
ಮುಂಬೈ: ಭಾರತೀಯ ಷೇರುಮಾರುಕಟ್ಟೆ ಸತತ ನಾಲ್ಕನೇ ದಿನವೂ ಕುಸಿತದೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದ್ದು, ಸೋಮವಾರ ಸೆನ್ಸೆಕ್ಸ್ 548 ಅಂಶಗಳಷ್ಟು ಕುಸಿತಗೊಂಡಿದೆ. ಅಮೆರಿಕದ ಹೊಸ ಸುಂಕ ಭೀತಿ ಬ್ಲೂ-ಚಿಪ್ ಬ್ಯಾಂಕಿಂಗ್, ಲೋಹ ಮತ್ತು ತೈಲ ಷೇರುಗಳ ಮಾರಾಟದಲ್ಲಿ ಪರಿಣಾಮ ಬೀರಿತು.
ಸೆನ್ಸೆಕ್ಸ್ ಇಂದು ಶೇ.0.70 ರಷ್ಟು ಅಂದರೆ 548.39 ಅಂಶಕಗಳ ಕುಸಿತದೊಂದಿಗೆ ವಾರದ ಕನಿಷ್ಠ 77,311.80 ಅಂಕಗಳಿಗೆ ಸ್ಥಿರವಾಯಿತು. ದಿನದ ಮಧ್ಯೆ 753.3 ಅಂಕ ಅಥವಾ ಶೇ. 0.96 ರೊಂದಿಗೆ 77. 106.89 ರಷ್ಟಿತ್ತು.
ಟ್ರೆಂಟ್, ಟಾಟಾ ಸ್ಟೀಲ್ ಮತ್ತು ಪವರ್ ಗ್ರಿಡ್‌ನ ನಷ್ಟದಿಂದಾಗಿ NSE ನಿಫ್ಟಿ 178.35 ಅಂಶಗಳು ಅಥವಾ ಶೇ. 0.76 ರಷ್ಟು ಕುಸಿತದೊಂದಿಗೆ 23,381.60 ಅಂಕಗಳಿಗೆ ಇಳಿದಿದೆ. ಅಮೆರಿಕದ ಸುಂಕದ ಭೀತಿ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವುದನ್ನು ಮುಂದುವರೆಸಿದೆ.
ಹೂಡಿಕೆದಾರರು ಅಪಾಯಕಾರಿ ಆಸ್ತಿಗಳ ಮೇಲೆ ಜಾಗರೂಕರಾಗಿರುವುದರಿಂದ ಮತ್ತು ಚಿನ್ನದಂತಹ ಸುರಕ್ಷಿತ ಸ್ವತ್ತುಗಳಿಗೆ ತಮ್ಮ ಹೂಡಿಕೆ ಮಾಡುತ್ತಿರುವುದರಿಂದ ಆದಾಯ ಹೆಚ್ಚುತ್ತಿದೆ ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದರು.
ಇಂದಿನ ವಹಿವಾಟಿನಲ್ಲಿ ಪವರ್ ಗ್ರಿಡ್, ಟಾಟಾ ಸ್ಟೀಲ್, ಜೊಮಾಟೊ, ಟೈಟಾನ್, ಬಜಾಜ್ ಫೈನಾನ್ಸ್, ಮಹೀಂದ್ರಾ ಮತ್ತು ಮಹೀಂದ್ರಾ, ಎನ್‌ಟಿಪಿಸಿ ಮತ್ತು ಟಾಟಾ ಮೋಟಾರ್ಸ್ ಷೇರುಗಳು ಕುಸಿದಿದ್ದು, ಕೋಟಕ್ ಮಹೀಂದ್ರಾ ಬ್ಯಾಂಕ್, ಭಾರ್ತಿ ಏರ್‌ಟೆಲ್, ಎಚ್‌ಸಿಎಲ್ ಟೆಕ್, ಟೆಕ್ ಮಹೀಂದ್ರಾ, ಐಸಿಐಸಿಐ ಬ್ಯಾಂಕ್ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಷೇರುಗಳು ಲಾಭ ಗಳಿಸಿವೆ.
ಫೆಬ್ರವರಿ 5 ರಿಂದ ನಾಲ್ಕು ದಿನಗಳ ಕುಸಿತದಲ್ಲಿ ಸೆನ್ಸೆಕ್ಸ್ 1,272 ಅಂಕಗಳು ಅಥವಾ ಶೇಕಡಾ 1.63 ರಷ್ಟು ಕುಸಿದಿದ್ದರೆ, ನಿಫ್ಟಿ 357 ಅಂಕಗಳು ಅಥವಾ ಶೇಕಡಾ 1.51 ರಷ್ಟು ಕುಸಿದಿದೆ.
Advertisement