UPI ಪೇಮೆಂಟ್ ಫೇಲ್ ಆಗಿ ಹಣ ಕಟ್ ಆಯ್ತಾ? ಚಿಂತೆ ಬಿಡಿ, ಹಣ ವಾಪಸ್ ಪಡೆಯೋ ಸುಲಭ ದಾರಿ ಇಲ್ಲಿದೆ!

ಯುಪಿಐ ಮೂಲಕ ಹಣ ಕಳುಹಿಸುವಾಗ ಹಲವು ಬಾರಿ ತಾಂತ್ರಿಕ ದೋಷದಿಂದಾಗಿ ಪೇಮೆಂಟ್ ಫೇಲ್ ಆಗುತ್ತದೆ. ಆದರೆ ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಂಡಾಗ ಎಲ್ಲರಿಗೂ ಗಾಬರಿಯಾಗುವುದು ಸಹಜ. ಇಂತಹ ಸಂದರ್ಭದಲ್ಲಿ ಆತಂಕಪಡುವ ಅಗತ್ಯವಿಲ್ಲ! ಹಾಗಾದ್ರೆ, ಹಣವನ್ನು ಮರಳಿ ಪಡೆಯಲು ಏನು ಮಾಡಬೇಕು?
UPI
ಯುಪಿಐAI Image
Updated on

ಯುಪಿಐ ಮೂಲಕ ಹಣ ಕಳುಹಿಸುವಾಗ ಹಲವು ಬಾರಿ ತಾಂತ್ರಿಕ ದೋಷದಿಂದಾಗಿ ಪೇಮೆಂಟ್ ಫೇಲ್ ಆಗುತ್ತದೆ. ಆದರೆ, ಅಕೌಂಟ್ ನಿಂದ ದುಡ್ಡು ಕಟ್ ಆಗಿರುತ್ತದೆ. ಈ ವೇಳೆ ಗಾಬರಿ ಆಗೋವರೆ ಹೆಚ್ಚು. ಇಂತಹ ಸಮಯದಲ್ಲಿ ಗಾಬರಿಯಾಗುವ ಅಗತ್ಯವಿಲ್ಲ. ಯಾಕಂದ್ರೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಯಮಗಳ ಪ್ರಕಾರ ನಿಮ್ಮ ಹಣ ಸುರಕ್ಷಿತವಾಗಿ ಮರಳಿ ಸಿಗುತ್ತದೆ. ಅಕಸ್ಮಾತ್, ಹಣ ಬರೋದು ಲೇಟ್ ಆದರೆ, ಕಥೆ ಏನು? ಇಲ್ಲಿದೆ ಆ ಕುರಿತ ವರದಿ:

ಆರ್‌ಬಿಐ ನಿಯಮ ಹೇಳೋದು ಏನು?

ಭಾರತೀಯ ರಿಸರ್ವ್ ಬ್ಯಾಂಕ್ ಗ್ರಾಹಕರ ಹಿತರಕ್ಷಣೆಗಾಗಿ 'ಟರ್ನ್ ಅರೌಂಡ್ ಟೈಮ್' ನಿಯಮವನ್ನು ರೂಪಿಸಿದೆ. ಅದರ ಪ್ರಕಾರ, ಯುಪಿಐ ಪಾವತಿ ವಿಫಲವಾದರೆ, ಕಡಿತಗೊಂಡ ಹಣವು ಗರಿಷ್ಠ ಟಿ+1 ದಿನದೊಳಗೆ (T+1 Day - ಅಂದರೆ ವಹಿವಾಟು ನಡೆದ ಮರುದಿನದೊಳಗೆ) ನಿಮ್ಮ ಖಾತೆಗೆ ಸ್ವಯಂಚಾಲಿತವಾಗಿ ಮರಳಿ ಜಮೆಯಾಗಬೇಕು. ಒಂದು ವೇಳೆ ವಿಫಲವಾದ ವಹಿವಾಟಿನ ಹಣವು ಕಡಿತಗೊಂಡ ದಿನದಿಂದ 5 ದಿನಗಳ ಒಳಗಾಗಿ (T+5 Days) ನಿಮ್ಮ ಖಾತೆಗೆ ಮರಳಿ ಬರದಿದ್ದರೆ, ಬ್ಯಾಂಕ್ ಗ್ರಾಹಕರಿಗೆ ಪ್ರತಿದಿನ 100 ರೂಪಾಯಿ ದಂಡವನ್ನು ಪರಿಹಾರವಾಗಿ ನೀಡಬೇಕಾಗುತ್ತದೆ. ಆದರೆ, ಸಾಮಾನ್ಯವಾಗಿ ಬ್ಯಾಂಕಿಂಗ್ ವ್ಯವಸ್ಥೆಯು ತಾಂತ್ರಿಕ ದೋಷವನ್ನು ಗುರುತಿಸಿ 1 ರಿಂದ 2 ಗಂಟೆಗಳ ಒಳಗೆ ನಿಮ್ಮ ಹಣವನ್ನು ನಿಮ್ಮ ಖಾತೆಗೆ ಸ್ವಯಂಚಾಲಿತವಾಗಿ ಜಮೆ ಮಾಡುತ್ತದೆ. ಅಕಸ್ಮಾತ್, ಹಣ 24 ಗಂಟೆ ಕಳೆದರೂ ಬರೆದೆ ಹೋದರೆ,

ಹಣವನ್ನು ಮರಳಿ ಪಡೆಯಲು ಮಾಡಬೇಕಾದ ಹಂತಗಳು:

ಸ್ವಯಂಚಾಲಿತವಾಗಿ ಹಣ ಬರದೇ ಇದ್ದಲ್ಲಿ, ತಕ್ಷಣವೇ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಿ:

  • ಹಂತ 1: ಯುಪಿಐ ಆಪ್‌ನಲ್ಲಿ ದೂರು ದಾಖಲಿಸಿ ನೀವು ಬಳಸಿದ ಯುಪಿಐ ಆಪ್ (Google Pay, PhonePe, Paytm ಅಥವಾ Bhim App) ತೆರೆಯಿರಿ. ನಿಮ್ಮ 'Transaction History'ಗೆ ಹೋಗಿ, ವಿಫಲವಾದ ವಹಿವಾಟನ್ನು ಆಯ್ದುಕೊಳ್ಳಿ ಮತ್ತು ಅಲ್ಲಿರುವ 'Raise a Dispute' ಅಥವಾ 'Contact Support' ಆಯ್ಕೆಯನ್ನು ಬಳಸಿ ದೂರು ನೀಡಿ.

