ಸರ್ಜಾಪುರ ರಸ್ತೆ, ವೈಟ್‌ಫೀಲ್ಡ್‌ ಆಸ್ತಿಗೆ ಅಧಿಕ ಮೌಲ್ಯ; ವಾರ್ಷಿಕ ಶೇ.8 ರಷ್ಟು ಏರಿಕೆ

SBI ದೇಶದ ಅತಿದೊಡ್ಡ ಗೃಹ ಸಾಲ ನೀಡುವ ಸಂಸ್ಥೆಯಾಗಿದ್ದು, 8 ಲಕ್ಷ ಕೋಟಿ ರೂ. ಗೃಹ ಸಾಲ ಮುಂಗಡಗಳನ್ನು ನೀಡಿದೆ.
ಕ್ರೆಡೈ ಬೆಂಗಳೂರು ರಿಯಾಲ್ಟಿ ಎಕ್ಸ್‌ಪೋ 2025 ಅನ್ನು ಬೆಂಗಳೂರು ಸರ್ಕಲ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ಜನರಲ್ ಮ್ಯಾನೇಜರ್ ಜೂಹಿ ಸ್ಮಿತಾ ಸಿನ್ಹಾ ಮತ್ತು ಬೆಂಗಳೂರಿನ ಕ್ರೆಡೈ ಅಧ್ಯಕ್ಷ ಅಮರ್ ಮೈಸೂರು ಶುಕ್ರವಾರ ಉದ್ಘಾಟಿಸಿದರು.
ಕ್ರೆಡೈ ಬೆಂಗಳೂರು ರಿಯಾಲ್ಟಿ ಎಕ್ಸ್‌ಪೋ 2025 ಅನ್ನು ಬೆಂಗಳೂರು ಸರ್ಕಲ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ಜನರಲ್ ಮ್ಯಾನೇಜರ್ ಜೂಹಿ ಸ್ಮಿತಾ ಸಿನ್ಹಾ ಮತ್ತು ಬೆಂಗಳೂರಿನ ಕ್ರೆಡೈ ಅಧ್ಯಕ್ಷ ಅಮರ್ ಮೈಸೂರು ಶುಕ್ರವಾರ ಉದ್ಘಾಟಿಸಿದರು.
Updated on

ಬೆಂಗಳೂರು: ಐಟಿ ಕೇಂದ್ರಗಳಿಗೆ ಹತ್ತಿರ, ಸುಧಾರಿತ ಮೂಲಸೌಕರ್ಯ ಮತ್ತು ಉತ್ತಮ ಸಂಪರ್ಕದಿಂದಾಗಿ ನಗರದ ಸರ್ಜಾಪುರ ರಸ್ತೆ, ವೈಟ್‌ಫೀಲ್ಡ್, ಹೆಬ್ಬಾಳ ಮತ್ತು ದೇವನಹಳ್ಳಿಯಂತಹ ಪ್ರದೇಶಗಳು ಗಮನಾರ್ಹ ಬೆಳವಣಿಗೆ ಕಾಣುತ್ತಿವೆ ಎಂದು ಬೆಂಗಳೂರಿನ ಭಾರತೀಯ ರಿಯಲ್ ಎಸ್ಟೇಟ್ ಡೆವಲಪರ್‌ಗಳ ಸಂಘಗಳ ಒಕ್ಕೂಟದ (ಕ್ರೆಡೈ) ಅಧ್ಯಕ್ಷ ಅಮರ್ ಮೈಸೂರು ಹೇಳಿದರು.

ಶುಕ್ರವಾರ ನಡೆದ ಕ್ರೆಡೈ ರಿಯಾಲ್ಟಿ ಎಕ್ಸ್‌ಪೋ 2025ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, 'ಈ ಪ್ರದೇಶಗಳಲ್ಲಿ ಆಸ್ತಿ ಮೌಲ್ಯವು ವಾರ್ಷಿಕವಾಗಿ ಶೇ 8 ರಿಂದ 12ರವರೆಗೆ ಏರಿಕೆಯಾಗುವ ನಿರೀಕ್ಷೆಯಿದೆ. ಇವು ವಸತಿ ಮತ್ತು ವಾಣಿಜ್ಯ ಅಭಿವೃದ್ಧಿಗಳಿಗೆ ಹಾಟ್‌ಸ್ಪಾಟ್‌ಗಳಾಗುತ್ತಿವೆ. ಇದು ಭರವಸೆಯ ಹೂಡಿಕೆ ನಿರೀಕ್ಷೆಗಳನ್ನು ನೀಡುತ್ತದೆ' ಎಂದು ಹೇಳಿದರು.

ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆ ಅಭಿವೃದ್ಧಿ ಹೊಂದುತ್ತಿದೆ. ಸದ್ಯ, ಬೆಂಗಳೂರಿನಲ್ಲಿ ವಾರ್ಷಿಕವಾಗಿ ಸುಮಾರು 65,000 ಯೂನಿಟ್‌ಗಳು ಮಾರಾಟವಾಗುತ್ತಿದ್ದು ಶೀಘ್ರದಲ್ಲೇ ಈ ಸಂಖ್ಯೆ 1,00,000 ಮನೆಗಳಿಗೆ ಏರುತ್ತದೆ ಎಂದು ನಾವು ಭಾವಿಸುತ್ತೇವೆ' ಎಂದರು.

'SBI ದೇಶದ ಅತಿದೊಡ್ಡ ಗೃಹ ಸಾಲ ನೀಡುವ ಸಂಸ್ಥೆಯಾಗಿದ್ದು, 8 ಲಕ್ಷ ಕೋಟಿ ರೂ. ಗೃಹ ಸಾಲ ಮುಂಗಡಗಳನ್ನು ನೀಡಿದೆ. ಈ ಮೇಳದಲ್ಲಿ ಇದು ಶೇ 8.2 ರವರೆಗಿನ ಅತ್ಯಂತ ಸ್ಪರ್ಧಾತ್ಮಕ ದರಗಳು ಮತ್ತು ಇತರ ಕೊಡುಗೆಗಳನ್ನು ನೀಡುತ್ತಿದೆ' ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬೆಂಗಳೂರು ವೃತ್ತದ ಮುಖ್ಯ ಜನರಲ್ ಮ್ಯಾನೇಜರ್ ಜೂಹಿ ಸ್ಮಿತಾ ಸಿನ್ಹಾ ಹೇಳಿದರು.

ಕ್ರೆಡೈ ಬೆಂಗಳೂರು ರಿಯಾಲ್ಟಿ ಎಕ್ಸ್‌ಪೋ 2025 ಅನ್ನು ಬೆಂಗಳೂರು ಸರ್ಕಲ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ಜನರಲ್ ಮ್ಯಾನೇಜರ್ ಜೂಹಿ ಸ್ಮಿತಾ ಸಿನ್ಹಾ ಮತ್ತು ಬೆಂಗಳೂರಿನ ಕ್ರೆಡೈ ಅಧ್ಯಕ್ಷ ಅಮರ್ ಮೈಸೂರು ಶುಕ್ರವಾರ ಉದ್ಘಾಟಿಸಿದರು.
ಬೆಂಗಳೂರು ನಿವಾಸಿಗಳಿಗೆ ಗುಡ್‌ನ್ಯೂಸ್‌: ಹೊಸ ಖಾತಾ ಪಡೆಯಲು ಆಸ್ತಿ ಮಾಲೀಕರಿಗೆ BBMP ಮತ್ತೊಮ್ಮೆ ಅವಕಾಶ

ಅಧಿಕೃತ ಪ್ರಕಟಣೆ ಪ್ರಕಾರ, ಈ ಎಕ್ಸ್‌ಪೋ ಮಾರ್ಚ್ 14 ರಿಂದ 16 ರವರೆಗೆ ಮಾರತ್‌ಹಳ್ಳಿಯ ರಾಡಿಸನ್ ಬ್ಲೂನಲ್ಲಿ ನಡೆಯಲಿದೆ. ಸಮಯ ಬೆಳಿಗ್ಗೆ 10 ರಿಂದ ಸಂಜೆ 7 ರವರೆಗೆ. ಒಟ್ಟು 28 ಡೆವಲಪರ್‌ಗಳು ಮತ್ತು ಆರು ಬ್ಯಾಂಕರ್‌ಗಳು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಭಾಗವಹಿಸುವವರು ವಸತಿ, ವಾಣಿಜ್ಯ ಮತ್ತು ಐಷಾರಾಮಿ ವಿಭಾಗಗಳಲ್ಲಿ ಉತ್ತಮ ಹೂಡಿಕೆ ಅವಕಾಶಗಳನ್ನು ಕಂಡುಕೊಳ್ಳಬಹುದು ಮತ್ತು ರಿಯಲ್ ಎಸ್ಟೇಟ್ ಕುರಿತಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ತಜ್ಞರ ಸಮಾಲೋಚನೆ ಪಡೆಯಬಹುದು ಎಂದು ಅದು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com