ಪರ್ಸನಲ್ ಲೋನ್, ಮೈಕ್ರೋಫೈನಾನ್ಸ್ ಬಡ್ಡಿದರಕ್ಕೆ ಹೊಸ ಮಿತಿ: RBI ಮಹತ್ವದ ಆದೇಶ!

ಸಣ್ಣ ಸಾಲಗಳ ಬೇಕಾಬಿಟ್ಟಿ ಬಡ್ಡಿಗೆ ಆರ್‌ಬಿಐ ಬ್ರೇಕ್: ಹೌದು, ಹಣಕಾಸಿನ ಮುಗ್ಗಟ್ಟು ಎದುರಾದಾಗ ಹೆಚ್ಚಿನ ಬಡ್ಡಿಗೆ ಸಾಲ ಕೊಟ್ಟು ಸುಲಿಗೆ ಮಾಡುವ ಸಂಸ್ಥೆಗಳ ಬೇಕಾಬಿಟ್ಟಿ ನಿಯಮಗಳಿಗೆ ಕಟ್ಟುನಿಟ್ಟಿನ ಕಡಿವಾಣ ಹಾಕಲು RBI ಮುಂದಾಗಿದೆ. ಆ ಕುರಿತ ವರದಿ ಇಲ್ಲಿದೆ:
RBI
ಆರ್ ಬಿಐonline desk
Updated on

ಮುಂಬೈ: ತುರ್ತು ಸಂದರ್ಭದಲ್ಲಿ ಹಣದ ಅವಶ್ಯಕತೆ ಎದುರಾದಾಗ ಬೇರೆ ಗತಿ ಇಲ್ಲದೆ ಹೆಚ್ಚಿನ ಬಡ್ಡಿಗೆ ಸಾಲ ಪಡೆಯುತ್ತೇವೆ. ಇದನ್ನೇ ನೆಪ ಮಾಡಿಕೊಂಡು ಸಾಲ ನೀಡುವವರು ಕೂಡ ಬೇಕಾಬಿಟ್ಟಿ ಬಡ್ಡಿ ಹಾಕುತ್ತಾರೆ. ಆದ್ರೆ, ಈ ಯದ್ವಾತದ್ವಾಗೆ ಲಗಾಮು ಹಾಕಲು ಮುಂದಾಗಿರುವ ಭಾರತೀಯ ರಿಸರ್ವ್ ಬ್ಯಾಂಕ್ ಮಹತ್ವದ ಕ್ರಮ ಕೈಗೊಂಡಿದೆ. ಆ ಕುರಿತ ವರದಿ ಇಲ್ಲಿದೆ:

RBI ಸಣ್ಣ ಸಾಲಗಳು ಮತ್ತು ಮೈಕ್ರೋಫೈನಾನ್ಸ್ ಸಾಲಗಳ ಮೇಲೆ ಬ್ಯಾಂಕುಗಳು ಹಾಗೂ NBFCಗಳು (ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು) ಮನಬಂದಂತೆ ಹೆಚ್ಚಿನ ಬಡ್ಡಿ ಮತ್ತು ಗುಪ್ತ ಶುಲ್ಕಗಳನ್ನು ವಿಧಿಸುವುದಕ್ಕೆ ಬ್ರೇಕ್ ಹಾಕಲು ಹೊಸ ಕರಡು ನಿಯಮಾವಳಿಗಳನ್ನು ಪ್ರಸ್ತಾಪಿಸಿದ್ದು, ಗ್ರಾಹಕರನ್ನು ಅತಿಯಾದ ಬಡ್ಡಿ ಹೊರೆಯಿಂದ ರಕ್ಷಿಸಲು ಮತ್ತು ಸಾಲ ನೀಡಿಕೆಯಲ್ಲಿ ಪಾರದರ್ಶಕತೆ ತರಲು ಆರ್‌ಬಿಐ ಈ ಮಹತ್ವದ ಕ್ರಮ ಕೈಗೊಂಡಿದೆ. ಇನ್ನು ಹೊಸ ಪ್ರಸ್ತಾಪದ ಪ್ರಕಾರ,

