
ಮುಂಬೈ: ಜಾಗತಿಕ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ದಾಖಲಾಗಿದೆ. ಮಂಗಳವಾರ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ 1,000 ರೂಪಾಯಿ ಇಳಿಕೆಯಾಗಿ ಪ್ರತಿ 10 ಗ್ರಾಮ್ ಚಿನ್ನದ ಬೆಲೆ 1,01,520 ರೂಪಾಯಿಗಳಿಗೆ ತಲುಪಿದೆ ಎಂದು ಅಖಿಲ ಭಾರತ ಸರಾಫಾ ಅಸೋಸಿಯೇಷನ್ ತಿಳಿಸಿದೆ.
ಸೋಮವಾರ, ಶೇ.99.9 ರಷ್ಟು ಶುದ್ಧತೆಯ ಅಮೂಲ್ಯ ಲೋಹ 10 ಗ್ರಾಂಗೆ 1,02,520 ರೂಪಾಯಿಗಳಿಗೆ ತಲುಪಿತ್ತು.
ಸ್ಥಳೀಯ ಮಾರುಕಟ್ಟೆಗಳಲ್ಲಿ, ಶೇ.99.5 ರಷ್ಟು ಶುದ್ಧತೆಯ ಚಿನ್ನದ ಬೆಲೆ ಮಂಗಳವಾರ 10 ಗ್ರಾಂಗೆ 1,000 ರೂಪಾಯಿ ಇಳಿಕೆಯಾಗಿ 1,01,100 ರೂಪಾಯಿಗಳಿಗೆ ತಲುಪಿದೆ (ಎಲ್ಲಾ ತೆರಿಗೆಗಳನ್ನು ಒಳಗೊಂಡಂತೆ).
"ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಚಿನ್ನದ ಆಮದಿನ ಮೇಲೆ ಯಾವುದೇ ಸುಂಕವಿರುವುದಿಲ್ಲ ಎಂದು ಸ್ಪಷ್ಟಪಡಿಸಿದ ನಂತರ ಚಿನ್ನದ ಬೆಲೆಗಳು ಕುಸಿದಿವೆ. ಶ್ವೇತಭವನದಿಂದ ಅಧಿಕೃತ ದೃಢೀಕರಣ ಇನ್ನೂ ಬಾಕಿ ಉಳಿದಿದ್ದರೂ, ಪ್ರಕಟಣೆಯು ಕೆಲವು ವ್ಯಾಪಾರ-ಸಂಬಂಧಿತ ಕಳವಳಗಳನ್ನು ಕಡಿಮೆ ಮಾಡಿದೆ" ಎಂದು ಅಬಾನ್ಸ್ ಫೈನಾನ್ಷಿಯಲ್ ಸರ್ವೀಸಸ್ ಸಿಇಒ ಚಿಂತನ್ ಮೆಹ್ತಾ ಹೇಳಿದ್ದಾರೆ.
Advertisement