ಜನವರಿಯಲ್ಲಿ ಭಾರತದ ಉತ್ಪಾದನಾ ಬೆಳವಣಿಗೆ 6 ತಿಂಗಳ ಗರಿಷ್ಠ ಮಟ್ಟಕ್ಕೆ

ಇನ್ಪುಟ್ ಬೆಲೆಗಳು ಸುಮಾರು ಒಂದು ವರ್ಷದಲ್ಲಿ ಅತ್ಯಂತ ದುರ್ಬಲ ವೇಗದಲ್ಲಿ ಏರಿಕೆಯಾಗಿದ್ದು, ಕಳೆದ ತಿಂಗಳು ಸಂಸ್ಥೆಗಳು ಮಾರಾಟದ ಬೆಲೆಗಳನ್ನು ನಿಧಾನಗತಿಯಲ್ಲಿ ಹೆಚ್ಚಿಸಲು ಅನುವು ಮಾಡಿಕೊಟ್ಟಿವೆ.
India's manufacturing growth
ಭಾರತದ ಉತ್ಪಾದನಾ ವಲಯ
Updated on

ನವದೆಹಲಿ: ಭಾರತದ ಉತ್ಪಾದನಾ ವಲಯ 2025ನೇ ವರ್ಷವನ್ನು ಬಲವಾದ ಹೆಜ್ಜೆಯೊಂದಿಗೆ ಪ್ರಾರಂಭಿಸಿದ್ದು, ಜನವರಿಯಲ್ಲಿ ಭಾರತದ ಉತ್ಪಾದನಾ ಬೆಳವಣಿಗೆ ಆರು ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದೆ.

ಸೋಮವಾರ ಬಿಡುಗಡೆಯಾದ ಮಾಸಿಕ ಸಮೀಕ್ಷೆ ಪ್ರಕಾರ, ಜನವರಿಯಲ್ಲಿ ಭಾರತದ ಉತ್ಪಾದನಾ ಬೆಳವಣಿಗೆ ಆರು ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದ್ದು, ಸುಮಾರು 14 ವರ್ಷಗಳಲ್ಲಿ ರಫ್ತುಗಳಲ್ಲಿನ ಕಡಿದಾದ ಏರಿಕೆಯಿಂದ ಇದು ಉತ್ತೇಜನಗೊಂಡಿದೆ ಎಂದು ತಿಳಿಸಿದೆ.

ಅಂತೆಯೇ ಫೆಬ್ರವರಿ 2011 ರಿಂದ ಹೊಸ ರಫ್ತುಗಳಲ್ಲಿನ ವೇಗದ ಏರಿಕೆಯಿಂದ ಬೆಂಬಲಿತವಾಗಿ ಋತುಮಾನಕ್ಕೆ ಅನುಗುಣವಾಗಿ ಹೊಂದಾಣಿಕೆ ಮಾಡಲಾದ HSBC ಇಂಡಿಯಾ ಬಿಡುಗಡೆ ಮಾಡಿರುವ ಉತ್ಪಾದನಾ ಖರೀದಿ ವ್ಯವಸ್ಥಾಪಕರ ಸೂಚ್ಯಂಕ (PMI) ಜನವರಿಯಲ್ಲಿ ಡಿಸೆಂಬರ್‌ನ ಒಂದು ವರ್ಷದ ಕನಿಷ್ಠ 56.4 ರಿಂದ 57.7 ಕ್ಕೆ ಏರಿತು ಎಂದು ತಿಳಿಸಿದೆ. ಅಂತೆಯೇ PMI ಪರಿಭಾಷೆಯಲ್ಲಿ, 50 ಕ್ಕಿಂತ ಹೆಚ್ಚಿನ ಪ್ರಮಾಣವು ವಿಸ್ತರಣೆಯನ್ನು ಸೂಚಿಸುತ್ತದೆ, ಆದರೆ 50 ಕ್ಕಿಂತ ಕಡಿಮೆ ಪ್ರಮಾಣವು ಇಳಿಕೆಯನ್ನು ಸೂಚಿಸುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಅಂಕಿ ಅಂಶವು ಜಾಗತಿಕವಾಗಿ ಬಳಕೆ ಪ್ರಮಾಣ ದುರ್ಬಲವಾಗಿರುವುದರಿಂದ ಮತ್ತು ಕಳೆದ ಕೆಲವು ತ್ರೈಮಾಸಿಕಗಳಲ್ಲಿ ಬೆಳವಣಿಗೆಯಲ್ಲಿ ನಿಧಾನಗತಿಯನ್ನು ಕಂಡಿರುವ ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯಾದ ಭಾರತಕ್ಕೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. S&P ಗ್ಲೋಬಲ್ ಸಂಗ್ರಹಿಸಿದ HSBC ಅಂತಿಮ ಭಾರತ ಉತ್ಪಾದನಾ ಖರೀದಿ ವ್ಯವಸ್ಥಾಪಕರ ಸೂಚ್ಯಂಕ (INPMI=ECI), ಡಿಸೆಂಬರ್‌ನ 12 ತಿಂಗಳ ಕನಿಷ್ಠ 56.4 ರಿಂದ ಕಳೆದ ತಿಂಗಳು 57.7 ಕ್ಕೆ ಏರಿದ್ದು, ಇದು 58.0 ಕ್ಕೆ ಏರಿಕೆಯನ್ನು ತೋರಿಸಿದ ಆರಂಭಿಕ ಅಂದಾಜಿಗಿಂತ ಸ್ವಲ್ಪ ಕಡಿಮೆಯಾಗಿದೆ ಎಂದು ಹೇಳಿದೆ.