  • ಸಣ್ಣ ಸಾಲಗಳ ಬಡ್ಡಿಗೆ ಗರಿಷ್ಠ ಮಿತಿ:

    • ₹50,000 ವರೆಗಿನ ಸಣ್ಣ ಮೌಲ್ಯದ ವೈಯಕ್ತಿಕ ಸಾಲಗಳು ಮತ್ತು ಮೈಕ್ರೋಫೈನಾನ್ಸ್ ಸಾಲಗಳಿಗೆ ಆರ್‌ಬಿಐ ವಾರ್ಷಿಕ ಶೇಕಡಾವಾರು ದರದ ಮೇಲೆ ಸ್ಪಷ್ಟವಾದ ಗರಿಷ್ಠ ಮಿತಿ ವಿಧಿಸಲು ಮುಂದಾಗಿದೆ.

    • ಈ APR ಒಳಗೆ ಬಡ್ಡಿ ದರ ಮಾತ್ರವಲ್ಲದೆ, ಪ್ರೊಸೆಸಿಂಗ್ ಫೀಸ್ ಮತ್ತು ಇತರ ಎಲ್ಲಾ ಗುಪ್ತ ಶುಲ್ಕಗಳು ಒಳಗೊಂಡಿರುತ್ತವೆ. ಇದರಿಂದ ಬ್ಯಾಂಕುಗಳು ಗ್ರಾಹಕರಿಂದ ಅನಗತ್ಯವಾಗಿ ಹೆಚ್ಚುವರಿ ಹಣ ವಸೂಲಿ ಮಾಡಲು ಸಾಧ್ಯವಾಗುವುದಿಲ್ಲ.

  • ಬಡ್ಡಿ ದರ ಬದಲಾವಣೆಗೆ 3 ವರ್ಷಗಳ ನಿರ್ಬಂಧ

    • ಸಾಲದ ಮೂಲ ದರದ ಮೇಲೆ ವಿಧಿಸುವ ಹೆಚ್ಚುವರಿ ಲಾಭಾಂಶ ಅಥವಾ ರಿಸ್ಕ್ ಪ್ರೀಮಿಯಂ ಅನ್ನು ಬ್ಯಾಂಕುಗಳು ಪದೇ ಪದೇ ಬದಲಾಯಿಸುವಂತಿಲ್ಲ.

    • ಒಮ್ಮೆ ಸಾಲ ನೀಡಿದ ಬಳಿಕ, ಈ ಸ್ಪ್ರೆಡ್ ದರವನ್ನು ಕನಿಷ್ಠ 3 ವರ್ಷಗಳವರೆಗೆ ಬದಲಾಯಿಸದಂತೆ ಫ್ರೀಜ್ ಮಾಡಲು ಆರ್‌ಬಿಐ ಪ್ರಸ್ತಾಪಿಸಿದೆ.

  • ಬಾಹ್ಯ ಸೂಚ್ಯಂಕಕ್ಕೆ ಜೋಡಣೆ ಕಡ್ಡಾಯ

    • ಬ್ಯಾಂಕುಗಳು ನೀಡುವ ಎಲ್ಲಾ ಫ್ಲೋಟಿಂಗ್ ದರದ (ಬದಲಾಗುವ ಬಡ್ಡಿ) ವೈಯಕ್ತಿಕ ಸಾಲಗಳು ಮತ್ತು MSME (ಸಣ್ಣ ಕೈಗಾರಿಕೆ) ಸಾಲಗಳನ್ನು ಕಡ್ಡಾಯವಾಗಿ ಬಾಹ್ಯ ಸೂಚ್ಯಂಕಕ್ಕೆ (ಉದಾಹರಣೆಗೆ ಆರ್‌ಬಿಐನ ರೆಪೋ ದರಕ್ಕೆ) ಜೋಡಿಸಬೇಕಾಗುತ್ತದೆ.

