
ಚೆನ್ನೈ: ಜಿಎಸ್‌ಟಿ ಕೌನ್ಸಿಲ್ ತೆರಿಗೆ ದರಗಳನ್ನು ಸರಳೀಕರಿಸಲು ಮತ್ತು ಅಗತ್ಯ ವಸ್ತುಗಳ ಮೇಲಿನ ಸುಂಕವನ್ನು ಕಡಿತಗೊಳಿಸಲು ತೆಗೆದುಕೊಂಡ ಕ್ರಮದಿಂದ ಹೂಡಿಕೆದಾರರಲ್ಲಿ ಉತ್ತೇಜನ ಕಂಡುಬಂದಿದ್ದು, ಭಾರತೀಯ ಷೇರು ಮಾರುಕಟ್ಟೆ ವಾರಾಂತ್ಯ ಇಂದು ಶುಕ್ರವಾರ ಮತ್ತಷ್ಟು ಚೇತರಿಕೆ ಕಂಡುಬಂದಿದೆ.
ಸೆನ್ಸೆಕ್ಸ್ ಸುಮಾರು 300 ಪಾಯಿಂಟ್ ಗಳ ಏರಿಕೆಯಿಂದ ಪ್ರಾರಂಭವಾಗಿ 81,000 ಅಂಕಗಳನ್ನು ಮುಟ್ಟಿತು, ನಿಫ್ಟಿ 24,800 ದಾಟಿತು. ಸಂಭಾವ್ಯ ಯುಎಸ್ ಫೆಡರಲ್ ರಿಸರ್ವ್ ದರ ಕಡಿತದ ಸುತ್ತಲಿನ ಆಶಾವಾದವು ಸಹ ಷೇರುಮಾರುಕಟ್ಟೆ ಏರಿಕೆಗೆ ಕಾರಣವಾಗಿದೆ.
ಇಂದು ಬೆಳಗ್ಗೆ ಲಾಭದಾಯಕವಾಗಿ ಆರಂಭವಾದ ವಹಿವಾಟಿನಲ್ಲಿ ನಂತರ ಲಾಭ ಕಡಿಮೆ ಮಾಡಿತು. ಬೆಳಗ್ಗೆ 10:40 ರ ಹೊತ್ತಿಗೆ, ಸೆನ್ಸೆಕ್ಸ್ 143 ಪಾಯಿಂಟ್‌ಗಳ ಕುಸಿತದೊಂದಿಗೆ 80,574 ಕ್ಕೆ ಇಳಿಯಿತು. ಕಳೆದ ಎರಡು ಗಂಟೆಗಳ ಅವಧಿಗಳ ತೀವ್ರ ಏರಿಕೆ ನಂತರ ವ್ಯಾಪಾರಿಗಳು ಲಾಭದಲ್ಲಿ ಇದ್ದು ನಿರೀಕ್ಷೆಯ ಮೇಲೆ ಷೇರು ಖರೀದಿಸಿದ್ದು ನಂತರ ಕುಸಿತ ಕಂಡುಬಂತು.
ಕರೆನ್ಸಿ ವಿಷಯದಲ್ಲಿ, ಈ ವಾರದ ಆರಂಭದಲ್ಲಿ ದಾಖಲೆಯ ಕನಿಷ್ಠ ಮಟ್ಟವನ್ನು ತಲುಪಿದ ನಂತರ ರೂಪಾಯಿ ಸ್ವಲ್ಪ ಕಡಿಮೆ ಮಟ್ಟದಲ್ಲಿ ವಹಿವಾಟು ನಡೆಸಿತು. ಯುಎಸ್ ಡಾಲರ್ ವಿರುದ್ಧ ಕರೆನ್ಸಿ 88.10 ರ ಸುಮಾರಿಗೆ ಪ್ರಾರಂಭವಾಯಿತು. ದಿನವಿಡೀ 88.05 ಮತ್ತು 88.20 ರ ನಡುವೆ ಇತ್ತು. ಡಾಲರ್ ಸೂಚ್ಯಂಕ ಮತ್ತು ಜಾಗತಿಕ ವಿತ್ತೀಯ ಸಡಿಲಿಕೆಯ ನಿರೀಕ್ಷೆಗಳು ಮತ್ತಷ್ಟು ದೌರ್ಬಲ್ಯವನ್ನು ಮಿತಿಗೊಳಿಸಿತು.
ಸೆಪ್ಟೆಂಬರ್ 1 ರಂದು ಸಾರ್ವಕಾಲಿಕ ಕನಿಷ್ಠ 88.33 ನ್ನು ತಲುಪಿದ ನಂತರ ರೂಪಾಯಿ ಒತ್ತಡದಲ್ಲಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ಮಧ್ಯಸ್ಥಿಕೆಗಳಿಂದ ಬೆಂಬಲಿತವಾದ ಅಲ್ಪಾವಧಿಯ ಸ್ಥಿರತೆಯನ್ನು ವ್ಯಾಪಾರಿಗಳು ನೋಡುತ್ತಿದ್ದರೂ, ಯುಎಸ್ ಸುಂಕಗಳು ಮುಂದುವರಿದರೆ ಅಥವಾ ಜಾಗತಿಕ ಮಾರುಕಟ್ಟೆಗಳು ಅಸ್ಥಿರವಾಗಿದ್ದರೆ ಅಪಾಯಗಳಿರುತ್ತವೆ ಎಂದು ಮಾರುಕಟ್ಟೆ ತಜ್ಞರು ಎಚ್ಚರಿಸಿದ್ದಾರೆ.
ಒಟ್ಟಾರೆಯಾಗಿ, ತೆರಿಗೆ ಸುಧಾರಣೆಗಳ ಬೆಂಬಲದೊಂದಿಗೆ ಭಾರತೀಯ ಷೇರುಗಳು ಸ್ಥಿತಿಸ್ಥಾಪಕತ್ವವನ್ನು ಉಳಿಸಿಕೊಂಡವು, ಭಾರತೀಯ ಕರೆನ್ಸಿ ಸ್ಥಿರೀಕರಣದ ಲಕ್ಷಣಗಳನ್ನು ತೋರಿಸಿದ್ದು, ದಾಖಲೆಯ ಕನಿಷ್ಠ ಮಟ್ಟಕ್ಕೆ ಹತ್ತಿರದಲ್ಲಿದೆ.
Advertisement