
ನವದೆಹಲಿ: ನಗರ ಪ್ರದೇಶಗಳಲ್ಲಿ ಹೊಸ ಗ್ರಾಹಕರಿಗೆ ಕನಿಷ್ಠ ಸರಾಸರಿ ಬ್ಯಾಲೆನ್ಸ್ (MAB) ಮಿತಿಯನ್ನು 50,000 ರೂ.ಗಳಿಂದ 15,000 ರೂ.ಗಳಿಗೆ ನಿಗದಿ ಮಾಡಲು ಐಸಿಐಸಿಐ ಬ್ಯಾಂಕ್ ಸೂಚಿಸಿದೆ.
ಗ್ರಾಹಕರಿಂದ ಭಾರಿ ವಿರೋಧ ವ್ಯಕ್ತವಾದ ನಂತರ ಮತ್ತು ದೇಶದ ಎರಡನೇ ಅತಿದೊಡ್ಡ ಬ್ಯಾಂಕ್ ನಗರ ಪ್ರದೇಶಗಳಲ್ಲಿ ಹೊಸ ಗ್ರಾಹಕರಿಗೆ MAB ಮಿತಿಯನ್ನು 10,000 ರೂ.ಗಳಿಂದ 50,000 ರೂ.ಗಳಿಗೆ ಏರಿಸಿದ ಕೆಲವು ದಿನಗಳ ನಂತರ ಈ ಪರಿಷ್ಕರಣೆ ಮಾಡಲಾಗಿದೆ. ಆದರೂ ಪರಿಷ್ಕೃತ MAB ಮಿತಿಯು ಹಿಂದಿನದಕ್ಕಿಂತ 5,000 ರೂ. ಹೆಚ್ಚಾಗಿದೆ.
ಅರೆ-ನಗರ ಪ್ರದೇಶಗಳಲ್ಲಿ ಹೊಸ ICICI ಬ್ಯಾಂಕ್ ಗ್ರಾಹಕರು ನಿರ್ವಹಿಸಬೇಕಾದ ಕನಿಷ್ಠ ಬ್ಯಾಲೆನ್ಸ್ ನ್ನು 25,000 ರೂ.ಗಳಿಂದ 7,500 ರೂ.ಗಳಿಗೆ ಇಳಿಸಲಾಗಿದೆ. ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಹಳೆಯ ಗ್ರಾಹಕರಿಗೆ MAB ಮಿತಿ 5,000 ರೂ.ಗಳಲ್ಲಿಯೇ ಉಳಿದಿದೆ.
ಐಸಿಐಸಿಐ ಬ್ಯಾಂಕ್ ಶನಿವಾರ MAB ಮಿತಿಯನ್ನು 50,000 ರೂ.ಗಳಿಗೆ ಏರಿಸಿರುವುದಾಗಿ ಪ್ರಕಟಿಸಿತ್ತು. ಭಾರತದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), 2020 ರಲ್ಲಿ ಕನಿಷ್ಠ ಬ್ಯಾಲೆನ್ಸ್ ನಿಯಮವನ್ನು ರದ್ದುಗೊಳಿಸಿತ್ತು.
ಇತರ ಹೆಚ್ಚಿನ ಬ್ಯಾಂಕುಗಳು ಗಮನಾರ್ಹವಾಗಿ ಕಡಿಮೆ ಮಿತಿಗಳನ್ನು ಕಾಯ್ದುಕೊಳ್ಳುತ್ತವೆ, ಸಾಮಾನ್ಯವಾಗಿ ರೂ. 2,000 ರಿಂದ ರೂ. 10,000 ರವರೆಗೆ ನಿಗದಿಪಡಿಸಿವೆ.
Advertisement