ಉದ್ಯೋಗಿ ಜೊತೆ 'ರೊಮ್ಯಾಂಟಿಕ್ ಸಂಬಂಧ': ಸಿಇಒ ಹುದ್ದೆಯಿಂದ ಲಾರೆಂಟ್ ಫ್ರೀಕ್ಸೆ ವಜಾ ಮಾಡಿದ Nestle!

ತನಿಖೆ ನಂತರ ಫ್ರೀಕ್ಸೆ ಅವರನ್ನು ವಜಾಗೊಳಿಸಲಾಗಿದೆ ಎಂದು ನೆಸ್ಪ್ರೆಸೊ ಕಾಫಿ ಕ್ಯಾಪ್ಸುಲ್‌ಗಳು ಮತ್ತು ಕಿಟ್‌ಕ್ಯಾಟ್ ಚಾಕೊಲೇಟ್ ಬಾರ್‌ಗಳ ಹಿಂದಿನ ಬಹುರಾಷ್ಟ್ರೀಯ ಕಂಪನಿ ಹೇಳಿದೆ.
Laurent Freixe
ಲಾರೆಂಟ್ ಫ್ರೀಕ್ಸೆ
Updated on

ತನ್ನ ಅಧೀನದಲ್ಲಿ ಕೆಲಸ ಮಾಡುವ ಉದ್ಯೋಗಿಯೊಂದಿಗೆ ಪ್ರಣಯ ಸಂಬಂಧವನ್ನು ಹೊಂದಿದ ಆರೋಪದ ಮೇಲೆ ಸ್ವಿಸ್ ಆಹಾರ ದೈತ್ಯ ನೆಸ್ಲೆ ಸೋಮವಾರ ಲಾರೆಂಟ್ ಫ್ರೀಕ್ಸೆ ಅವರನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಯಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ವಜಾಗೊಳಿಸಿದೆ.

ತನಿಖೆ ನಂತರ ಫ್ರೀಕ್ಸೆ ಅವರನ್ನು ವಜಾಗೊಳಿಸಲಾಗಿದೆ ಎಂದು ನೆಸ್ಪ್ರೆಸೊ ಕಾಫಿ ಕ್ಯಾಪ್ಸುಲ್‌ಗಳು ಮತ್ತು ಕಿಟ್‌ಕ್ಯಾಟ್ ಚಾಕೊಲೇಟ್ ಬಾರ್‌ಗಳ ಹಿಂದಿನ ಬಹುರಾಷ್ಟ್ರೀಯ ಕಂಪನಿ ಹೇಳಿದೆ.

ಬಳಿಕ, ಕಂಪನಿಯ ನಿರ್ದೇಶಕರ ಮಂಡಳಿಯಲ್ಲಿರುವ ಇತರ ನಾಯಕರ ನಿರ್ಧಾರದ ಮೇರೆಗೆ ನೆಸ್ಲೆ ಒಡೆತನದ ನೆಸ್ಪ್ರೆಸೊ ಬ್ರ್ಯಾಂಡ್‌ನ ಮುಖ್ಯಸ್ಥರಾಗಿರುವ ಫಿಲಿಪ್ ನವ್ರಾಟಿಲ್ ಅವರನ್ನು ಸಿಇಒ ಆಗಿ ನೇಮಿಸಲಾಗಿದೆ.

'ತಮ್ಮ ಅಧೀನ ಅಧಿಕಾರಿಯೊಂದಿಗೆ ಪ್ರಣಯ ಸಂಬಂಧ ಹೊಂದಿದ ಆರೋಪದ ಮೇಲೆ ಲಾರೆಂಟ್ ಫ್ರೀಕ್ಸ್ ಅವರನ್ನು ಸಿಇಒ ಹುದ್ದೆಯಿಂದ ವಜಾಗೊಳಿಸಲಾಗಿದೆ. ಅಧ್ಯಕ್ಷ ಪಾಲ್ ಬಲ್ಕೆ ಮತ್ತು ಪ್ರಮುಖ ಸ್ವತಂತ್ರ ನಿರ್ದೇಶಕ ಪ್ಯಾಬ್ಲೊ ಇಸ್ಲಾ ಅವರ ಮೇಲ್ವಿಚಾರಣೆಯಲ್ಲಿ ಹೊರಗಿನ ವಕೀಲರ ಬೆಂಬಲದೊಂದಿಗೆ ತನಿಖೆಗೆ ಆದೇಶಿಸಲಾಗಿದೆ' ಎಂದು ಕಂಪನಿಯ ಹೇಳಿಕೆ ತಿಳಿಸಿದೆ.

'ಇದು ಅಗತ್ಯವಾದ ನಿರ್ಧಾರವಾಗಿತ್ತು. ನೆಸ್ಲೆಯ ಮೌಲ್ಯಗಳು ಮತ್ತು ಉತ್ತಮ ಆಡಳಿತವು ನಮ್ಮ ಕಂಪನಿಯ ಬಲವಾದ ಅಡಿಪಾಯವಾಗಿದೆ. ಲಾರೆಂಟ್ ಅವರ ವರ್ಷಗಳ ಸೇವೆಗಾಗಿ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ' ಎಂದು ಬಲ್ಕೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಂಪನಿಯ ಅನುಭವಿಯಾಗಿರುವ ಲಾರೆಂಟ್ ಫ್ರೀಕ್ಸೆ ಅವರು 1986 ರಲ್ಲಿ ಫ್ರಾನ್ಸ್‌ನಲ್ಲಿ ನೆಸ್ಲೆಗೆ ಸೇರಿದರು. ಅವರು 2014 ರವರೆಗೆ ಕಂಪನಿಯ ಯುರೋಪಿಯನ್ ಕಾರ್ಯಾಚರಣೆಗಳನ್ನು ನೋಡಿಕೊಳ್ಳುತ್ತಿದ್ದರು. 2008 ರಲ್ಲಿ ಪ್ರಾರಂಭವಾದ ಸಬ್‌ಪ್ರೈಮ್ ಮತ್ತು ಯೂರೋ ಬಿಕ್ಕಟ್ಟುಗಳ ಮೂಲಕ ಅವುಗಳನ್ನು ಮುನ್ನಡೆಸುತ್ತಿದ್ದರು.

ಸಿಇಒ ಆಗಿ ಬಡ್ತಿ ಪಡೆಯುವ ಮೊದಲು ಅವರು ಲ್ಯಾಟಿನ್ ಅಮೆರಿಕ ವಿಭಾಗದ ಮುಖ್ಯಸ್ಥರಾಗಿದ್ದರು. 2024ರ ಸೆಪ್ಟೆಂಬರ್‌ನಲ್ಲಿ ಅನಿರೀಕ್ಷಿತ ಬದಲಾವಣೆಯ ನಂತರ ಫ್ರೀಕ್ಸೆ ಸಿಇಒ ಆಗಿ ನೇಮಕಗೊಂಡರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com