ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಅಗತ್ಯತೆ: RBI ಹೇಳಿದ್ದು ಏನು?

ಉಳಿತಾಯ ಖಾತೆಯಲ್ಲಿನ ಕನಿಷ್ಠ ಬ್ಯಾಲೆನ್ಸ್ ಅವಶ್ಯಕತೆ RBI ನಿಯಂತ್ರಣದ ವ್ಯಾಪ್ತಿಯಲ್ಲಿ ಬರುವುದಿಲ್ಲ. ಅದು ಬ್ಯಾಂಕ್ ಗಳಿಗೆ ಬಿಟ್ಟ ವಿಚಾರವಾಗಿದೆ
Casual Images
ICICI ಬ್ಯಾಂಕ್ ಸಾಂದರ್ಭಿಕ ಚಿತ್ರ
Updated on

ನವದೆಹಲಿ: ICCI ಬ್ಯಾಂಕ್ ಉಳಿತಾಯ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ನ್ನು ರೂ. 50,000ಕ್ಕೆ ಹೆಚ್ಚಿಸಿದೆ. ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಕಳವಳ ಹಾಗೂ ಚರ್ಚೆಗೆ ಕಾರಣವಾಗಿದೆ.

ಈ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿರುವ RBI ಗವರ್ನರ್, ಸಂಜಯ್ ಮಲ್ಹೋತ್ರಾ, ಉಳಿತಾಯ ಖಾತೆಯಲ್ಲಿನ ಕನಿಷ್ಠ ಬ್ಯಾಲೆನ್ಸ್ ಅವಶ್ಯಕತೆ RBI ನಿಯಂತ್ರಣದ ವ್ಯಾಪ್ತಿಯಲ್ಲಿ ಬರುವುದಿಲ್ಲ. ಅದು ಬ್ಯಾಂಕ್ ಗಳಿಗೆ ಬಿಟ್ಟ ವಿಚಾರವಾಗಿದೆ ಎಂದಿದ್ದಾರೆ.

ಆಗಸ್ಟ್ 1, 2025 ರಿಂದ ಜಾರಿಗೆ ಬರುವಂತೆ ICICI ಬ್ಯಾಂಕ್ ಉಳಿತಾಯ ಖಾತೆಗಳಿಗೆ ಕನಿಷ್ಠ ಸರಾಸರಿ ಬ್ಯಾಲೆನ್ಸ್ ಅಗತ್ಯವನ್ನು ಗಣನೀಯವಾಗಿ ಹೆಚ್ಚಿಸಿದೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಂಜಯ್ ಮಲ್ಲೋತ್ರಾ, ಕೆಲ ಬ್ಯಾಂಕ್ ಗಳು ಕನಿಷ್ಠ ರೂ. 10,000 ಕನಿಷ್ಠ ಬ್ಯಾಲೆನ್ಸ್ ನಿಗದಿಪಡಿಸದರೆ ಮತ್ತೆ ಕೆಲವು ಬ್ಯಾಂಕ್ ಗಳು ರೂ. 2,000 ನಿಗದಿಪಡಿಸಿವೆ. ಕನಿಷ್ಠ ಬ್ಯಾಲೆನ್ಸ್ ಹಣವನ್ನು ಹೆಚ್ಚಿಸುವ ನಿರ್ಧಾರ ಬ್ಯಾಂಕ್ ಗಳಲ್ಲಿ ಬಿಟ್ಟದು ಎಂದು ಹೇಳಿದರು.

ICICI ಬ್ಯಾಂಕ್ ಮೆಟ್ರೋ ಮತ್ತು ನಗರ ಪ್ರದೇಶಗಳಲ್ಲಿನ ಗ್ರಾಹಕರಿಗೆ, ಕನಿಷ್ಠ ಸರಾಸರಿ ಬ್ಯಾಲೆನ್ಸ್ ಹಣವನ್ನು ರೂ. 50,000 ಕ್ಕೆ ಹೆಚ್ಚಿಸಿದೆ. ಈ ಹಿಂದೆ ಅದು ರೂ. 10,000 ಇತ್ತು. ಪಟ್ಟಣ ಪ್ರದೇಶಗಳ ಶಾಖೆಗಳಲ್ಲಿ ಹಿಂದೆ ರೂ. 5,000 ಇದ್ದ ಕನಿಷ್ಠ ಬ್ಯಾಲೆನ್ಸ್ ಇದೀಗ ರೂ. 25,000 ಆಗಿದೆ. ಗ್ರಾಮೀಣ ಶಾಖೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ರೂ. 2,500 ರಿಂದ ರೂ. 10,000 ಗೆ ಏರಿಕೆಯಾಗಿದೆ. ಈ ವಿಷಯವನ್ನು ಆರ್‌ಬಿಐ ನಿಯಂತ್ರಿಸದ ಕಾರಣ ಪ್ರತಿ ಬ್ಯಾಂಕ್ ತನ್ನ ಕಾರ್ಯಾಚರಣೆಯ ಮಾದರಿ ಮತ್ತು ಗ್ರಾಹಕರ ಆಧಾರದ ಮೇಲೆ ಕನಿಷ್ಠ ಬ್ಯಾಲೆನ್ಸ್ ಮೊತ್ತದ ಮೇಲೆ ತನ್ನದೇ ಆದ ನೀತಿ ರೂಪಿಸಲು ಸ್ವತಂತ್ರವಾಗಿವೆ ಎಂದು ಮಲ್ಹೋತ್ರಾ ಹೇಳಿದ್ದಾರೆ.

Casual Images
ICICI Bank SB account ಕನಿಷ್ಠ ಬ್ಯಾಲೆನ್ಸ್ 5 ಪಟ್ಟು ಹೆಚ್ಚಳ: 50,000 ರೂ ಗೆ ಏರಿಕೆ!

ಉಳಿತಾಯ ಖಾತೆಗಳಲ್ಲಿ ಹೆಚ್ಚುತ್ತಿರುವ ಶುಲ್ಕಗಳು ಮತ್ತು ಬ್ಯಾಲೆನ್ಸ್ ಅಗತ್ಯತೆಗಳ ಬಗ್ಗೆ ಹಲವು ಗ್ರಾಹಕರು ಕಳವಳ ವ್ಯಕ್ತಪಡಿಸುತ್ತಿರುವಂತೆಯೇ ಆರ್ ಬಿಐ ಗರ್ವನರ್ ಈ ಸ್ಪಷ್ಟೀಕರಣ ನೀಡಿದ್ದಾರೆ. ಕನಿಷ್ಠ ತಿಂಗಳ ಬ್ಯಾಲೆನ್ಸ್ ಹಣವನ್ನು ಖಾತೆಯಲ್ಲಿ ಇಡದ ಗ್ರಾಹಕರ ಮೇಲೆ ಶೇ 6 ರಷ್ಟು ಅಥವಾ ರೂ. 500 ದಂಡ ವಿಧಿಸಲಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com