2026ರ ಮೊದಲಾರ್ಧದಲ್ಲಿ Reliance Jio IPO ಶುರು: ಮುಖೇಶ್ ಅಂಬಾನಿ ಘೋಷಣೆ

ರಿಲಯನ್ಸ್ ಇಂಡಸ್ಟ್ರೀಸ್ (ಆರ್‌ಐಎಲ್) ನ ವಾರ್ಷಿಕ ಮಹಾಸಭೆಯಲ್ಲಿ ದೊಡ್ಡ ಘೋಷಣೆ ಮಾಡಿದ ಮುಖೇಶ್ ಅಂಬಾನಿ, ಐಪಿಒಗೆ ಸಂಬಂಧಿಸಿದ ಕರಡು ಪತ್ರವನ್ನು ಶೀಘ್ರದಲ್ಲೇ ಸಲ್ಲಿಸಲಾಗುವುದು ಎಂದರು.
Mukesh Ambani
ಮುಕೇಶ್ ಅಂಬಾನಿ
Updated on

ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಖೇಶ್ ಅಂಬಾನಿ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ (Reliance Jio) ಐಪಿಒ ಕುರಿತು ದೊಡ್ಡ ಮಾಹಿತಿ ನೀಡಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ (ಆರ್‌ಐಎಲ್) ನ ವಾರ್ಷಿಕ ಮಹಾಸಭೆಯಲ್ಲಿ ದೊಡ್ಡ ಘೋಷಣೆ ಮಾಡಿದ ಮುಖೇಶ್ ಅಂಬಾನಿ (Mukesh Ambani) ಐಪಿಒಗೆ ಸಂಬಂಧಿಸಿದ ಕರಡು ಪತ್ರವನ್ನು ಶೀಘ್ರದಲ್ಲೇ ಸಲ್ಲಿಸಲಾಗುವುದು. 2026ರ ಮೊದಲಾರ್ಧದಲ್ಲಿ ರಿಲಯನ್ಸ್ ಜಿಯೋ ಐಪಿಒ ಅನ್ನು ಪ್ರಾರಂಭಿಸುವ ಯೋಜನೆ ಇದೆ ಎಂದು ಹೇಳಿದರು.

ಜಿಯೋ 50 ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿದೆ. ಕಂಪನಿಯು 5G, ಸ್ಥಿರ ಬ್ರಾಡ್‌ಬ್ಯಾಂಡ್ ಮತ್ತು AI ತಂತ್ರಜ್ಞಾನದಲ್ಲಿ ದೊಡ್ಡ ಹೂಡಿಕೆಗಳನ್ನು ಮಾಡಿದೆ. ಷೇರು ಮಾರುಕಟ್ಟೆಯಲ್ಲಿ ಜಿಯೋವನ್ನು ಪಟ್ಟಿ ಮಾಡುವುದರಿಂದ ಹೂಡಿಕೆದಾರರಿಗೆ ದೊಡ್ಡ ಅವಕಾಶ ಸಿಗಬಹುದು. ಅಂದಾಜಿನ ಪ್ರಕಾರ, ಜಿಯೋ ಕಂಪನಿಯು ಐಪಿಒ ಮೂಲಕ 12 ರಿಂದ 13 ಲಕ್ಷ ಕೋಟಿ ರೂ.ಗಳವರೆಗೆ ಸಂಗ್ರಹಿಸಬಹುದು. ಅದನ್ನು ತನ್ನ ವ್ಯವಹಾರವನ್ನು ವಿಸ್ತರಿಸಲು ಬಳಸಬಹುದು ಎಂದರು.

ಮುಖೇಶ್ ಅಂಬಾನಿ ಜಾಗತಿಕ ಮಟ್ಟದಲ್ಲಿ ಷೇರುದಾರರಿಗೆ ಮೌಲ್ಯವನ್ನು ಅನ್‌ಲಾಕ್ ಮಾಡುತ್ತದೆ ಎಂದು ಹೇಳಿದರು. ಜಿಯೋ ಇತ್ತೀಚೆಗೆ 500 ಮಿಲಿಯನ್ ಗ್ರಾಹಕರ ಗಡಿಯನ್ನು ದಾಟಿದೆ. 2025ನೇ ಹಣಕಾಸು ವರ್ಷದಲ್ಲಿ ಜಿಯೋದ ಆದಾಯ ₹1.28 ಲಕ್ಷ ಕೋಟಿಗಳಷ್ಟಿದ್ದರೆ, EBITDA 125 ಬಿಲಿಯನ್ ಡಾಲರ್ ಆಗಿದ್ದು, ಇದು ಬಲವಾದ ಗಳಿಕೆಯನ್ನು ತೋರಿಸುತ್ತದೆ ಎಂದರು.

Mukesh Ambani
ಡಾಲರ್ ಎದುರು ರೂಪಾಯಿ ಮೌಲ್ಯ ಇತಿಹಾಸದಲ್ಲೇ ದಾಖಲೆಯ ಕುಸಿತ!

ರಿಲಯನ್ಸ್ ಇಂಡಸ್ಟ್ರೀಸ್‌ನ 48ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ, ಅಧ್ಯಕ್ಷ ಮುಖೇಶ್ ಅಂಬಾನಿ ಕಂಪನಿಯು 2025ರಲ್ಲಿ ಅದ್ಭುತ ಪ್ರದರ್ಶನ ನೀಡಿದೆ ಎಂದರು. ಇದು ಭಾರತದಲ್ಲಿ 125 ಬಿಲಿಯನ್ ಡಾಲರ್ ವಾರ್ಷಿಕ ಆದಾಯವನ್ನು ದಾಟಿದ ಮೊದಲ ಕಂಪನಿಯಾಗಿದೆ. ರಿಲಯನ್ಸ್‌ನ EBITDA 1,83,422 ಕೋಟಿ (21.5 ಬಿಲಿಯನ್ ಡಾಲರ್) ಮತ್ತು ನಿವ್ವಳ ಲಾಭ 81,309 ಕೋಟಿ (9.5 ಬಿಲಿಯನ್ ಡಾಲರ್) ಆಗಿತ್ತು. ರಿಲಯನ್ಸ್‌ನ ರಫ್ತುಗಳ ಬಗ್ಗೆ ಹೇಳುವುದಾದರೆ, ಇದು 2,83,719 ಕೋಟಿ (33.2 ಬಿಲಿಯನ್ ಡಾಲರ್) ಆಗಿತ್ತು. ಇದು ಭಾರತದ ಒಟ್ಟು ಸರಕು ರಫ್ತಿನ ಶೇಕಡ 7.6ರಷ್ಟಿದೆ ಮತ್ತು ಭಾರತದ ಅತಿದೊಡ್ಡ ರಫ್ತುದಾರ ಕಂಪನಿಗಳಲ್ಲಿ ಒಂದಾಗಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com