ರಿಯಲ್ ಎಸ್ಟೇಟ್ ಬೂಮ್‌: 40 ಕೋಟಿ ರೂ. ಮೌಲ್ಯದ 25 ಅಲ್ಟ್ರಾ ಐಷಾರಾಮಿ ಮನೆ; ಬೆಂಗಳೂರಿನಲ್ಲಿ 1 ಮನೆ 68 ಕೋಟಿಗೆ ಮಾರಾಟ!

ಮುಂಬೈ, ಹೈದರಾಬಾದ್, ಗುರುಗ್ರಾಮ್ ಮತ್ತು ಬೆಂಗಳೂರಿನಲ್ಲಿ ಒಟ್ಟು 25 ಅತಿ ಐಷಾರಾಮಿ ಮನೆಗಳನ್ನು ಮಾರಾಟ ಮಾಡಲಾಗಿದೆ. ಪುಣೆ, ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ಇಷ್ಟು ದೊಡ್ಡದ ಯಾವುದೇ ಮಾರಾಟ ನಡೆಯಲಿಲ್ಲ. ಅಂಕಿಅಂಶಗಳು ಹೊಸ ವಸತಿ ಮತ್ತು ಹಳೆಯ ವಸತಿ ಮಾರುಕಟ್ಟೆಗಳನ್ನು ಒಳಗೊಂಡಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರTNIE
Updated on

ಮುಂಬೈ: ಪ್ರಸಕ್ತ ವರ್ಷದ ಆಗಸ್ಟ್ ವರೆಗೆ ದೇಶದ ಪ್ರಮುಖ ನಗರಗಳಲ್ಲಿ 40 ಕೋಟಿ ರೂ.ಗೂ ಹೆಚ್ಚು ಮೌಲ್ಯದ 25 ಅತಿ ಐಷಾರಾಮಿ (ಅತ್ಯಂತ ದುಬಾರಿ) ಮನೆಗಳು ಮಾರಾಟವಾಗಿವೆ. ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿ ಕಂಪನಿ ಅನರಾಕ್ ಪ್ರಕಾರ, ಅವುಗಳ ಒಟ್ಟು ಮೌಲ್ಯ 2,443 ಕೋಟಿ ರೂಪಾಯಿ ಆಗಿದೆ.

ಅನರಾಕ್ ಅಂಕಿಅಂಶಗಳ ಪ್ರಕಾರ, 2024ರ ಮೊದಲ ಎಂಟು ತಿಂಗಳಲ್ಲಿ ಮುಂಬೈ, ಹೈದರಾಬಾದ್, ಗುರುಗ್ರಾಮ್ ಮತ್ತು ಬೆಂಗಳೂರಿನಲ್ಲಿ ಒಟ್ಟು 25 ಅತಿ ಐಷಾರಾಮಿ ಮನೆಗಳನ್ನು ಮಾರಾಟ ಮಾಡಲಾಗಿದೆ. ಪುಣೆ, ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ಇಷ್ಟು ದೊಡ್ಡದ ಯಾವುದೇ ಮಾರಾಟ ನಡೆಯಲಿಲ್ಲ. ಅಂಕಿಅಂಶಗಳು ಹೊಸ ವಸತಿ ಮತ್ತು ಹಳೆಯ ವಸತಿ ಮಾರುಕಟ್ಟೆಗಳನ್ನು ಒಳಗೊಂಡಿವೆ.

2023ರಲ್ಲಿ 61 ಡೀಲ್‌ಗಳು ನಡೆದಿದ್ದು ಮುಂಬೈ, ಹೈದರಾಬಾದ್ ಮತ್ತು ಗುರುಗ್ರಾಮ್‌ನಾದ್ಯಂತ ಈ ವಿಭಾಗದಲ್ಲಿ 4,456 ಕೋಟಿ ರೂಪಾಯಿ ವ್ಯವಹಾರ ನಡೆದಿತ್ತು ಎಂದು ಅನರಾಕ್ ಅಧ್ಯಕ್ಷ ಅನುಜ್ ಪುರಿ ಹೇಳಿದ್ದಾರೆ. 2024ರಲ್ಲಿ ನಾಲ್ಕು ತಿಂಗಳುಗಳು ಉಳಿದಿವೆ. ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಸಾಲು ಸಾಲು ಹಬ್ಬಗಳು ಇರುವುದರಿಂದ ವರ್ಷವು ಕೊನೆಗೊಳ್ಳುವ ಮೊದಲು ದೊಡ್ಡ ಮನೆ ವ್ಯವಹಾರಗಳು ನಡೆಯಬಹುದು ಎಂದು ಅವರು ಹೇಳಿದರು. ಈ ವರ್ಷ ಇದುವರೆಗೆ ಮಾರಾಟವಾದ ಒಟ್ಟು 25 ಅತಿ ಐಷಾರಾಮಿ ಮನೆಗಳ ಪೈಕಿ ಕನಿಷ್ಠ 20 ಅಪಾರ್ಟ್‌ಮೆಂಟ್‌ಗಳು 1,694 ಕೋಟಿ ರೂ. ಮೌಲ್ಯದಾಗಿದೆ. ಉಳಿದ ಐದು ಮಾರಾಟವಾದ ಬಂಗಲೆಗಳ ಒಟ್ಟು ಮೌಲ್ಯ 748.5 ಕೋಟಿ ರೂಪಾಯಿ ಆಗಿದೆ. ಇನ್ನು ಮುಂಬೈನಲ್ಲಿ ಗರಿಷ್ಠ 21 ಮನೆಗಳನ್ನು ಮಾರಾಟ ಮಾಡಲಾಗಿದೆ. ಅವುಗಳ ಒಟ್ಟು ಮೌಲ್ಯ 2,200 ಕೋಟಿ ರೂಪಾಯಿ ಆಗಿದೆ.

ಸಂಗ್ರಹ ಚಿತ್ರ
Expressway: ಮೈಸೂರು ರಿಯಲ್ ಎಸ್ಟೇಟ್ ಗೆ ಭಾರೀ ಬೇಡಿಕೆ

ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ ಕನಿಷ್ಠ ಎರಡು ಅತಿ ಐಷಾರಾಮಿ ಮನೆಗಳು ಒಟ್ಟು 80 ಕೋಟಿ ರೂಪಾಯಿ ಮೌಲ್ಯದ ಒಪ್ಪಂದಗಳನ್ನು ಮಾಡಿಕೊಂಡಿವೆ. ರಾಷ್ಟ್ರೀಯ ರಾಜಧಾನಿ ವಲಯದ (ಎನ್‌ಸಿಆರ್) ಗುರುಗ್ರಾಮ್‌ನಲ್ಲಿರುವ ಅಲ್ಟ್ರಾ ಐಷಾರಾಮಿ ಮನೆಯನ್ನು 95 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದ್ದು, ಬೆಂಗಳೂರಿನಲ್ಲಿ 67.5 ಕೋಟಿ ರೂಪಾಯಿ ಮೌಲ್ಯದ ಡೀಲ್ ಕೂಡ ನಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com