    • ಇದರ ಜೊತೆಗೆ ಪ್ರತಿ ತಿಂಗಳ ಮೊದಲ ದಿನವೇ ಸಾಲದ ದರಗಳನ್ನು ಬ್ಯಾಂಕುಗಳು ಬಹಿರಂಗಪಡಿಸಬೇಕು.

  • ಹಳೆಯ ಸಾಲಗಾರರಿಗೂ ಅನ್ವಯ

    • ಪ್ರಸ್ತುತ ಚಾಲ್ತಿಯಲ್ಲಿರುವ ಎಲ್ಲಾ ಹಳೆಯ ಸಾಲಗಳನ್ನು ಏಪ್ರಿಲ್ 1, 2029 ರೊಳಗೆ ಈ ಹೊಸ ನಿಯಮಾವಳಿ ಚೌಕಟ್ಟಿಗೆ ಬದಲಾಯಿಸಬೇಕು ಎಂದು ಆರ್‌ಬಿಐ ಗಡುವು ನೀಡಿದೆ.

    • ಹೀಗೆ ಬದಲಾಯಿಸುವಾಗ ಗ್ರಾಹಕರ ಸಮ್ಮತಿ ಪಡೆಯಬೇಕು ಮತ್ತು ಅವರ ಬಡ್ಡಿ ದರವು ಮೊದಲಿದ್ದಕ್ಕಿಂತ ಹೆಚ್ಚಾಗದಂತೆ ಬ್ಯಾಂಕುಗಳು ನೋಡಿಕೊಳ್ಳಬೇಕು. ಈ ವರ್ಗಾವಣೆಗೆ ಯಾವುದೇ ಶುಲ್ಕ ವಿಧಿಸುವಂತಿಲ್ಲ.

RBI
Credit Score ಕಡಿಮೆಯಿದ್ರೂ ಈ ರೀತಿ ಬ್ಯಾಂಕಿನಿಂದ ಸಾಲ ಪಡೆಯಬಹುದು! ಹೇಗೆ ಗೊತ್ತಾ?

ಸಣ್ಣ ರೈತರಿಗೆ ರಿಲೀಫ್:

ಸಣ್ಣ ರೈತರು ಪಡೆಯುವ ಅಲ್ಪಾವಧಿ ಕೃಷಿ ಸಾಲಗಳ ಮೇಲೆ ಬ್ಯಾಂಕುಗಳು ವಿಧಿಸುವ ಒಟ್ಟು ಬಡ್ಡಿ, ದಂಡ ಮತ್ತು ಇತರ ಶುಲ್ಕಗಳ ಮೇಲೆಯೂ ಆರ್‌ಬಿಐ ಕಣ್ಣಿಟ್ಟಿದ್ದು, ಗ್ರಾಹಕ ಸ್ನೇಹಿ ನಿಯಮಗಳನ್ನು ಜಾರಿಗೆ ತರುತ್ತಿದೆ.

ಒಟ್ಟಾರೆಯಾಗಿ, ಆರ್‌ಬಿಐನ ಈ ಹೊಸ ಏಕರೂಪದ ನಿಯಮಾವಳಿಗಳು ಜಾರಿಗೆ ಬಂದರೆ, ಆಪ್ ಆಧಾರಿತ ಸಾಲಗಳು ಮತ್ತು ಸಣ್ಣ ಸಾಲಗಳ ಹೆಸರಿನಲ್ಲಿ ಶೇ. 30 ರಿಂದ 36 ರಷ್ಟು ಭಾರಿ ಬಡ್ಡಿ ಹಾಗೂ ಪ್ರೊಸೆಸಿಂಗ್ ಶುಲ್ಕ ವಸೂಲಿ ಮಾಡುವ ಸಂಸ್ಥೆಗಳ ದೂಡಿಕೆಗೆ ದೊಡ್ಡ ಬ್ರೇಕ್ ಬೀಳಲಿದೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com