
ಮುಂಬೈ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಮುಂಬೈನ ಲೋವರ್ ಪರೇಲ್‌ನಲ್ಲಿರುವ ತಮ್ಮ ಫ್ಲಾಟ್ ಅನ್ನು ತಿಂಗಳಿಗೆ ಬರೋಬ್ಬರಿ 2.60 ಲಕ್ಷ ರೂ.ಗೆ ಬಾಡಿಗೆಗೆ ನೀಡಿದ್ದಾರೆ ಎಂದು ಸ್ಕ್ವೇರ್ ಯಾರ್ಡ್ಸ್ ಗುರುವಾರ ತಿಳಿಸಿದೆ.
ರೋಹಿತ್ ಶರ್ಮಾ ಮತ್ತು ಅವರ ತಂದೆ ಗುರುನಾಥ್ ಶರ್ಮಾ ಅವರ ಹೆಸರಿನಲ್ಲಿ ಈ ಫ್ಲಾಟ್ ಇದ್ದು, ಆಸ್ತಿ ನೋಂದಣಿ ದಾಖಲೆಗಳನ್ನು ಪರಿಶೀಲಿಸಿರುವುದಾಗಿ ಸ್ಕ್ವೇರ್ ಯಾರ್ಡ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.
"ಮ್ಯಾಕ್ರೋಟೆಕ್ ಡೆವಲಪರ್ಸ್ ಲಿಮಿಟೆಡ್(ಲೋಧಾ ಗ್ರೂಪ್) ನಿರ್ಮಿಸಿದ ಅಪಾರ್ಟ್ಮೆಂಟ್ ನಲ್ಲಿ ರೋಹಿತ್ ಶರ್ಮಾ ಅವರು 1,298 ಚದರ ಅಡಿ ವಿಸ್ತೀರ್ಣದ ಫ್ಲಾಟ್ ಹೊಂದಿದ್ದಾರೆ. 7 ಎಕರೆಗಳಷ್ಟು ವಿಸ್ತೀರ್ಣದಲ್ಲಿ ಹರಡಿರುವ ಈ ಅಪಾರ್ಟ್ಮೆಂಟ್ ರೆಡಿ-ಟು-ಮೂವ್ ವಸತಿ ಯೋಜನೆಯಾಗಿದೆ.
ಮುರಳಿ ಕೃಷ್ಣನ್ ನಾಯರ್ ಎಂಬ ವ್ಯಕ್ತಿಗೆ ಅಪಾರ್ಟ್ಮೆಂಟ್ ಜೊತೆಗೆ ಎರಡು ಪಾರ್ಕಿಂಗ್ ಸ್ಥಳಗಳನ್ನು ಬಾಡಿಗೆಗೆ ನೀಡಲಾಗಿದೆ ಎಂದು ದಾಖಲೆಗಳು ತೋರಿಸಿವೆ.
Advertisement