ನಿರ್ಮಲಾ ಸೀತಾರಾಮನ್
ವಾಣಿಜ್ಯ
Union Budget 2025: ಪ್ರಸಕ್ತ ವರ್ಷ ವಿತ್ತೀಯ ಕೊರತೆ ಜಿಡಿಪಿಯ ಶೇ.4.8; 2026ರಲ್ಲಿ ಶೇಕಡಾ 4.4; ನಿರ್ಮಲಾ ಸೀತಾರಾಮನ್
2025-26ನೇ ಸಾಲಿನ ಬಜೆಟ್ ಮಂಡಿಸುತ್ತಾ, ಮುಂದಿನ ಹಣಕಾಸು ವರ್ಷದಲ್ಲಿ ನಿವ್ವಳ ಮಾರುಕಟ್ಟೆ ಸಾಲಗಳು 11.54 ಲಕ್ಷ ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದೆ ಎಂದು ಹೇಳಿದರು.
ನವದೆಹಲಿ: 2025ನೇ ಹಣಕಾಸು ವರ್ಷದಲ್ಲಿ ಹಣಕಾಸು ಕೊರತೆಯನ್ನು ಒಟ್ಟು ದೇಶೀಯ ಉತ್ಪನ್ನದ ಶೇಕಡಾ 4.8 ಮತ್ತು 2026ನೇ ಹಣಕಾಸು ವರ್ಷದಲ್ಲಿ ಶೇಕಡಾ 4.4 ಎಂದು ನಿಗದಿಪಡಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ತಿಳಿಸಿದ್ದಾರೆ.
2025-26ನೇ ಸಾಲಿನ ಬಜೆಟ್ ಮಂಡಿಸುತ್ತಾ, ಮುಂದಿನ ಹಣಕಾಸು ವರ್ಷದಲ್ಲಿ ನಿವ್ವಳ ಮಾರುಕಟ್ಟೆ ಸಾಲಗಳು 11.54 ಲಕ್ಷ ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದೆ ಎಂದು ಹೇಳಿದರು.
ಎಲ್ಲಾ ಹಣಕಾಸುಯೇತರ ವಲಯಗಳ ನಿಯಂತ್ರಕ ಸುಧಾರಣೆಗಳಿಗಾಗಿ ಸರ್ಕಾರವು ಉನ್ನತ ಮಟ್ಟದ ಸಮಿತಿಯನ್ನು ಸ್ಥಾಪಿಸಲಿದೆ. NaBFID (ರಾಷ್ಟ್ರೀಯ ಹಣಕಾಸು ಮೂಲಸೌಕರ್ಯ ಮತ್ತು ಅಭಿವೃದ್ಧಿ ಬ್ಯಾಂಕ್) ಕಾರ್ಪೊರೇಟ್ ಬಾಂಡ್‌ಗಳಿಗೆ ಭಾಗಶಃ ಸಾಲ ವರ್ಧನೆ ಸೌಲಭ್ಯವನ್ನು ಸ್ಥಾಪಿಸಲಿದೆ ಎಂದು ಹೇಳಿದರು.
ರಾಜ್ಯಗಳ ಹೂಡಿಕೆ ಸ್ನೇಹಪರ ಸೂಚ್ಯಂಕವನ್ನು ಈ ವರ್ಷ ಪ್ರಾರಂಭಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

