ಇಂಡಿಗೋ ವಿಮಾನ ಹಾರಾಟ 3 ದಿನಗಳಲ್ಲಿ ಸಹಜ ಸ್ಥಿತಿಗೆ: ಸರ್ಕಾರ; 10 ದಿನ ಎಂದ ವಿಮಾನಯಾನ ಸಂಸ್ಥೆ!

ಕಳೆದ ನಾಲ್ಕು ದಿನಗಳಲ್ಲಿ ನೂರಾರು ವಿಮಾನ ರದ್ದತಿ ಮತ್ತು ವಿಳಂಬಕ್ಕೆ ಕಾರಣವಾದ ಇಂಡಿಗೋ ಅಡೆತಡೆಗಳಿಗೆ ಕಾರಣಗಳು ಮತ್ತು ಹೊಣೆಗಾರಿಕೆಯನ್ನು ನಿರ್ಧರಿಸಲು ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಲು ನಿರ್ಧರಿಸಿದೆ.
IndiGo Flight Cancelation
ಇಂಡಿಗೋ ವಿಮಾನಗಳ ರದ್ದು, ಪ್ರಯಾಣಿಕರ ಪರದಾಟ
Updated on

ನವದೆಹಲಿ: ಹೊಸ ವಿಮಾನ ಕರ್ತವ್ಯ ನಿಯಮಗಳನ್ನು ಹಿಂಪಡೆಯುವುದು ಸೇರಿದಂತೆ ವಿವಿಧ ಕಾರ್ಯಾಚರಣೆಯ ಕ್ರಮಗಳು ಇಂಡಿಗೋ ವಿಮಾನಗಳ ಅಡೆತಡೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ ಮತ್ತು ಮುಂದಿನ ಮೂರು ದಿನಗಳಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆ ಇದೆ ಎಂದು ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಅವರು ಶುಕ್ರವಾರ ಹೇಳಿದ್ದಾರೆ.

ಕಳೆದ ನಾಲ್ಕು ದಿನಗಳಲ್ಲಿ ನೂರಾರು ವಿಮಾನ ರದ್ದತಿ ಮತ್ತು ವಿಳಂಬಕ್ಕೆ ಕಾರಣವಾದ ಇಂಡಿಗೋ ಅಡೆತಡೆಗಳಿಗೆ ಕಾರಣಗಳು ಮತ್ತು ಹೊಣೆಗಾರಿಕೆಯನ್ನು ನಿರ್ಧರಿಸಲು ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಲು ನಿರ್ಧರಿಸಿದೆ ಎಂದು ಸಚಿವರು ತಿಳಿಸಿದ್ದಾರೆ.

ಇಂಡಿಗೋ ಸಂಕಷ್ಟಕ್ಕೆ ಕಾರಣವನ್ನು ಪರಿಶೀಲಿಸಲು ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಲಾಗಿದೆ. ಡಿಜಿಸಿಎ ನಾಲ್ಕು ಸದಸ್ಯರ ಸಮಿತಿಯನ್ನು ರಚಿಸಲಾಗಿದ್ದು, ಇಂಡಿಗೋದ ಆಂತರಿಕ ಮೇಲ್ವಿಚಾರಣೆ ಮತ್ತು ಕಾರ್ಯಾಚರಣಾ ಸಿದ್ಧತೆಯಲ್ಲಿನ ನ್ಯೂನತೆಗಳನ್ನು ತನಿಖೆ ಮಾಡಲು ಆದೇಶಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ವಿಮಾನಗಳ ವೇಳಾಪಟ್ಟಿಯಲ್ಲಿ, ವಿಶೇಷವಾಗಿ ಇಂಡಿಗೊ ವಿಮಾನಯಾನ ಸಂಸ್ಥೆಗಳ ವಿಮಾನಗಳ ವೇಳಾಪಟ್ಟಿಯಲ್ಲಿ ಆಗುತ್ತಿರುವ ಅಡಚಣೆಯನ್ನು ಪರಿಹರಿಸಲು ನಾಗರಿಕ ವಿಮಾನಯಾನ ಸಚಿವಾಲಯ ತುರ್ತು ಮತ್ತು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ನಾಯ್ಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

