ಷೇರು ಮಾರುಕಟ್ಟೆಯಲ್ಲಿ ಕಳೆದ 4 ತಿಂಗಳಲ್ಲೇ ಅತಿ ದೊಡ್ಡ ಕುಸಿತ: ಹೂಡಿಕೆದಾರರಿಗೆ 9.78 ಲಕ್ಷ ಕೋಟಿ ರೂ. ನಷ್ಟ!
ಮುಂಬೈ: ಮಧ್ಯಪ್ರಾಚ್ಯದಲ್ಲಿನ ಸಂಘರ್ಷದ ನಡುವೆ ವಹಿವಾಟಿನ ವಾರದ ನಾಲ್ಕನೇ ದಿನದಂದು ಭಾರೀ ಕುಸಿತದೊಂದಿಗೆ ಷೇರು ಮಾರುಕಟ್ಟೆ ಮುಕ್ತಾಯಗೊಂಡಿದೆ. ಬಿಎಸ್‌ಇಯಲ್ಲಿ ಸೆನ್ಸೆಕ್ಸ್ 1,769 ಅಂಕಗಳ ಕುಸಿತದೊಂದಿಗೆ 82,497.10ಕ್ಕೆ ಕೊನೆಗೊಂಡಿದ್ದರೆ ಅದೇ ಸಮಯದಲ್ಲಿ, NSEನಲ್ಲಿ ನಿಫ್ಟಿ ಶೇಕಡ 2.12 ರಷ್ಟು ಕುಸಿತದೊಂದಿಗೆ 25,250.10ಕ್ಕೆ ಮುಕ್ತಾಯಗೊಂಡಿದೆ.
ಸೆನ್ಸೆಕ್ಸ್‌ನಲ್ಲಿ ಇಂದಿನ ವಹಿವಾಟಿನ ಸಂದರ್ಭದಲ್ಲಿ, ಜುಬಿಲಂಟ್ ಇಂಗ್ರಾವಿಯಾ, ಆಂಬರ್ ಎಂಟರ್‌ಪ್ರೈಸಸ್, ಪೆಟ್ರೋನೆಟ್ ಎಲ್‌ಎನ್‌ಜಿ, ಏಂಜೆಲ್ ಒನ್ ಷೇರುಗಳು ಹೆಚ್ಚು ಲಾಭದಾಯಕ ಪಟ್ಟಿಯಲ್ಲಿ ಸೇರ್ಪಡೆಗೊಂಡರೆ, ಏಷ್ಯನ್ ಪೇಂಟ್ಸ್, ಎಲ್ & ಟಿ, ಟಾಟಾ ಮೋಟಾರ್ಸ್, ಮಾರುತಿ ಸುಜುಕಿ, ಆಕ್ಸಿಸ್ ಬ್ಯಾಂಕ್ ಷೇರುಗಳು ಕುಸಿತದ ಪಟ್ಟಿಯಲ್ಲಿ ಸೇರಿವೆ.
ಬೆಂಚ್ಮಾರ್ಕ್ ಸೂಚ್ಯಂಕಗಳು ಸೆನ್ಸೆಕ್ಸ್ ಮತ್ತು ನಿಫ್ಟಿ ಗುರುವಾರ ಕೆಂಪು ಬಣ್ಣಕ್ಕೆ ತಿರುಗಿದೆ. ಮಧ್ಯಪ್ರಾಚ್ಯದಲ್ಲಿನ ಸಂಘರ್ಷದ ಬಗ್ಗೆ ಹೂಡಿಕೆದಾರರು ಕಳವಳ ವ್ಯಕ್ತಪಡಿಸಿದ್ದರಿಂದ ಹೆಚ್ಚಿನ ವಲಯಗಳಾದ್ಯಂತ ನಷ್ಟಕ್ಕೆ ಕಾರಣವಾಯಿತು. ಎಲ್ಲಾ 13 ಪ್ರಮುಖ ವಲಯದ ಸೂಚ್ಯಂಕಗಳು ಕುಸಿದಿದ್ದು ರಿಯಲ್ ಎಸ್ಟೇಟ್ ಮತ್ತು ಆಟೋ ಷೇರುಗಳು ಮತ್ತಷ್ಟು ಕುಸಿತ ಕಂಡಿದೆ.
ಇಂದಿನ ಮಾರುಕಟ್ಟೆ ಕುಸಿತದಿಂದ ಹೂಡಿಕೆದಾರರಿಗೆ 9.78 ಲಕ್ಷ ಕೋಟಿ ನಷ್ಟ ಉಂಟಾಗಿದೆ. ಕಳೆದ 4 ತಿಂಗಳ ಹಿಂದೆ ಮಾರುಕಟ್ಟೆಯಲ್ಲಿ ಇಂತಹ ಕುಸಿತ ಸಂಭವಿಸಿತ್ತು. 2024ರ ಜೂನ್ 4ರಂದು ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಇದುವರೆಗಿನ ಅತಿದೊಡ್ಡ ಕುಸಿತ ಕಂಡಿತ್ತು.
ವಾರದ ವಹಿವಾಟಿನ ನಾಲ್ಕನೇ ದಿನದಂದು ಷೇರುಪೇಟೆ ಭಾರಿ ಕುಸಿತದೊಂದಿಗೆ ಆರಂಭವಾಯಿತು. ಬಿಎಸ್‌ಇಯಲ್ಲಿ ಸೆನ್ಸೆಕ್ಸ್ 831 ಪಾಯಿಂಟ್‌ಗಳ ಕುಸಿತದೊಂದಿಗೆ 83,434.79ರಿಂದ ಪ್ರಾರಂಭವಾಯಿತು. ಅದೇ ಸಮಯದಲ್ಲಿ, ನಿಫ್ಟಿ NSE ನಲ್ಲಿ 1.03 ಶೇಕಡಾ ಕುಸಿತದೊಂದಿಗೆ 25,529.95ರಿಂದ ಪ್ರಾರಂಭವಾಯಿತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