India's manufacturing growth
Union Budget 2025: ಎಂಎಸ್‌ಇಗಳ ಬೆಳವಣಿಗೆಯತ್ತ ಗಮನ, ಕೈಗಾರಿಕಾ ಸಂಸ್ಥೆಗಳಿಂದ ಶ್ಲಾಘನೆ

ಇದು ಮುಂಬರುವ 12 ತಿಂಗಳುಗಳಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಸಮೀಕ್ಷೆ ಪ್ರಾರಂಭವಾದ ಕನಿಷ್ಠ ಮಾರ್ಚ್ 2005 ರಿಂದ ಸಂಸ್ಥೆಗಳು ತಮ್ಮ ಕಾರ್ಯಪಡೆಯನ್ನು ಪ್ರಬಲ ವೇಗದಲ್ಲಿ ವಿಸ್ತರಿಸುತ್ತಿವೆ ಎಂದು ವರದಿ ಹೇಳಿದೆ.

"ಜನವರಿಯಲ್ಲಿ ಭಾರತದ ಅಂತಿಮ ಉತ್ಪಾದನಾ PMI ಆರು ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದೆ. ದೇಶೀಯ ಮತ್ತು ರಫ್ತು ಬೇಡಿಕೆ ಎರಡೂ ಪ್ರಬಲವಾಗಿದ್ದು, ಹೊಸ ಆದೇಶಗಳ (Orders) ಬೆಳವಣಿಗೆಯನ್ನು ಬೆಂಬಲಿಸುತ್ತದೆ" ಎಂದು HSBC ಯ ಭಾರತದ ಮುಖ್ಯ ಅರ್ಥಶಾಸ್ತ್ರಜ್ಞ ಪ್ರಾಂಜುಲ್ ಭಂಡಾರಿ ಹೇಳಿದರು.

ಇನ್ಪುಟ್ ಬೆಲೆಗಳು ಸುಮಾರು ಒಂದು ವರ್ಷದಲ್ಲಿ ಅತ್ಯಂತ ದುರ್ಬಲ ವೇಗದಲ್ಲಿ ಏರಿಕೆಯಾಗಿದ್ದು, ಕಳೆದ ತಿಂಗಳು ಸಂಸ್ಥೆಗಳು ಮಾರಾಟದ ಬೆಲೆಗಳನ್ನು ನಿಧಾನಗತಿಯಲ್ಲಿ ಹೆಚ್ಚಿಸಲು ಅನುವು ಮಾಡಿಕೊಟ್ಟಿವೆ. ಹಣದುಬ್ಬರವು ಕಳೆದ ವರ್ಷದ ಬಹುಪಾಲು ಭಾರತೀಯ ರಿಸರ್ವ್ ಬ್ಯಾಂಕಿನ ಮಧ್ಯಮ-ಅವಧಿಯ ಗುರಿಯಾದ 4% ಗಿಂತ ಹೆಚ್ಚಿನ ಮಟ್ಟದಲ್ಲಿದೆ ಎಂಬುದನ್ನು ಗಮನಿಸಿದರೆ ಇದು ಸ್ವಾಗತಾರ್ಹ ಸುದ್ದಿಯಾಗಿದೆ ಎಂದು ವರದಿ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com