
ದೇಶದ ಜಿಎಸ್ ಟಿ ತೆರಿಗೆ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡುತ್ತಿದ್ದಂತೆ ಇಂದು ಗುರುವಾರ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 888.96 ಪಾಯಿಂಟ್‌ಗಳ ಏರಿಕೆಯಾಗಿ 81,456.67 ಕ್ಕೆ ತಲುಪಿದೆ; ನಿಫ್ಟಿ 265.7 ಪಾಯಿಂಟ್‌ಗಳ ಏರಿಕೆಯಾಗಿ 24,980.75 ಕ್ಕೆ ತಲುಪಿದೆ.
56 ನೇ ಜಿಎಸ್‌ಟಿ ಕೌನ್ಸಿಲ್ ಸಭೆಯು ಜಿಎಸ್‌ಟಿ ದರಗಳನ್ನು ಶೇ. 5 ಮತ್ತು ಶೇ. 18 ರ ಎರಡು ಸ್ಲ್ಯಾಬ್‌ಗಳಿಗೆ ತರ್ಕಬದ್ಧಗೊಳಿಸಲು ನಿರ್ಧರಿಸಿದ ನಂತರ ಶೇ. 12 ಮತ್ತು ಶೇ. 28 ದರಗಳನ್ನು ವಿಲೀನಗೊಳಿಸಲಾಯಿತು.
Advertisement