IndiGo Flight Cancelation
ಬೆಂಗಳೂರಿನಿಂದ ಮುಂಬೈ, ದೆಹಲಿಗೆ ಹಾರಬೇಕಿದ್ದ ಇಂಡಿಗೋ ವಿಮಾನಗಳು ರದ್ದು; ಸಂಕಷ್ಟಕ್ಕೆ ಸಿಲುಕಿದ ಪ್ರಯಾಣಿಕರು

"ಡಿಜಿಸಿಎ ವಾರದ ವಿಶ್ರಾಂತಿ ಮತ್ತು ಸಾಮಾನ್ಯ ರಜೆಯನ್ನು ಪ್ರತ್ಯೇಕಿಸುವ ನಿಯಮವನ್ನು ತಾತ್ಕಾಲಿಕವಾಗಿ ಹಿಂಪಡೆದಿದೆ. ಈ ನಿರ್ದೇಶನಗಳು ತಕ್ಷಣದ ಅನುಷ್ಠಾನದ ಆಧಾರದ ಮೇಲೆ, ಮುಂದಿನ ಮೂರು ದಿನಗಳಲ್ಲಿ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ" ಎಂದು ಸಚಿವರು ಹೇಳಿದ್ದಾರೆ.

ಡಿಸೆಂಬರ್ 10 ರಿಂದ 15ರ ನಡುವೆ ಪರಿಸ್ಥಿತಿ ಸಹಜ ಸ್ಥಿತಿಗೆ

ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ಅವರು ಶುಕ್ರವಾರ ಮಾತನಾಡಿ, ಶನಿವಾರ ವಿಮಾನಯಾನ ಸಂಸ್ಥೆಯು 1,000 ಕ್ಕಿಂತ ಕಡಿಮೆ ವಿಮಾನ ರದ್ದತಿಗಳನ್ನು ನಿರೀಕ್ಷಿಸುತ್ತಿದೆ ಮತ್ತು ಡಿಸೆಂಬರ್ 10 ರಿಂದ 15 ರ ನಡುವೆ ಪರಿಸ್ಥಿತಿ ಸಾಮಾನ್ಯವಾಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

ಅನಾನುಕೂಲತೆಗಾಗಿ ಪ್ರಯಾಣಿಕರಿಗೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ ಎಲ್ಬರ್ಸ್, ನವೆಂಬರ್ 1ರಿಂದ ಜಾರಿಗೆ ಬಂದ ಹೊಸ ಎಫ್‌ಡಿಟಿಎಲ್‌ ನಿಯಮಗಳ ಪ್ರಕಾರ ಅಗತ್ಯವಿರುವ ವಿಮಾನ ಚಾಲಕರ ಸಂಖ್ಯೆಯನ್ನು ತಪ್ಪಾಗಿ ಲೆಕ್ಕ ಹಾಕಿದ್ದು, ಕಂಪನಿಯ ಯೋಜನೆಯಲ್ಲಿ ಕೊರತೆಗಳಿದ್ದವು ಎಂದು ಒಪ್ಪಿಕೊಂಡಿದ್ದಾರೆ. ಡಿಸೆಂಬರ್ 10 ಮತ್ತು 15ರ ನಡುವೆ ಪರಿಸ್ಥಿತಿ ಸಹಜವಾಗುವ ನಿರೀಕ್ಷೆ ಇದೆ ಎಂದು ಸಿಇಒ ತಿಳಿಸಿದ್ದಾರೆ .

IndiGo Flight Cancelation
Watch | ಇಂಡಿಗೋ ವಿಮಾನಗಳ ಹಾರಾಟ ವಿಳಂಬ, ರದ್ದತಿ: ಬೆಂಗಳೂರು ಏರ್‏ಪೋರ್ಟ್ ನಲ್ಲಿ ಕೋಲಾಹಲ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com