ಭಾರತ ಸರಕಾರ ಸೆಂಟ್ರಲ್ ಬ್ಯಾಂಕ್ ನ ಸಹಯೋಗದೊಂದಿಗೆ 2017, ಮತ್ತು 2018 ಕ್ಕೆ ಚಿನ್ನದ ಬಾಂಡ್ ಬಿಡುಗಡೆ ಮಾಡಲು ನಿರ್ಧರಿಸಿದೆ. ವಿಶೇಷವೆಂದರೆ ಭಾರತ ಸರಕಾರ ಇದನ್ನ ಪ್ರತಿವಾರ ಆಯ್ದ ಎರಡು ದಿನಗಳಲ್ಲಿ ಬಿಡುಗಡೆ ಮಾಡಲಿದೆ! ಇದರಿಂದ ಹೂಡಿಕೆದಾರರು ನಿಗದಿತ ಸಮಯ ಮುಗಿಯಿತು ಹೂಡಿಕೆ ಮಾಡಲು ಆಗಲಿಲ್ಲ ಎನ್ನುವ ಕೊರಗು ತಪ್ಪಿದೆ. ಅಕ್ಟೋಬರ್ 9, 2017 ರಿಂದ ಪ್ರತಿವಾರ ಇಲ್ಲಿ ಹೂಡಿಕೆ ಮಾಡುವ ಅವಕಾಶವಿದೆ. ಈ ಬಾಂಡ್ ಅನ್ನು ನೀವು ನವೆಂಬರ್ 6-8 ರಲ್ಲಿ ಕೊಳ್ಳಬಹುದಿತ್ತು. ಆಗ ಕೊಳ್ಳಲು ಸಾಧ್ಯವಾಗಿಲ್ಲವೆಂದರೆ ನವೆಂಬರ್ 13-15 ರಲ್ಲಿ ಕೊಳ್ಳಬಹುದು. ಹೀಗೆ ನವೆಂಬರ್ 20-22 ಮತ್ತು 27-29 ರಲ್ಲಿ ಕೂಡ ನೀವು ಕೊಳ್ಳಬಹುದು. ನವಂಬರ್ ನಲ್ಲಿ ಹೂಡಿಕೆ ಸಾಧ್ಯವಿಲ್ಲ ಎನ್ನುವರು ಡಿಸೆಂಬರ್ ನ ಆಯ್ದ ದಿನಗಳಲ್ಲಿ ಖರೀದಿ ಮಾಡಬಹುದಾಗಿದೆ.