ಇವು ಚಿನ್ನಕ್ಕಿಂತಲೂ Costly; 1 ಗ್ರಾಂ ಬೆಲೆ ಕೋಟಿ ಕೋಟಿ! ಯಾವುವು ಗೊತ್ತಾ?

ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಆದ್ರೆ, ನಿಮಗೆ ಗೊತ್ತಾ, ಜಗತ್ತಿನಲ್ಲಿ ಚಿನ್ನಕ್ಕಿಂತಲೂ ಅತ್ಯಂತ ಅಪರೂಪದ, ಅತಿ ಹೆಚ್ಚು ಬೇಡಿಕೆ ಇರುವ ಮತ್ತು ಚಿನ್ನಕ್ಕಿಂತಲೂ ಹಲವು ಪಟ್ಟು ಹೆಚ್ಚು ಬೆಲೆಬಾಳುವ ಲೋಹಗಳಿವೆ ಎಂದು! ಇಲ್ಲಿದೆ ಆ ಕುರಿತ ವರದಿ:
Gold Alternatives
ಇವು ಚಿನ್ನಕ್ಕಿಂತಲೂ CostlyOnline Desk

Gold Alternatives: ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಈ ಕಾರಣದಿಂದ ಜನರು ಅದರಲ್ಲೂ ಮಧ್ಯಮ ವರ್ಗದ ಜನರಿಗೆ ಬಂಗಾರ ಖರೀದಿ ಅನ್ನೋದು ಹಗಲು ಗನಸಿನ ತರಹ ಆಗಿದೆ ಎನ್ನಬಹುದು.! ಆದ್ರೆ, ನಿಮಗೆ ಗೊತ್ತಾ, ಜಗತ್ತಿನಲ್ಲಿ ಚಿನ್ನಕ್ಕಿಂತಲೂ ಅತ್ಯಂತ ಅಪರೂಪದ, ಅತಿ ಹೆಚ್ಚು ಬೇಡಿಕೆ ಇರುವ ಮತ್ತು ಚಿನ್ನಕ್ಕಿಂತಲೂ ಹಲವು ಪಟ್ಟು ಹೆಚ್ಚು ಬೆಲೆಬಾಳುವ ಲೋಹಗಳಿವೆ ಎಂದು! ಇಲ್ಲಿದೆ ಆ ಕುರಿತ ವರದಿ:

1. ಕ್ಯಾಲಿಫೋರ್ನಿಯಮ್

Californium
ಕ್ಯಾಲಿಫೋರ್ನಿಯಮ್Online Desk

ಇದು ಜಗತ್ತಿನಲ್ಲೇ ಅತ್ಯಂತ ದುಬಾರಿ ಲೋಹ ಎಂದು ಗುರುತಿಸಲ್ಪಟ್ಟಿದೆ. ಇದೊಂದು ಕೃತಕವಾಗಿ ತಯಾರಿಸಲಾಗುವ ವಿಕಿರಣಶೀಲ ಲೋಹವಾಗಿದ್ದು, ಜಗತ್ತಿನಲ್ಲಿ ಕೇವಲ ಅಮೇರಿಕಾ ಮತ್ತು ರಷ್ಯಾದ ಆಯ್ದ ನ್ಯೂಕ್ಲಿಯರ್ ರಿಯಾಕ್ಟರ್‌ಗಳಲ್ಲಿ ಮಾತ್ರ ಇದನ್ನು ಅತ್ಯಂತ ಸಣ್ಣ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತದೆ. ಇದನ್ನು ಗರ್ಭಕಂಠದ ಕ್ಯಾನ್ಸರ್ ಚಿಕಿತ್ಸೆಯಲ್ಲಿ, ಭೂಮಿಯ ಆಳದಲ್ಲಿ ತೈಲ ಮತ್ತು ನೀರಿನ ಸ್ತರಗಳನ್ನು ಪತ್ತೆಹಚ್ಚಲು ಹಾಗೂ ಪರಮಾಣು ರಿಯಾಕ್ಟರ್‌ಗಳನ್ನು ಸ್ಟಾರ್ಟ್ ಮಾಡಲು ಇದನ್ನು ಬಳಸಲಾಗುತ್ತದೆ. ಇನ್ನು ಇದರ ಅಂದಾಜು ಬೆಲೆ: 1 ಗ್ರಾಂಗೆ ಸುಮಾರು $27 ಮಿಲಿಯನ್ ಡಾಲರ್ ಅಂದರೆ ಅಂದಾಜು 225 ಕೋಟಿ ರೂಪಾಯಿಗಳು!

