IT ವಲಯದಲ್ಲಿ ಉದ್ಯೋಗ ಕಡಿತ: ಮೈಕ್ರೋಸಾಫ್ಟ್ ಬೈಔಟ್‌; 8 ಸಾವಿರ ನೌಕರರಿಗೆ Meta ಗೇಟ್ ಪಾಸ್!

ಕಂಪನಿಯು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಹಾಗೂ ತನ್ನ ವ್ಯವಹಾರದ ಕೆಲವು ವಿಭಾಗಗಳಲ್ಲಿ ಹೊಸ ಹೂಡಿಕೆಗಳಿಗೆ ಅವಕಾಶ ಕಲ್ಪಿಸಲು ಈ ಕಡಿತಗಳನ್ನು ಮಾಡುತ್ತಿರುವುದಾಗಿ ಹೇಳಿದೆ.
Representational image
ಸಾಂದರ್ಭಿಕ ಚಿತ್ರ
Updated on

ಮೆಟಾ ಕಂಪನಿಯು ಸುಮಾರು 8,000 ಉದ್ಯೋಗಿಗಳನ್ನು, ಅಂದರೆ ತನ್ನ ಒಟ್ಟು ಕೆಲಸಗಾರರ ಸುಮಾರು 10 ಶೇಕಡಾ ಮಂದಿಯನ್ನು ನೌಕರಿಯಿಂದ ಕಡಿತಗೊಳಿಸುತ್ತಿರುವುದಾಗಿ ತಿಳಿಸಿದೆ. ಕೃತಕ ಬುದ್ಧಿಮತ್ತೆ (AI) ಮೂಲಸೌಕರ್ಯ ಮತ್ತು ಹೆಚ್ಚಿನ ವೇತನದ AI ಪರಿಣಿತರ ನೇಮಕಾತಿಗೆ ಖರ್ಚು ಹೆಚ್ಚಿಸುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಕಂಪನಿಯು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಹಾಗೂ ತನ್ನ ವ್ಯವಹಾರದ ಕೆಲವು ವಿಭಾಗಗಳಲ್ಲಿ ಹೊಸ ಹೂಡಿಕೆಗಳಿಗೆ ಅವಕಾಶ ಕಲ್ಪಿಸಲು ಈ ಕಡಿತಗಳನ್ನು ಮಾಡುತ್ತಿರುವುದಾಗಿ ಹೇಳಿದೆ. ಇದೇ ವೇಳೆ ಸುಮಾರು 6,000 ಹುದ್ದೆಗಳನ್ನು ಖಾಲಿಯೇ ಇಡಲಾಗುವುದಾಗಿ ವರದಿ ತಿಳಿಸಿದೆ.

ಇದೇ ದಿನ, ಮೈಕ್ರೋಸಾಫ್ಟ್ ತನ್ನ ಅಮೆರಿಕದ ಸಾವಿರಾರು ಉದ್ಯೋಗಿಗಳಿಗೆ ಸ್ವಯಂಪ್ರೇರಿತ ಬೈಔಟ್ (ಸ್ವಯಂ ನಿವೃತ್ತಿ/ಪ್ಯಾಕೇಜ್) ಯೋಜನೆಯನ್ನು ನೀಡುವುದಾಗಿ ತಿಳಿಸಿದೆ. ಮೇ ತಿಂಗಳ ಆರಂಭದಲ್ಲಿ ಸುಮಾರು 8,750 ಉದ್ಯೋಗಿಗಳಿಗೆ, ಅಂದರೆ ತನ್ನ ಅಮೆರಿಕದ ನೌಕರರ ಸುಮಾರು ಶೇಕಡಾ 7ರಷ್ಟು ನೌಕರರಿಗೆ ಈ ಆಫರ್ ನೀಡುವ ಯೋಜನೆ ಇದೆ ಎಂದು ತಿಳಿದುಬಂದಿದೆ.

Representational image
Oracle ಬೆನ್ನಲ್ಲೇ 3ನೇ ಅತಿ ದೊಡ್ಡ layoffs ಗೆ Amazon ಸಿದ್ಧತೆ: 14000 ಉದ್ಯೋಗಗಳಿಗೆ ಕತ್ತರಿ; 3 ವರ್ಷದಲ್ಲಿ 57 ಸಾವಿರ ನೌಕರಿ ಕಡಿತ!

