

ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನ ವಿಳಂಬ ಮತ್ತು ರದ್ದತಿಯ ಸಮಸ್ಯೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಸ್ಪೈಸ್‌ಜೆಟ್ ವಿಮಾನಯಾನ ಸಂಸ್ಥೆ ಮುಂದಿನ ಕೆಲವು ದಿನಗಳ ಕಾಲ 100 ಹೆಚ್ಚುವರಿ ವಿಮಾನಗಳನ್ನು ಓಡಿಸುವ ಮೂಲಕಸಹಾಯ ವಿಸ್ತರಿಸುತ್ತಿದೆ ಎಂದು ಸ್ಪೈಸ್‌ಜೆಟ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ಅವರು ಶುಕ್ರವಾರ ಹೇಳಿದ್ದಾರೆ.
ಈ ಘಟನೆ ಅತ್ಯಂತ ದುರದೃಷ್ಟಕರ ಮತ್ತು ಪ್ರಯಾಣಿಕರಿಗೆ ತೀವ್ರ ಅನಾನುಕೂಲತೆಯನ್ನುಂಟು ಮಾಡಿದೆ ಎಂದು ಅವರು ತಿಳಿಸಿದ್ದಾರೆ.
"ಈ ಘಟನೆ ಅತ್ಯಂತ ದುರದೃಷ್ಟಕರ ಮತ್ತು ಇದು ಪ್ರಯಾಣಿಕರಿಗೆ ಅಪಾರ ಅನಾನುಕೂಲತೆಯನ್ನು ಉಂಟುಮಾಡಿದೆ... ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಸರ್ಕಾರ ನಿಜವಾಗಿಯೂ ಶ್ರಮಿಸುತ್ತಿದೆ... ಇಂಡಿಗೋ ತನ್ನ ಕೈಲಾದಷ್ಟು ಸಮಸ್ಯೆ ಪರಿಹರಿಸಲು ಯತ್ನಿಸುತ್ತಿದೆ... ನಾವು (ಸ್ಪೈಸ್‌ಜೆಟ್) ಮುಂದಿನ ಕೆಲವು ದಿನಗಳ ಕಾಲ 100 ಹೆಚ್ಚುವರಿ ವಿಮಾನಗಳನ್ನು ಓಡಿಸುವ ಮೂಲಕ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇವೆ. ಏನಾಯಿತು ಮತ್ತು ಏಕೆ ಎಂದು ಕಂಡುಹಿಡಿಯುವುದು ಮುಖ್ಯ. ಸಮಿತಿಯನ್ನು ರಚಿಸುವ ಸರ್ಕಾರದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ..." ಎಂದು ಅಜಯ್ ಸಿಂಗ್ ಅವರು ಹೇಳಿದ್ದಾರೆ.
ANI ಜೊತೆ ಮಾತನಾಡಿದ ಅವರು, ಭವಿಷ್ಯದಲ್ಲಿ ಇಂತಹ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಲು ವಿಮಾನ ವಿಳಂಬ ಮತ್ತು ರದ್ದತಿಗೆ ಮೂಲ ಕಾರಣವನ್ನು ಗುರುತಿಸಬೇಕು ಎಂದು ಒತ್ತಿ ಹೇಳಿದ್ದಾರೆ.
Advertisement