

ಬೆಂಗಳೂರು: ದೇಶದ ಪ್ರಮುಖ ಆಹಾರ ಡೆಲಿವರಿ ಸಂಸ್ಥೆ ಸ್ವಿಗ್ಗಿ ದಶಕದಿಂದಲೂ ತನ್ನ ಪ್ರಾಬಲ್ಯವನ್ನು ಮುಂದುವರೆಸಿದ್ದು, 2025 ರಲ್ಲಿ 93 ಮಿಲಿಯನ್ ಯೂನಿಟ್ ಬಿರಿಯಾನಿ ಆರ್ಡರ್‌ಗಳೊಂದಿಗೆ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಇದರೊಂದಿಗೆ ಸತತ 10ನೇ ವರ್ಷವೂ ಸ್ವಿಗ್ಗಿಯಲ್ಲಿ ಅತಿ ಹೆಚ್ಚು ಆರ್ಡರ್ ಮಾಡಿದ ಖಾದ್ಯವಾಗಿ ಬಿರಿಯಾನಿ ಅಗ್ರಸ್ಥಾನ ಪಡೆದುಕೊಂಡಿದೆ.
ಈ ವರ್ಷ ಸ್ವಿಗ್ಗಿಯಲ್ಲಿ ನಿಮಿಷಕ್ಕೆ 194 ಅಥವಾ ಪ್ರತಿ ಸೆಕೆಂಡಿಗೆ 3.25 ಬಿರಿಯಾನಿಗಳನ್ನು ಆರ್ಡರ್ ಮಾಡಲಾಗಿದೆ.
“ಹೌ ಇಂಡಿಯಾ ಸ್ವಿಗ್ಗಿ’ಡ”ನ 10ನೇ ಆವೃತ್ತಿಯ ಪ್ರಕಾರ, 57.7 ಮಿಲಿಯನ್ ಚಿಕನ್ ಬಿರಿಯಾನಿ ಆರ್ಡರ್‌ಗಳೊಂದಿಗೆ ಮುಂಚೂಣಿಯಲ್ಲಿದ್ದು, ನಂತರ ಬರ್ಗರ್ 44.2 ಮಿಲಿಯನ್ ಆರ್ಡರ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಪಿಜ್ಜಾ 40.1 ಮಿಲಿಯನ್ ಮತ್ತು ವೆಜ್ ದೋಸೆ 26.2 ಮಿಲಿಯನ್ ಆರ್ಡರ್‌ಗಳೊಂದಿಗೆ ನಂತರದ ಸ್ಥಾನದಲ್ಲಿವೆ.
ಸಿಹಿತಿಂಡಿಗಳ ವಿಷಯಕ್ಕೆ ಬಂದರೆ, ಬಿಳಿ ಚಾಕೊಲೇಟ್ ಕೇಕ್ 6.9 ಮಿಲಿಯನ್ ಆರ್ಡರ್‌ಗಳೊಂದಿಗೆ ಅಗ್ರಸ್ಥಾನದಲ್ಲಿದೆ, ಚಾಕೊಲೇಟ್ ಕೇಕ್ (5.4 ಮಿಲಿಯನ್) ಮತ್ತು ಗುಲಾಬ್ ಜಾಮೂನ್ (4.5 ಮಿಲಿಯನ್) ಗಿಂತ ಮುಂದಿದೆ. ಕಾಜು ಬರ್ಫಿ(2 ಮಿಲಿಯನ್) ಮತ್ತು ಬೇಸನ್ ಲಾಡೂ (1.9 ಮಿಲಿಯನ್) ನಂತಹ ಭಾರತೀಯ ಸಿಹಿತಿಂಡಿಗಳು ಜನಪ್ರಿಯ ಆಯ್ಕೆಗಳಾಗಿವೆ.
ಮುಂಬೈನ ಆಹಾರಪ್ರಿಯರೊಬ್ಬರು "ದಿನವಿಡೀ ಊಟ" ಎಂದು ಸ್ವಿಗ್ಗಿಯನ್ನು ಮರು ವ್ಯಾಖ್ಯಾನಿಸಿದ್ದಾರೆ ಮತ್ತು 2025 ರಲ್ಲಿ ಸ್ವಿಗ್ಗಿಯಲ್ಲಿ ಅವರು 3,196 ಆಹಾರ ಆರ್ಡರ್‌ಗಳನ್ನು ಮಾಡಿದ್ದಾರೆ. ಇದು ದಿನಕ್ಕೆ ಸುಮಾರು 9 ಆಹಾರ ಆರ್ಡರ್‌ಗಳಾಗಿದ್ದು, ಇದು ದೇಶದಲ್ಲಿಯೇ ಅತಿ ಹೆಚ್ಚು ಆಹಾರ ಆರ್ಡರ್ ಮಾಡಿದೆ ವ್ಯಕ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಇನ್ನೂ ಹೊರಗೆ ಊಟ ಮಾಡಲು ಬೆಂಗಳೂರಿನ ಇಬ್ಬರು ಗ್ರಾಹಕರು ಮತ್ತು ಮುಂಬೈನಲ್ಲಿ ಇಬ್ಬರು ಗ್ರಾಹಕರು ತಲಾ 3 ಲಕ್ಷ ರೂ.ಗಳ ಅತ್ಯಧಿಕ ಬಿಲ್ಲಿಂಗ್ ಮಾಡಿದ್ದಾರೆ. ಪುಣೆಯಲ್ಲಿ, ಒಬ್ಬ ಗ್ರಾಹಕರು ಒಂದೇ ಬಾರಿಗೆ 173,885 ರೂ. ಪಾವತಿ ಮಾಡಿದ್ದಾರೆ.
"ಇದು ಕೇವಲ 93 ಮಿಲಿಯನ್ ಬಿರಿಯಾನಿಗಳ ಆರ್ಡರ್ ಬಗ್ಗೆ ಅಲ್ಲ, ಇದು ಜಾಗತಿಕ ಪಾಕಪದ್ಧತಿಗಳ ಬಗ್ಗೆ ಹೆಚ್ಚುತ್ತಿರುವ ಹಸಿವು ಅಥವಾ ಸ್ಥಳೀಯ ಮೆಚ್ಚಿನ ಆಹಾರದ ಬಗ್ಗೆ ಮರು ವ್ಯಾಖ್ಯಾನಿಸುತ್ತಿದೆ" ಎಂದು ಸ್ವಿಗ್ಗಿ ಫುಡ್ ಮಾರ್ಕೆಟ್‌ಪ್ಲೇಸ್‌ನ ಸಿಇಒ ರೋಹಿತ್ ಕಪೂರ್ ಹೇಳಿದ್ದಾರೆ.
Advertisement