ಬೆಂಗಳೂರು: 2024ರ ಹುರುನ್ ಇಂಡಿಯಾ ಅಂಡರ್-35 ಮೊದಲ ಪಟ್ಟಿ ಬಿಡುಗಡೆಯಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿನ ಉದ್ಯಮಿಗಳೇ ಸ್ಥಾನ ಪಡೆದಿದ್ದಾರೆ. ಇನ್ನು ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಮತ್ತು ಹಿರಿಯ ಮಗ ಆಕಾಶ್ ಅಂಬಾನಿ ಸೇರಿದ್ದಾರೆ.
ಹುರುನ್ 35 ವರ್ಷದೊಳಗಿನವರ ಪಟ್ಟಿ ಬಿಡುಗಡೆಯಾಗಿದೆ. ಇದರಲ್ಲಿ ಬೋಧನೆ ಮತ್ತು ಕಲಿಕೆಯ ವೇದಿಕೆಯ ಪರೀತಾ ಪರೇಖ್ ಅವರು ಕಿರಿಯ ಮಹಿಳಾ ಉದ್ಯಮಿಯಾಗಿದ್ದಾರೆ. ಇಶಾ ಅಂಬಾನಿ ರಿಲಯನ್ಸ್ ರಿಟೇಲ್‌ನ ವ್ಯವಹಾರವನ್ನು ನಿರ್ವಹಿಸುತ್ತಿದ್ದಾರೆ. ಹುರುನ್ ಪಟ್ಟಿಯಲ್ಲಿ ಇಶಾ 31ನೇ ಸ್ಥಾನದಲ್ಲಿದ್ದಾರೆ.
ಹುರುನ್ ಇಂಡಿಯಾದ ಈ ಪಟ್ಟಿಯಲ್ಲಿ 35 ವರ್ಷದೊಳಗಿನ ಉದ್ಯಮಿಗಳನ್ನು ಸೇರಿಸಲಾಗಿದೆ. ಇದರಲ್ಲಿ ಶೇಕಡಾ 82ರಷ್ಟು ಉದ್ಯಮಿಗಳು ಸ್ವಯಂ ನಿರ್ಮಿತ ಶ್ರೀಮಂತರಾಗಿದ್ದಾರೆ. ಇದು ಎಡ್ಟೆಕ್ ಸ್ಟಾರ್ಟ್ಅಪ್ ಅಲಖ್ ಪಾಂಡೆ, ಕೇಶವ ರೆಡ್ಡಿ, ಪ್ರಣವ್ ಅಗರ್ವಾಲ್ ಮತ್ತು ಸಿದ್ಧಾರ್ಥ್ ವಿಜ್ ಸೇರಿದಂತೆ ಇತರ ದೊಡ್ಡ ಹೆಸರುಗಳನ್ನು ಒಳಗೊಂಡಿದೆ. ಇಶಾ ಅಂಬಾನಿ ಮತ್ತು ಪರಿತಾ ಪರೇಖ್ ಅವರಲ್ಲದೆ, ಮಾಮಾರ್ಥ್‌ನ ಮಾಲೀಕ ಗಜಲ್ ಅಲಾಗ್ ಕೂಡ ಹುರುನ್ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ. ಹುರುನ್‌ನ ಈ ಪಟ್ಟಿಯಲ್ಲಿ 150 ವೈಯಕ್ತಿಕ ಉದ್ಯಮಿಗಳನ್ನು ಸೇರಿಸಲಾಗಿದೆ.
2024ರ ಹುರುನ್ ಇಂಡಿಯಾ ಅಂಡರ್-35 ಪಟ್ಟಿಯಲ್ಲಿ, ಗರಿಷ್ಠ ಸಂಖ್ಯೆಯ 29 ಉದ್ಯಮಿಗಳು ಬೆಂಗಳೂರಿನವರಾಗಿದ್ದರೆ, 26 ಹೆಸರುಗಳೊಂದಿಗೆ ಮುಂಬೈ ಎರಡನೇ ಸ್ಥಾನದಲ್ಲಿದೆ. ದೇಶದ ವಿವಿಧ 41 ನಗರಗಳ ಉದ್ಯಮಿಗಳಿದ್ದಾರೆ.
Advertisement