Gold Bond ಹೂಡಿಕೆ ಮಾಡಿದ್ದವರಿಗೆ RBI ಜಾಕ್ ಪಾಟ್: 3 ಪಟ್ಟು ರಿಟರ್ನ್ಸ್ ಘೋಷಣೆ!

ಸಾವರಿನ್ ಚಿನ್ನದ ಬಾಂಡ್ ಯೋಜನೆಯನ್ನು 2015-16 ರ ಕೇಂದ್ರ ಬಜೆಟ್‌ನಲ್ಲಿ ಪರಿಚಯಿಸಲಾಯಿತು ಮತ್ತು ಈ ಬಾಂಡ್‌ಗಳನ್ನು ಕೇಂದ್ರ ಸರ್ಕಾರದ ಪರವಾಗಿ ಆರ್‌ಬಿಐ ನೀಡುತ್ತದೆ.
SBG
ಎಸ್ ಬಿಜಿ online desk
Updated on

ಮುಂಬೈ: ಸಾವರಿನ್ ಚಿನ್ನದ ಬಾಂಡ್‌ಗಳನ್ನು (SGBs) ಖರೀದಿಸಿದ ಹೂಡಿಕೆದಾರರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಸಿಹಿ ಸುದ್ದಿ ನೀಡಿದೆ.

2016-17 ಸರಣಿ-4 ಬಾಂಡ್‌ಗಳ ಮುಕ್ತಾಯ ದಿನಾಂಕವನ್ನು ಮಾರ್ಚ್ 17 ಕ್ಕೆ ನಿಗದಿಪಡಿಸಲಾಗಿದೆ ಎಂದು ಕೇಂದ್ರ ಬ್ಯಾಂಕ್ ಘೋಷಿಸಿದೆ ಮತ್ತು ಹೂಡಿಕೆದಾರರು ತಮ್ಮ ಆರಂಭಿಕ ಹೂಡಿಕೆಗಿಂತ ಸುಮಾರು ಮೂರು ಪಟ್ಟು ಹೆಚ್ಚಿನದನ್ನು ಪಡೆಯುವ ನಿರೀಕ್ಷೆಯಿದೆ.

ಭೌತಿಕ ಚಿನ್ನದ ಬೇಡಿಕೆಯನ್ನು ಕಡಿಮೆ ಮಾಡಲು ಸಾವರಿನ್ ಚಿನ್ನದ ಬಾಂಡ್‌ ಯೋಜನೆಯನ್ನು ನವೆಂಬರ್ 2015 ರಲ್ಲಿ ಪ್ರಾರಂಭಿಸಲಾಗಿತ್ತು. ಈ ಬಾಂಡ್‌ಗಳ ಅವಧಿ ಎಂಟು ವರ್ಷಗಳವರೆಗೆ ಇರಲಿದೆ. ಮಾರ್ಚ್ 2017 ರಲ್ಲಿ ನೀಡಲಾದ ನಾಲ್ಕನೇ ಕಂತಿನ ಬಾಂಡ್‌ಗಳಿಗೆ RBI ಈಗ ಮೆಚ್ಯುರಿಟಿ ಬೆಲೆಯನ್ನು ಘೋಷಿಸಿದೆ. ವಿತರಣೆಯ ಸಮಯದಲ್ಲಿ, ಈ ಬಾಂಡ್‌ಗಳ ಬೆಲೆ ಪ್ರತಿ ಗ್ರಾಂಗೆ ₹2,943 ಆಗಿತ್ತು. Maturity price ನ್ನು ಈಗ ಪ್ರತಿ ಗ್ರಾಂಗೆ ₹8,624 ನಿಗದಿಪಡಿಸಲಾಗಿದೆ. ಅಂದರೆ ಆ ಸಮಯದಲ್ಲಿ ₹1 ಲಕ್ಷ ಹೂಡಿಕೆ ಮಾಡಿದ ಹೂಡಿಕೆದಾರರು ಈಗ ಸುಮಾರು ₹3 ಲಕ್ಷವನ್ನು ಪಡೆಯುತ್ತಾರೆ. ಈ ಬಂಡವಾಳ ಹೆಚ್ಚಳದ ಜೊತೆಗೆ, ಹೂಡಿಕೆದಾರರು ಬಾಂಡ್‌ಗಳ ಮೇಲೆ ವಾರ್ಷಿಕ 2.50% ಬಡ್ಡಿಯನ್ನು ಗಳಿಸಿದ್ದಾರೆ.

