

ನವದೆಹಲಿ: ಏರ್ ಇಂಡಿಯಾ ಎಕ್ಸ್‌ಪ್ರೆಸ್ ಗುರುವಾರ ದೋಹಾ ಮತ್ತು ಬಹ್ರೇನ್‌ಗೆ ವಿಮಾನ ಸೇವೆಗಳನ್ನು ಪುನರಾರಂಭಿಸಿದರೆ, ಇಂಡಿಗೋ ಶುಕ್ರವಾರದಿಂದ ತನ್ನ ದೋಹಾ ಕಾರ್ಯಾಚರಣೆಗಳನ್ನು ಪುನರಾರಂಭಿಸಲಿದೆ.
ಇದು ಇತ್ತೀಚಿನ ಅಡಚಣೆಗಳ ನಂತರ ಭಾರತ ಮತ್ತು ಮಧ್ಯಪ್ರಾಚ್ಯದ ನಡುವಿನ ವಾಯು ಸಂಪರ್ಕದಲ್ಲಿ ಕ್ರಮೇಣ ಸಾಮಾನ್ಯ ಸ್ಥಿತಿಗೆ ಮರಳುವ ಸೂಚನೆಯಾಗಿದೆ. ಫೆಬ್ರವರಿ 28 ರಂದು ಸಂಘರ್ಷ ಪ್ರಾರಂಭವಾದ ನಂತರ ಪಶ್ಚಿಮ ಏಷ್ಯಾದಲ್ಲಿ ವಿಮಾನ ಕಾರ್ಯಾಚರಣೆ ಅಸ್ತವ್ಯಸ್ತಗೊಂಡಿತ್ತು.
ಏರ್ ಇಂಡಿಯಾ ಎಕ್ಸ್‌ಪ್ರೆಸ್ ಗುರುವಾರ ಕತಾರ್ ಮತ್ತು ಬಹ್ರೇನ್‌ಗೆ ತನ್ನ ಕಾರ್ಯಾಚರಣೆಯನ್ನು ಪುನರಾರಂಭಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಕೊಚ್ಚಿ ಮತ್ತು ಕೋಝಿಕ್ಕೋಡ್‌ನಿಂದ ದೋಹಾಗೆ ಹಾಗೂ ಕಣ್ಣೂರು ಮತ್ತು ಕೋಝಿಕ್ಕೋಡ್‌ನಿಂದ ಬಹ್ರೇನ್‌ಗೆ ವಿಮಾನಗಳು ಪುನರಾರಂಭಗೊಂಡಿವೆ. ಯುಎಇ, ಓಮನ್ ಮತ್ತು ಸೌದಿ ಅರೇಬಿಯಾಕ್ಕೆ ಹೆಚ್ಚುವರಿ ವಿಮಾನಗಳನ್ನು ನಿರ್ವಹಿಸುತ್ತಿರುವುದಾಗಿ ವಿಮಾನಯಾನ ಸಂಸ್ಥೆ ತಿಳಿಸಿದೆ.
ಅಮೃತಸರ, ಬೆಂಗಳೂರು, ದೆಹಲಿ, ಹೈದರಾಬಾದ್, ಜೈಪುರ, ಕೊಚ್ಚಿ, ಕೋಝಿಕ್ಕೋಡ್, ಕಣ್ಣೂರು, ಲಕ್ನೋ, ಮಂಗಳೂರು, ಮುಂಬೈ, ತಿರುಚಿರಾಪಳ್ಳಿ, ತಿರುವನಂತಪುರಂ ಮತ್ತು ವಾರಣಾಸಿ ಸೇರಿದಂತೆ ಭಾರತದ ಪ್ರಮುಖ ಮಹಾನಗರಗಳು ಮತ್ತು ಪ್ರಾದೇಶಿಕ ಕೇಂದ್ರಗಳಿಂದ ವಿಮಾನಗಳು ಪುನರಾರಂಭಗೊಂಡಿವೆ" ಎಂದು ಹೇಳಿಕೆ ತಿಳಿಸಿದೆ.
ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಕಣ್ಣೂರು, ಕೊಚ್ಚಿ ಮತ್ತು ಮುಂಬೈ ಸೇರಿದಂತೆ ಏಳು ನಗರಗಳಿಂದ ದೋಹಾಗೆ 60 ಕ್ಕೂ ಹೆಚ್ಚು ವಾರದ ವಿಮಾನಗಳ ನಿಯಮಿತ ವೇಳಾಪಟ್ಟಿಯನ್ನು ಶುಕ್ರವಾರ (ಮೇ 1) ರಿಂದ ಪುನರ್ ಆರಂಭಿಸುವುದಾಗಿ ಇಂಡಿಗೋ ತಿಳಿಸಿದೆ.
ದೋಹಾ ಭಾರತವನ್ನು ಪ್ರಮುಖ ಅಂತಾರಾಷ್ಟ್ರೀಯ ಮಾರುಕಟ್ಟೆಗಳೊಂದಿಗೆ ಸಂಪರ್ಕಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಇಂಡಿಗೋದ ದೋಹಾಕ್ಕೆ ತೆರಳುವ ಗ್ರಾಹಕರಿಗೆ ಕೈಗೆಟುಕುವ ಮತ್ತು ಅನುಕೂಲಕರ ಪ್ರಯಾಣ ಆಯ್ಕೆಗಳನ್ನು ನೀಡುತ್ತವೆ ಎಂದು ವಿಮಾನಯಾನ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ಕತಾರ್‌ನಿಂದ ಭಾರತದ ವಿವಿಧ ನಗರಗಳಿಗೆ ಪ್ರಯಾಣಿಸುವ ಪ್ರಯಾಣಿಕರು ಸಹ ಪ್ರಯೋಜನ ಪಡೆಯುತ್ತಾರೆ ಎಂದು ಹೇಳಿದರು.
Advertisement