  • ಹಂತ 2: ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿಯುಪಿಐ ಆಪ್‌ನಲ್ಲಿ ಪರಿಹಾರ ಸಿಗದಿದ್ದರೆ, ನಿಮ್ಮ ಬ್ಯಾಂಕಿನ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿ ದೂರು ನೀಡಿ. ನಿಮ್ಮ ವಹಿವಾಟಿನ ಯುಪಿಐ ರೆಫರೆನ್ಸ್ ಸಂಖ್ಯೆ (UPI Reference Number / UTR) ಅನ್ನು ಅವರಿಗೆ ನೀಡಿ ದೂರು ಐಡಿಯನ್ನು ಪಡೆದುಕೊಳ್ಳಿ.

  • ಹಂತ 3: ಎನ್‌ಪಿಸಿಐ ಪೋರ್ಟಲ್‌ನಲ್ಲಿ ದೂರು ನೀಡಿಯುಪಿಐ ವ್ಯವಸ್ಥೆಯನ್ನು ನಿರ್ವಹಿಸುವ ರಾಷ್ಟ್ರೀಯ ಪಾವತಿ ನಿಗಮ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಅಲ್ಲಿ 'Get in Touch' ವಿಭಾಗದಲ್ಲಿ 'UPI Dispute Redressal Mechanism' ಕ್ಲಿಕ್ ಮಾಡಿ, ನಿಮ್ಮ ವಹಿವಾಟಿನ ವಿವರಗಳನ್ನು ಭರ್ತಿ ಮಾಡಿ ನೇರವಾಗಿ ದೂರು ಸಲ್ಲಿಸಿ.

UPI
Credit Score ಕಡಿಮೆಯಿದ್ರೂ ಈ ರೀತಿ ಬ್ಯಾಂಕಿನಿಂದ ಸಾಲ ಪಡೆಯಬಹುದು! ಹೇಗೆ ಗೊತ್ತಾ?

ಆದರೂ ಹಣ ಬರದಿದ್ದರೆ ಏನು ಮಾಡಬೇಕು?

ಒಂದು ವೇಳೆ ಬ್ಯಾಂಕ್‌ಗೆ ದೂರು ನೀಡಿ 30 ದಿನಗಳಾದರೂ ನಿಮ್ಮ ಸಮಸ್ಯೆ ಬಗೆಹರಿಯದಿದ್ದರೆ ಅಥವಾ ಬ್ಯಾಂಕ್ ಸೂಕ್ತ ಪ್ರತಿಕ್ರಿಯೆ ನೀಡದಿದ್ದರೆ, ನೀವು ನೇರವಾಗಿ ಆರ್‌ಬಿಐ ಒಂಬುಡ್ಸ್‌ಮನ್ ಅಥವಾ ಆರ್‌ಬಿಐ ದೂರು ನಿರ್ವಹಣಾ ವ್ಯವಸ್ಥೆ ಪೋರ್ಟಲ್ ಮೂಲಕ ಉಚಿತವಾಗಿ ಆನ್‌ಲೈನ್ ದೂರನ್ನು ದಾಖಲಿಸಬಹುದು. 

ಏತನ್ಮಧ್ಯೆ, ಪಾವತಿ ವಿಫಲವಾದ ತಕ್ಷಣ ಅದೇ ವ್ಯಕ್ತಿಗೆ ಮತ್ತೊಮ್ಮೆ ಹಣ ಕಳುಹಿಸುವ ಮುನ್ನ ಕನಿಷ್ಠ 5 ರಿಂದ 10 ನಿಮಿಷ ಕಾಯುವುದು ಉತ್ತಮ. ಕೆಲವೊಮ್ಮೆ ಬ್ಯಾಂಕ್ ಸರ್ವರ್ ನಿಧಾನವಾಗಿದ್ದಾಗ ಹಣ ತಡವಾಗಿ ಜಮೆಯಾಗುತ್ತದೆ. ಹಾಗಾಗಿ, ಬ್ಯಾಂಕಿನ ಸರ್ವರ್ ಡೌನ್ ಇದ್ದಾಗ ದೊಡ್ಡ ಮೊತ್ತದ ಹಣವನ್ನು ಕಳುಹಿಸಬೇಡಿ. ಜೊತೆಗೆ, ನಿಮ್ಮ ಇಂಟರ್ನೆಟ್ ಸಂಪರ್ಕ ಸರಿಯಾಗಿ ಇಲ್ಲದಿದ್ದರೆ ಯುಪಿಐ ವಹಿವಾಟು ನಡೆಸಬೇಡಿ.

UPI
UPI ಪಾವತಿಗಳಿಗೆ ಶುಲ್ಕ ವಿಧಿಸಲ್ಲ: ಯಾರಿಗೆ MDR ವಿಧಿಸಲಾಗುತ್ತದೆ ಎಂಬುದನ್ನು ಬಹಿರಂಗಪಡಿಸಿದ ಕೇಂದ್ರ ಸರ್ಕಾರ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com