ಮುಂಬೈ: ಭಾರತೀಯ ಷೇರುಮಾರುಕಟ್ಟೆ ಗುರುವಾರ ಗೂಳಿ ಓಟ ಮುಂದುವರೆದಿದ್ದು, Sensex, Nifty ಸಾರ್ವಕಾಲಿಕ ದಾಖಲೆ ಬರೆದಿದೆ.
ಇಂದು ಮಾರುಕಟ್ಟೆ ದಿನದ ವಹಿವಾಟು ಅಂತ್ಯದ ವೇಳೆಗೆ ಸೆನ್ಸೆಕ್ಸ್ 666.25 ಅಂಕಗಳ ಏರಿಕೆಯೊಂದಿಗೆ ಸಾರ್ವಕಾಲಿಕ ದಾಖಲೆಯ 85,836.12 ಅಂಕಗಳಿಗೆ ಏರಿಕೆಯಾಗಿದ್ದು, ಅಂತೆಯೇ ನಿಫ್ಟಿ ಕೂಡ 211.90 ಅಂಕಗಳ ಏರಿಕೆಯೊಂದಿಗೆ 26,216.05 ಅಂಕಗಳೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದೆ.
ಏಷ್ಯನ್ ಮಾರುಕಟ್ಟೆಯಲ್ಲಿ ಹೂಡಿಕೆದಾರರ ಖರೀದಿ ಭರಾಟೆ ಹೆಚ್ಚಿದ್ದರಿಂದ ಇಂದು ಮಾರುಕಟ್ಟೆ ಚೇತೋಹಾರಿ ವಹಿವಾಟು ನಡೆಸಿದೆ. ಇಂದು ಸೆನ್ಸೆಕ್ಸ್ 85,167.56 ಅಂಕಗಳೊಂದಿಗೆ ವಹಿವಾಟು ಆರಂಭಿಸಿತ್ತು. ಬಳಿಕ 760.56 ಅಂಕಗಳ ಏರಿಕೆಯೊಂದಿಗೆ 85,930.43 ಅಂಕಗಳಿಗೆ ಏರಿಕೆಯಾಗಿ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿತು.
ದಿನದ ವಹಿವಾಟು ಅಂತ್ಯದ ವೇಳೆ ಸೆನ್ಸೆಕ್ಸ್ ತನ್ನ ಗಳಿಕೆಯನ್ನು 666.25 ಅಂಕಗಳಿಗೆ ಸೀಮಿತಗೊಳಿಸಿಕೊಂಡು 85,836.12 ಅಂಕಗಳಿಗೇರಿ ವಹಿವಾಟು ಅಂತ್ಯಗೊಳಿಸಿತು.
ಅಂತೆಯೇ ನಿಫ್ಟಿ ಕೂಡ ಇಂದು 26,005.40 ಅಂಕಗಳೊಂದಿಗೆ ವಹಿವಾಟು ಆರಂಭಿಸಿ ದಿನದ ಗರಿಷ್ಠ ಅಂದರೆ 243 ಅಂಕಗಳ ಏರಿಕೆಯೊಂದಿಗೆ 26,250.90 ಅಂಕಗಳ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿತ್ತು. ದಿನದ ವಹಿವಾಟು ಅಂತ್ಯದ ವೇಳೆ 211.90 ಅಂಕಗಳ ಏರಿಕೆಯೊಂದಿಗೆ 26,216.05 ಅಂಕಗಳಿಗೆ ಏರಿಕೆಯಾಗಿ ವಹಿವಾಟು ಅಂತ್ಯಗೊಳಿಸಿತು.
ಇಂದಿನ ವಹಿವಾಟಿನಲ್ಲಿ ಮಾರುತಿ ಸಂಸ್ಥೆಯ ಷೇರುಗಳ ಮೌಲ್ಯ ಶೇ.5ರಷ್ಟು ಏರಿಕೆಯಾಗಿದ್ದು, ಉಳಿದಂತೆ ಟಾಟಾ ಮೋಟಾರ್ಸ್, ಬಜಾಜ್ ಫಿನ್‌ಸರ್ವ್, ಮಹೀಂದ್ರಾ & ಮಹೀಂದ್ರಾ, ಟಾಟಾ ಸ್ಟೀಲ್, JSW ಸ್ಟೀಲ್, ಅಲ್ಟ್ರಾಟೆಕ್ ಸಿಮೆಂಟ್, ಬಜಾಜ್ ಫೈನಾನ್ಸ್ ಮತ್ತು ನೆಸ್ಲೆ ಸಂಸ್ಥೆಯ ಷೇರುಗಳ ಮೌಲ್ಯ ಏರಿಕೆ ಕಂಡಿದೆ. ಅಂತೆಯೇ ಎಲ್ ಅಂಡ್ ಟಿ ಮತ್ತು ಎನ್ ಟಿಪಿಸಿ ಷೇರುಗಳ ಮೌಲ್ಯ ಕುಸಿತ ಕಂಡಿದೆ.
Advertisement