ಮೆಟಾ ಮತ್ತು ಓರಾಕಲ್ ಮುಂತಾದ ಕಂಪನಿಗಳಲ್ಲಿ ನಡೆಯುತ್ತಿರುವ ದಿಢೀರ್ ಉದ್ಯೋಗ ಕಡಿತಗಳಿಗೆ ಪರ್ಯಾಯವಾಗಿ ಇದನ್ನು ಕಾಣಲಾಗುತ್ತಿದೆಯಾದರೂ, ಇದರ ಹಿಂದಿರುವ ಉದ್ದೇಶವೂ ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದ ದೊಡ್ಡ ಮಟ್ಟದ ಹೂಡಿಕೆಗಳೇ ಆಗಿವೆ.

ಮೆಟಾ ಈಗಾಗಲೇ ಹೂಡಿಕೆದಾರರಿಗೆ 2026ರ ವೆಚ್ಚಗಳು ಗಣನೀಯವಾಗಿ ಹೆಚ್ಚಾಗಲಿದ್ದು, 162 ಬಿಲಿಯನ್ ಡಾಲರ್ ನಿಂದ 169 ಬಿಲಿಯನ್ ಡಾಲರ್ ವರೆಗೆ ಏರಿಕೆಯಾಗಬಹುದು ಎಂದು ಎಚ್ಚರಿಸಿದೆ. ಇದು ಮೂಲಸೌಕರ್ಯ ವೆಚ್ಚಗಳು ಮತ್ತು ವಿಶೇಷವಾಗಿ ಹೆಚ್ಚಿನ ವೇತನದ ಎಐ ಪರಿಣಿತರ ವೇತನಗಳ ಕಾರಣವಾಗಿದೆ.

ವೆಡ್ಬುಷ್ ವಿಶ್ಲೇಷಕ ಡ್ಯಾನ್ ಐವ್ಸ್ ಅವರು ಮೆಟಾದ ಈ ಕ್ರಮವನ್ನು ಸ್ವಾಗತಿಸಿದ್ದಾರೆ. ಅವರ ಪ್ರಕಾರ, AI ಉಪಕರಣಗಳನ್ನು ಬಳಸಿ ಮೊದಲು ದೊಡ್ಡ ತಂಡಗಳು ಮಾಡುತ್ತಿದ್ದ ಕೆಲಸಗಳನ್ನು ಸ್ವಯಂಚಾಲಿತಗೊಳಿಸುವ ಮೂಲಕ ಕಾರ್ಯಾಚರಣೆಗಳನ್ನು ಸರಳಗೊಳಿಸಿ ವೆಚ್ಚಗಳನ್ನು ಕಡಿಮೆ ಮಾಡುವ ಉದ್ದೇಶ ಇದಾಗಿದೆ.

ವಾಷಿಂಗ್ಟನ್‌ನ ರೆಡ್‌ಮಂಡ್‌ನಲ್ಲಿ ಮೈಕ್ರೋಸಾಫ್ಟ್ ಸಂಸ್ಥೆ, ಕ್ಲೌಡ್ ಕಂಪ್ಯೂಟಿಂಗ್ ಸೇವೆಗಳು, AI ವ್ಯವಸ್ಥೆಗಳು ಮತ್ತು ಕಾಪಿಲಾಟ್ ಸೇರಿದಂತೆ ತನ್ನ ಉತ್ಪಾದಕ ಸಾಧನಗಳಿಗೆ ಶಕ್ತಿನೀಡುವ ಜಾಗತಿಕ ಡೇಟಾ ಸೆಂಟರ್‌ಗಳ ವಿಸ್ತರಣೆಗೆ ಈಗಾಗಲೇ ಬಿಲಿಯನ್‌ ಡಾಲರ್‌ಗಳಷ್ಟು ಹೂಡಿಕೆ ಮಾಡಿದೆ.

ಮೈಕ್ರೋಸಾಫ್ಟ್‌ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಏಮಿ ಕೋಲ್ಮನ್ ಅವರ ಮೆಮೊವನ್ನು ಉಲ್ಲೇಖಿಸಿ, CNBC ವರದಿ ಮಾಡಿದಂತೆ, “ಈ ಯೋಜನೆಯ ಮೂಲಕ ಅರ್ಹ ಉದ್ಯೋಗಿಗಳಿಗೆ ತಮ್ಮದೇ ಷರತ್ತುಗಳಲ್ಲಿ ಮುಂದಿನ ಹೆಜ್ಜೆ ಇಡುವ ಆಯ್ಕೆಯನ್ನು, ಕಂಪನಿಯ ಉದಾರ ಬೆಂಬಲದೊಂದಿಗೆ ನೀಡುವುದು ನಮ್ಮ ಆಶಯವಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com