ಮುಂಬೈ: ಭಾರತೀಯ ಷೇರುಮಾರುಕಟ್ಟೆಯಲ್ಲಿ ಗೂಳಿ ಓಟಕ್ಕೆ ಬ್ರೇಕ್ ಬಿದಿದ್ದು, ವಾರದ ಅಂತಿಮ ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ ಕುಸಿತ ಕಂಡಿದೆ.
ಇಂದು ಮಾರುಕಟ್ಟೆ ದಿನದ ವಹಿವಾಟು ಅಂತ್ಯದ ವೇಳೆಗೆ ಸೆನ್ಸೆಕ್ಸ್ 264.27 ಅಂಕಗಳ ಇಳಿಕೆಯೊಂದಿಗೆ 85,571.85 ಅಂಕಗಳಿಗೆ ಕುಸಿತವಾಗಿದೆ. ಅಂತೆಯೇ ನಿಫ್ಟಿ ಕೂಡ 40.90 ಅಂಕಗಳ ಕುಸಿತದೊಂದಿಗೆ 26,175.15 ಅಂಕಗಳೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಬೆಳಗ್ಗೆ ಸೆನ್ಸೆಕ್ಸ್ 142.13 ಅಂಕಗಳ ಏರಿಕೆಯಾಗಿ ಸಾರ್ವಕಾಲಿಕ ದಾಖಲೆಯ 85,978.25 ಅಂಕಗಳಿಗೆ ಏರಿಕೆಯಾಗಿತ್ತು. ಆದರೆ ಅದೇ ಪ್ರಗತಿಯನ್ನು ದಿನದ ಅಂತ್ಯದ ವರೆಗೂ ಮುಂದುವರೆಸಲು ವಿಫಲವಾಗಿ 85,571.85 ಅಂಕಗಳಿಗೆ ಕುಸಿದು ದಿನದ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಬ್ಯಾಂಕಿಂಗ್ ಮತ್ತು FMCG ವಲಯದ ಷೇರುಗಳ ಮೌಲ್ಯ ಕುಸಿತವಾಗಿದ್ದು, ಸೆನ್ಸೆಕ್ಸ್ ಷೇರುಗಳ ಪೈಕಿ ಪವರ್ ಗ್ರಿಡ್, ಐಸಿಐಸಿಐ ಬ್ಯಾಂಕ್, ಭಾರ್ತಿ ಏರ್‌ಟೆಲ್, ಎಚ್‌ಡಿಎಫ್‌ಸಿ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್, ಲಾರ್ಸನ್ ಆ್ಯಂಡ್ ಟೂಬ್ರೊ, ಅದಾನಿ ಪೋರ್ಟ್ಸ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಸಂಸ್ಥೆಗಳ ಷೇರುಗಳ ಮೌಲ್ಯ ಕುಸಿದಿದೆ.
ಅಂತೆಯೇ ಸನ್ ಫಾರ್ಮಾ, ರಿಲಯನ್ಸ್ ಇಂಡಸ್ಟ್ರೀಸ್, ಟೈಟಾನ್, ಎಚ್‌ಸಿಎಲ್ ಟೆಕ್ನಾಲಜೀಸ್ ಮತ್ತು ಬಜಾಜ್ ಫಿನ್‌ಸರ್ವ್ ಸಂಸ್ಥೆಗಳು ಲಾಭ ಗಳಿಸಿವೆ.
Advertisement