2. ಆಂಟಿಮಾಟರ್

Antimatter
ಆಂಟಿಮಾಟರ್Online Desk

ಇದು ವಿಶ್ವದ ಅತ್ಯಂತ ದುಬಾರಿ ಹಾಗೂ ಸೈದ್ಧಾಂತಿಕವಾಗಿ ಅತ್ಯಂತ ಶಕ್ತಿಶಾಲಿ ವಸ್ತುವಾಗಿದ್ದು, ಭವಿಷ್ಯದಲ್ಲಿ ಬಾಹ್ಯಾಕಾಶ ನೌಕೆಗಳ ಇಂಧನವಾಗಿ ಬಳಸಲು ಸಂಶೋಧನೆ ನಡೆಯುತ್ತಿದೆ. ಇದನ್ನು ಪ್ರಯೋಗಾಲಯದಲ್ಲಿ ಅತ್ಯಂತ ಕಷ್ಟಪಟ್ಟು ಅಲ್ಪ ಪ್ರಮಾಣದಲ್ಲಿ ಮಾತ್ರ ಸೃಷ್ಟಿಸಲಾಗುತ್ತದೆ. ಅದರಂತೆ, ಇದರ 1 ಗ್ರಾಂ ಬೆಲೆ ಅಂದಾಜು ರೂ. 50 ರಿಂದ 62 ಲಕ್ಷ ಕೋಟಿಗಳಿಗೂ ಅಧಿಕ ($62.5 trillion) ಎನ್ನಲಾಗಿದೆ.

Gold Alternatives
ಮೊಟ್ಟೆಗೆ 20 ಲಕ್ಷ, ಹಣ್ಣಿಗೆ 35 ಲಕ್ಷ ರೂ; ಇವು ವಿಶ್ವದ ಅತ್ಯಂತ ದುಬಾರಿ ಆಹಾರಗಳು!

3. ಟ್ರಿಟಿಯಮ್

Tritium
ಟ್ರಿಟಿಯಮ್Online Desk

ಇದು ಹೈಡ್ರೋಜನ್‌ನ ಅತ್ಯಂತ ಅಪರೂಪದ ವಿಕಿರಣಶೀಲ ಐಸೋಟೋಪ್ ಆಗಿದ್ದು, ಲೋಹದ ಸಂಯುಕ್ತ ರೂಪಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಯಾವುದೇ ವಿದ್ಯುತ್ ಅಥವಾ ಬ್ಯಾಟರಿ ಸಹಾಯವಿಲ್ಲದೆ ಸತತ 12 ರಿಂದ 15 ವರ್ಷಗಳ ಕಾಲ ಸ್ವಯಂ ಆಗಿ ಬೆಳಕನ್ನು ಹೊರಸೂಸುವ ಗುಣ ಹೊಂದಿರುವ ಇದನ್ನು ಐಷಾರಾಮಿ ವಾಚ್ ಡಯಲ್ ಪ್ರಕಾಶಮಾನವಾಗಿ ಕಾಣಲು ಮತ್ತು ರಕ್ಷಣಾ ಪಡೆಗಳ ಗನ್‌ ಸೈಟ್‌ಗಳಲ್ಲಿ ಇದನ್ನು ಬಳಸಲಾಗುತ್ತದೆ. ಇನ್ನು ಇದರ ಅಂದಾಜು ಬೆಲೆ 1 ಗ್ರಾಂಗೆ ಸುಮಾರು $30,000 USD ಅಂದ್ರೆ ಸುಮಾರು 25 ಲಕ್ಷ ರೂಪಾಯಿ.

4. ರೋಡಿಯಮ್

Rhodium
ರೋಡಿಯಮ್Online Desk

ಜಗತ್ತಿನ ಅತ್ಯಂತ ದುಬಾರಿ ಮತ್ತು ಅಪರೂಪದ ಉದಾತ್ತ ಲೋಹಗಳಲ್ಲಿ ರೋಡಿಯಮ್ ಒಂದಾಗಿದೆ. ಇದನ್ನು, ಪ್ರಮುಖವಾಗಿ ವಾಹನಗಳ ಹೊಗೆಯಿಂದ ಹೊರಬರುವ ಮಾಲಿನ್ಯವನ್ನು ನಿಯಂತ್ರಿಸುವ ಕ್ಯಾಟಲಿಟಿಕ್ ಕನ್ವರ್ಟರ್ ಗಳಲ್ಲಿ ಹಾಗೂ ಚಿನ್ನದ ಒಡವೆಗಳಿಗೆ ಬಿಳಿ ಹೊಳಪು ನೀಡಲು ಬಳಸಲಾಗುತ್ತದೆ. ಇನ್ನು ಇದರ ಬೆಲೆಯು ಪ್ರತಿ ಗ್ರಾಂಗೆ 28,290 ರೂಪಾಯಿ ಇದೆ.

