತ್ತು ವೊಡಾಫೋನ್ ಐಡಿಯಾ 18.41% ರಷ್ಟನ್ನು ಹೊಂದಿವೆ. ಆಗಸ್ಟ್ 2024 ರಲ್ಲಿ ಜಿಯೋ 4 ಮಿಲಿಯನ್ ಗ್ರಾಹಕರನ್ನು ಕಳೆದುಕೊಂಡಿತು, ನಂತರ ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕ್ರಮವಾಗಿ 2.4 ಮಿಲಿಯನ್ ಮತ್ತು 1.87 ಮಿಲಿಯನ್ ಗ್ರಾಹಕರನ್ನು ಕಳೆದುಕೊಂಡಿವೆ.

BSNL
ಟಾರಿಫ್ ಹೆಚ್ಚಳ: ಸತತ ಎರಡನೇ ತಿಂಗಳೂ BSNL ಲಾಭ; ರಿಲಯನ್ಸ್ ಜಿಯೋ, ಏರ್‌ಟೆಲ್ ಗೆ ನಷ್ಟ

ಜುಲೈ 2024 ರಲ್ಲಿ, ಭಾರ್ತಿ ಏರ್‌ಟೆಲ್ 1,694,300 ಚಂದಾದಾರರನ್ನು ಕಳೆದುಕೊಂಡಿದ್ದಿದ್ದರೆ, ವೊಡಾಫೋನ್ ಐಡಿಯಾ 1,413,910 ಚಂದಾದಾರರನ್ನು ಕಳೆದುಕೊಂಡಿದೆ ಮತ್ತು 758,463 ಚಂದಾದಾರರು ಜಿಯೋ ನೆಟ್ವರ್ಕ್ ನ್ನು ತ್ಯಜಿಸಿದ್ದಾರೆ.

ಸೆಪ್ಟೆಂಬರ್ 2024 ರಲ್ಲಿ, ಮೊಬೈಲ್ ನಂಬರ್ ಪೋರ್ಟೆಬಿಲಿಟಿ (MNP) ಗಾಗಿ ಒಟ್ಟು 13.32 ಮಿಲಿಯನ್ ವಿನಂತಿಗಳನ್ನು ಸ್ವೀಕರಿಸಲಾಗಿದೆ. ಒಟ್ಟು 13.32 ಮಿಲಿಯನ್‌ಗಳಲ್ಲಿ, 7.48 ಮಿಲಿಯನ್ ಹೊಸ ವಿನಂತಿಗಳನ್ನು ವಲಯ-I ನಿಂದ ಮತ್ತು 5.84 ಮಿಲಿಯನ್ ವಲಯ-II ನಿಂದ ಸ್ವೀಕರಿಸಲಾಗಿದೆ.

ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ ಸುಮಾರು 81.06 ಮಿಲಿಯನ್ ಗ್ರಾಹಕರು ನಂಬರ್ ಪೋರ್ಟಬಲಿಟಿಗೆ ಮನವಿ ಮಾಡಿದ್ದರೆ, ನಂತರದ ಸ್ಥಾನದಲ್ಲಿ ಕರ್ನಾಟಕ ಇದ್ದು ಸುಮಾರು 70.24 ಮಿಲಿಯನ್ ಗ್ರಾಹಕರು ಎಂಎನ್ ಪಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com