
ನವದೆಹಲಿ: ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರ ಹಣವು 2024 ರಲ್ಲಿ ಮೂರು ಪಟ್ಟು ಹೆಚ್ಚಾಗಿ, 3.54 ಬಿಲಿಯನ್ ಸ್ವಿಸ್ ಫ್ರಾಂಕ್‌ಗೆ(ಸುಮಾರು 37,600 ಕೋಟಿ ರೂ.) ತಲುಪಿದೆ ಎಂದು ಸ್ವಿಸ್ ನ್ಯಾಷನಲ್ ಬ್ಯಾಂಕ್(SNB) ಜೂನ್ 19 ರಂದು ಬಹಿರಂಗಪಡಿಸಿದೆ. ಇದು 2021 ರ ನಂತರ ಗರಿಷ್ಠ ಮಟ್ಟವಾಗಿದೆ.
2021ರ ನಂತರ ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯ ಗ್ರಾಹಕರು ಇಟ್ಟಿರುವ ಠೇವಣಿ ಮೊತ್ತ ಶೇ.11ರಷ್ಟು ಏರಿಕೆಯಾಗಿದೆ. ಇದು ಬ್ಯಾಂಕ್ನಲ್ಲಿರುವ ಒಟ್ಟು ನಿಧಿಯ ಹತ್ತನೇ ಒಂದು ಭಾಗ ಎಂದು SNB ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
2023ರಲ್ಲಿ ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯ ಗ್ರಾಹಕರು ಮತ್ತು ಸಂಸ್ಥೆಗಳು ಇಟ್ಟಿದ್ದ ನಿಧಿಯಲ್ಲಿ ಶೇ.70 ರಷ್ಟು ಕುಸಿತ ಕಂಡುಬಂದಿತ್ತು. ಇದು ನಾಲ್ಕು ವರ್ಷದಲ್ಲಿ ಕನಿಷ್ಠ 1.04 ಬಿಲಿಯನ್ ಸ್ಟಿಸ್ ಫ್ರಾಂಕ್ ತಲುಪಿತ್ತು. ಇದೀಗ ಈ ನಿಧಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿದೆ.
2021ರಿಂದ ಇದೇ ಮೊದಲ ಬಾರಿಗೆ ಸ್ವಿಸ್ ಬ್ಯಾಂಕ್ನಲ್ಲಿಟ್ಟಿರುವ ಭಾರತೀಯರ ಹಣ ಏರಿಕೆಯಾಗಿದ್ದು, ಇದು 14 ವರ್ಷದಲ್ಲೇ ಅತಿ ಹೆಚ್ಚು (1.83 ಬಿಲಿಯನ್ ಡಾಲರ್) ಎಂಬುದನ್ನು ಗಮನಿಸಬೇಕು.
SNB ದತ್ತಾಂಶವು ಬ್ಯಾಂಕುಗಳ ಅಧಿಕೃತ ವರದಿಗಳನ್ನು ಆಧರಿಸಿದೆ ಮತ್ತು ಆಪಾದಿತ ಕಪ್ಪು ಹಣ ಅಥವಾ ಇತರ ದೇಶಗಳಲ್ಲಿನ ಸಂಸ್ಥೆಗಳ ಮೂಲಕ ಹೊಂದಿರುವ ಖಾತೆಗಳ ಬಗ್ಗೆ ವಿವರಗಳನ್ನು ಬಹಿರಂಗಪಡಿಸುವುದಿಲ್ಲ. ಈ ಹಣವನ್ನು ಸ್ವಯಂಚಾಲಿತವಾಗಿ ಅಕ್ರಮ ಎಂದು ಲೇಬಲ್ ಮಾಡಲು ಸಾಧ್ಯವಿಲ್ಲ ಎಂದು ಸ್ವಿಸ್ ಅಧಿಕಾರಿಗಳು ಪದೇ ಪದೇ ಹೇಳಿದ್ದಾರೆ.
ಸ್ವಿಸ್ ನ್ಯಾಷನಲ್ ಬ್ಯಾಂಕ್ ಹಂಚಿಕೊಂಡಿರುವ ಈ ಅಂಕಿಅಂಶಗಳ ವರದಿಯನುಸಾರ, ಈ ಹಣ ಭಾರತೀಯರದ್ದು ಮಾತ್ರವಲ್ಲ, ಸ್ವಿಸ್ ಬ್ಯಾಂಕ್ನಲ್ಲಿಟ್ಟಿರುವ ಮೂರನೇ ದೇಶದ ಸಂಸ್ಥೆಗಳು, ಎನ್ಆರ್ಐಗಳ ಹಣವಾಗಿದೆ.
Advertisement