Gold Alternatives
ರಾತ್ರಿ ಬರೀ 40 ನಿಮಿಷ ಮಾತ್ರ! 23 ಗಂಟೆ ಮುಳುಗೋದೇ ಇಲ್ಲ ಸೂರ್ಯ; ಇದು ಯಾವ ದೇಶ ಗೊತ್ತಾ?

5. ಇರಿಡಿಯಮ್

Iridium
ಇರಿಡಿಯಮ್Online Desk

ಅತ್ಯಂತ ಹೆಚ್ಚಿನ ಸಾಂದ್ರತೆ ಮತ್ತು ಗಡಸುತನ ಹೊಂದಿರುವ ಈ ಲೋಹವು ತುಕ್ಕು ಹಿಡಿಯುವಿಕೆಗೆ ಅತ್ಯಧಿಕ ನಿರೋಧಕ ಶಕ್ತಿಯನ್ನು ಹೊಂದಿದೆ. ಹಾಗಾಗಿಯೇ, ಇದು ಎಲೆಕ್ಟ್ರಾನಿಕ್ಸ್, ಸ್ಪಾರ್ಕ್ ಪ್ಲಗ್‌ಗಳು, ಬಾಹ್ಯಾಕಾಶ ನೌಕೆಗಳ ಬಿಡಿಭಾಗಗಳು ಹಾಗೂ ವೈದ್ಯಕೀಯ ಉಪಕರಣಗಳ ತಯಾರಿಕೆಯಲ್ಲಿ ಅತಿ ಅವಶ್ಯಕವಾಗಿದೆ. ಇನ್ನು, ಭೂಮಿಯ ಮೇಲ್ಮೈನಲ್ಲಿ ಇದು ಅತ್ಯಂತ ವಿರಳವಾಗಿ ದೊರೆಯುವುದರಿಂದ ಇದರ ಮೌಲ್ಯ ನಿರಂತರವಾಗಿ ಹೆಚ್ಚುತ್ತಿರುತ್ತದೆ. ಹಾಗಾಗಿಯೇ, ಇದರ ಬೆಲೆ ಪ್ರತಿ ಗ್ರಾಂಗೆ ಸುಮಾರು ರೂ. 24,000.

6. ಪ್ಲಾಟಿನಮ್

Platinum
ಪ್ಲಾಟಿನಮ್Online Desk

ಇದನ್ನು ಬಿಳಿ ಚಿನ್ನ ಎಂದೇ ಕರೆಯಲಾಗುತ್ತದೆ. ಇದು ಚಿನ್ನಕ್ಕಿಂತ ಸುಮಾರು 30 ಪಟ್ಟು ಹೆಚ್ಚು ಅಪರೂಪದ ಲೋಹವಾಗಿದೆ. ಜೊತೆಗೆ ಇದು ಅತ್ಯಂತ ನಮ್ಯವಾಗಿದ್ದು ಗಾಳಿಯಲ್ಲಿ ಎಂದಿಗೂ ತನ್ನ ಹೊಳಪನ್ನು ಕಳೆದುಕೊಳ್ಳುವುದಿಲ್ಲ ಅಥವಾ ಕಪ್ಪಾಗುವುದಿಲ್ಲ. ಹಾಗಾಗಿಯೇ, ಇದನ್ನು ಐಷಾರಾಮಿ ಆಭರಣಗಳ ತಯಾರಿಕೆಯಲ್ಲಿ, ಹಲ್ಲಿನ ಚಿಕಿತ್ಸೆಯ ಉಪಕರಣಗಳಲ್ಲಿ ಮತ್ತು ಕ್ಯಾನ್ಸರ್ ವಿರೋಧಿ ಔಷಧಿಗಳ ತಯಾರಿಕೆಯಲ್ಲಿ ಬಳಕೆಯಾಗುತ್ತದೆ. ಇನ್ನು ಇದರ ಅಂದಾಜು ಬೆಲೆ: 1 ಗ್ರಾಂಗೆ ಸುಮಾರು 6,046 ರೂಪಾಯಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com