SBG
Gold Rate ದಿಢೀರ್ ಏರಿಕೆ: ಇಂದಿನ ಚಿನ್ನದ ದರ ಇಂತಿದೆ...

ಬಾಂಡ್‌ಗಳ Maturity ಬೆಲೆಯನ್ನು ಭಾರತೀಯ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​ಲಿಮಿಟೆಡ್ ನಿಗದಿಪಡಿಸಿದ 999-ಶುದ್ಧತೆಯ ಚಿನ್ನದ ಸರಾಸರಿ ಬೆಲೆಯನ್ನು ಆಧರಿಸಿ ನಿರ್ಧರಿಸಲಾಗುತ್ತದೆ. ಇದನ್ನು ಮುಕ್ತಾಯ ದಿನಾಂಕಕ್ಕೆ ಮುಂಚಿನ ವಾರದಲ್ಲಿ ಮಾಡಲಾಗುತ್ತದೆ. ಅದೇ ರೀತಿ, 2019-20 ಸರಣಿ-4 ಬಾಂಡ್‌ಗಳಿಗೆ pre-maturity window ನ್ನು ಮಾರ್ಚ್ 17 ಕ್ಕೆ ನಿಗದಿಪಡಿಸಲಾಗಿದೆ ಎಂದು ಆರ್‌ಬಿಐ ಘೋಷಿಸಿದೆ.

ರಿಡೆಂಪ್ಶನ್ ಬೆಲೆಯನ್ನು ಪ್ರತಿ ಗ್ರಾಂಗೆ 8,634 ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ. ಜಾಗತಿಕ ಚಿನ್ನದ ಬೆಲೆಗಳು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿರುವುದರಿಂದ, ಈ ಸಮಯದಲ್ಲಿ ಸಾವರಿನ್ ಚಿನ್ನದ ಬಾಂಡ್‌ಗಳು ಹೂಡಿಕೆದಾರರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.

SBG
ಗೋಲ್ಡ್ ಬಾಂಡ್ ಮೇಲಿನ ಹೂಡಿಕೆ ಸರಿಯೇ?: ಹೂಡಿಕೆದಾರರು ತಿಳಿದಿರಬೇಕಾದ ಅಂಶಗಳು

ಸಾವರಿನ್ ಚಿನ್ನದ ಬಾಂಡ್ ಯೋಜನೆಯನ್ನು 2015-16 ರ ಕೇಂದ್ರ ಬಜೆಟ್‌ನಲ್ಲಿ ಪರಿಚಯಿಸಲಾಯಿತು ಮತ್ತು ಈ ಬಾಂಡ್‌ಗಳನ್ನು ಕೇಂದ್ರ ಸರ್ಕಾರದ ಪರವಾಗಿ ಆರ್‌ಬಿಐ ನೀಡುತ್ತದೆ. ಎಸ್‌ಜಿಬಿಗಳಿಗೆ ಇತ್ತೀಚಿನ ಚಂದಾದಾರಿಕೆ ವಿಂಡೋ ಫೆಬ್ರವರಿ 12 ರಿಂದ 16, 2024 ರವರೆಗೆ ತೆರೆದಿತ್ತು, ಅದರ ನಂತರ ಯಾವುದೇ ಹೊಸ ವಿತರಣೆಗಳನ್ನು ಘೋಷಿಸಲಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com